ಐತಿಹಾಸಿಕ ಪ್ರಸಿದ್ಧ 400 ವರ್ಷದ ದಂತಕತೆಯನ್ನು ಹೊಂದಿರುವ ತೂಗುಯ್ಯಾಲೆಯ ತೊಟ್ಟಿಲ ಮಾತೆ ಶ್ರೀ ಯಕ್ಷಮ್ಮ ದೇಗುಲದ ಜಾತ್ರಾ ಮಹೋತ್ಸವ ಸಂಪನ್ನಗೊಂಡಿದೆ. “400 ವರುಷ ಇತಿಹಾಸ ಇರುವ ಕರಗುಡಿ ಶ್ರೀ ವರಬ್ರಹ್ಮ, ಶ್ರೀ ಸ್ವರ್ಣ ಯಕ್ಷಿ ಮತ್ತು ನಾಗ ದೇವತೆ ಸ-ಪರಿವಾರ ದೇವರುಗಳ ವಾರ್ಷಿಕ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ವಿಧಾನಗಳೊಂದಿಗೆ ಸಂಪನ್ನಗೊಂಡಿತು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ, ಸರಿ ಸುಮಾರು 400 ವರ್ಷಗಳ ಇತಿಹಾಸಿಯಾಗಿರುವ ಐತಿಹಾಸಿಕ ಪುರಾಣ ಪ್ರಸಿದ್ಧ ಮೊಳಹಳ್ಳಿ ಕರಗುಡಿ ಶ್ರೀ ವರಬ್ರಹ್ಮ, ಶ್ರೀ ಸ್ವರ್ಣ ಯಕ್ಷಿ, ನಾಗದೇವತೆ ಸಹ ಪರಿವಾರ ಗಣಗಳ ವಾರ್ಷಿಕ ಜಾತ್ರಾ ಮಹೋತ್ಸವ (ಹಾಲು ಹಬ್ಬ ಸೇವೆ) ಕಲಾ ಹೋಮ, ಮಹಾ ಅನ್ನ ಸಂತರ್ಪಣೆ, ಗಂಡಸೇವೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಫೆಬ್ರವರಿ 28/02/2023 ಮಂಗಳವಾರ ಮತ್ತು ಮಾರ್ಚ್- 01/03 /2023 ಬುಧವಾರ ವರೆಗೂ ಧಾರ್ಮಿಕ ವಿವಿಧ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ವಿಧಿ ವಿಧಾನಗಳು ಸಂಪನ್ನಗೊಂಡಿದೆ. ಕಾರ್ಯಕ್ರಮದಲ್ಲಿ ಅರ್ಚಕರೊಂದದವರು ವಿಶೇಷವಾದಂತಹ ಕಲಾ ಹೋಮ ಸೇವೆ ಮತ್ತು ವಿಶೇಷ ಪೂಜಾ ವಿಧಿ, ವಿಧಾನವನ್ನು ಶ್ರೀಧರ್ ಉಡುಪರು ಮತ್ತು ಶಿವರಾಮ ಉಡುಪರ ಮುಂದಾಳತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು. 28.02.2023ನೇ ಮಂಗಳವಾರ ಬೆಳಿಗ್ಗೆ – ಶ್ರೀ ವರಬ್ರಹ್ಮ ಮತ್ತು ನಾಗದೇವತೆಗೆ ಕಲಾ ಹೋಮ ಸೇವೆ, ಹಾಗೂ ಅದೇ ದಿನ ಸಂಜೆ 4 ಗಂಟೆಗೆ ಸರಿಯಾಗಿ – ಶ್ರೀ ಸ್ವರ್ಣ ಯಕ್ಷಿ ಮತ್ತು ಸಹ ಪರಿವಾರ ಗಣಗಳಿಗೆ ಕಲಾ ಹೋಮ ಸೇವೆ ವಿಜೃಂಭಣೆಯಿಂದ ಜರುಗಿತು. ಹಾಗೂ ಜಾತ್ರಾ ಪ್ರಯುಕ್ತ ವಿಶೇಷ ಸನ್ನಿಧಾನದಲ್ಲಿ ತುಲಾಭಾರ ಸೇವೆ ವಿಶೇಷವಾಗಿ ನಡೆಯಿತು. ಅದಲ್ಲದೆ ಶ್ರೀ ಯಕ್ಷಮ್ಮ ದೇಗುಲಕ್ಕೆ ಹರಿಕೆ ರೂಪದಲ್ಲಿ, ಸನ್ನಿಧಾನಕ್ಕೆ ನೀಡಿದಂತಹ ಪ್ರಕಾರ, ಅಂತಹ ಮಹಾ ಭಕ್ತಾಭಿಮಾನಿಗಳನ್ನ ಅತಿಥಿ ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಆಗಮಿಸಿದ ಮೊಳಹಳ್ಳಿಯ ಉದ್ಯಮಿ ಎಮ್.ದಿನೇಶ್ ಹೆಗ್ಡೆ ಮೊಳಹಳ್ಳಿ ಹಾಗೂ ಮೊಳಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಉದಯಕುಮಾರ್ ಶೆಟ್ಟಿ ಅವರು ವರ್ಷ ಪ್ರತಿ ಅನ್ನದಾನ ನೀಡಿದ ಸೇವಾಕರ್ತರಿಗೆ ಹಾಗೂ ಹೂವಿನ ಅಲಂಕಾರ ಮಾಡಿದವರಿಗೆ ಮತ್ತು ಧ್ವನಿ ವರ್ಧಕ ಸೇವೆ, ಬೆಳಕಿನ ಸೇವೆ, ಶಾಮಿಯಾನ ಸೇವೆ ನೀಡಿದವರಿಗೆ, ಸ್ವರ ಸೇವೆ ನೀಡಿದವರಿಗೆ, ರಾಜ್ಯ ಪ್ರಶಸ್ತಿ ಪುರಸ್ಕೃತ, ಖ್ಯಾತ ಈಜು ಪಟು ರಾಜಶೇಖರ್ ಮಾಸ್ತಿ ಕಟ್ಟೆ, ಕುಮಾರಿ ಶರಣ್ಯ ಶೆಟ್ಟಿ ಕಾಜಾಡಿ ಮನೆ, ವಿದ್ಯಾರ್ಥಿನಿ ಶ್ರೀಯಾ ಕುಮಾರಿ, ಹೀಗೆ ವಿವಿಧ ಸೇವೆಗಳನ್ನು ನೀಡಿದಂತಹ ಸಾಧಕರನ್ನು ವಿಶೇಷವಾಗಿ ನಾಗದೇವತೆ ದೇವಸ್ಥಾನದ ಮುಂಭಾಗದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಎಮ್.ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡುತ್ತಾ “ದೇಗುಲಗಳ ಅಭಿವೃದ್ಧಿಗೆ ಭಕ್ತಾದಿಗಳ ನೆರವು ಅತ್ಯಗತ್ಯ. ಮನುಷ್ಯನ ಭಕ್ತಿಯು ದೇಹದಲ್ಲಿನ ಪಾರದರ್ಶಕತೆಯನ್ನು ಸೂಚಿಸುತ್ತದೆ, ಸಾಧಕರ ಸನ್ಮಾನ ಕಾರ್ಯಕ್ರಮ ಬಹಳ ವಿಶೇಷವಾದ ಕ್ರಮ, ಗ್ರಾಮೀಣಮಟ್ಟದ ದೇವಸ್ಥಾನದಲ್ಲಿ ಇಂತಹ ಕಾರ್ಯ ನಿಜಕ್ಕೂ ಸಾಧನೆ, ಅಪಾರ ಶಕ್ತಿಶಾಲಿಯಾಗಿರುವ ಯಕ್ಷಿ ಮಾತೆಯು ಸಮಸ್ತ ಕುಟುಂಬ ಅಭಿಮಾನಿಗಳನ್ನು ರಕ್ಷಿಸಲಿ ದೇವರು ಸರ್ವತೋಮುಖ ಅಭಿವೃದ್ಧಿಯಲ್ಲಿ ಸಮಸ್ತ ಕುಟುಂಬಸ್ಥರ ಪಾತ್ರ ವಿಸ್ಮರಣೀಯ ಎಂದು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ ಹಿತನುಡಿ ವ್ಯಕ್ತಪಡಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಉದಯ್ ಕುಮಾರ್ ಶೆಟ್ಟಿ ಅವರು ಮಾತನಾಡುತ್ತಾ ದೇಗುಲದ ಮೂಲ ಭೂತ ಸೌಕರ್ಯ ಹಾಗೂ ದೇಗುಲಕ್ಕೆ ರಸ್ತೆ ಸಂಚಾರವನ್ನು ಅನುವು ಮಾಡಿ ಕೊಡಲಾಗುವುದು ಎಂದು ಮುಕ್ತವಾಗಿ ವ್ಯಕ್ತಪಡಿಸಿದರು. ದೇಗುಲಗಳ ಅಭಿವೃದ್ಧಿಗೆ ಕುಟುಂಬಸ್ಥರ ಸಹಕಾರ ಬೆಟ್ಟದಷ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು. ಶ್ರೀಮಂತರಿಗೆ ಹಣ ಕೊಡುವಂತಹ ಮನಸ್ಸು ಬಹಳ ವಿರಳ, ಆದರೆ ಇದ್ದವರು ಕಷ್ಟಪಟ್ಟು ಕೊಟ್ಟಂತಹ ದೇಣಿಗೆ ಸನ್ನಿಧಾನಕ್ಕೆ ಅರ್ಪಣೆಯಾಗುವ ಕ್ಷಣ ಮನಸ್ಸು ತುಂಬಿ ಬಂದಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮುಂದಿನ (2024 ಸಾಲಿನ) ವರ್ಷದ ಜಾತ್ರಾ ಮಹೋತ್ಸವಕ್ಕೆ ಅನ್ನದಾನ ಸೇವೆ ಶ್ರೀಮತಿ ವನಜ ಕುಶಾಲ್ ಶೆಟ್ಟಿ ಮಕ್ಕಳು ಕಾಜಾಡಿ ಮನೆ ಮತ್ತು ಹೂವಿನ ಅಲಂಕಾರ ಶ್ರೀಮತಿ ಸಾದಮ್ಮ ಶೆಟ್ಟಿ ಮತ್ತು ಮಕ್ಕಳು
ಕೊರಾಳ, ಸ್ವರ ಸೇವೆ ಶ್ರೀಮತಿ ಪಾರ್ವತಿ ಮಹಾಬಲ ಶೆಟ್ಟಿ ಕೊರಾಳ, ಡಮರುಗ ಸೇವೆ ಸುಕುಮಾರ್ ಶೆಟ್ಟಿ ಉಡುಪನ ಜಡ್ಡು, ಧ್ವನಿವರ್ಧಕ ಮತ್ತು ಬೆಳಕಿನ ಸೇವೆ ಶ್ರೀಮತಿ ಗುಲಾಬಿ ಶಕ್ತಿ ಮತ್ತು ಮಕ್ಕಳು ಹೊಸಿಮನೆ, ಜೆಡ್ಡಿನ ಮುಲ್ಲಿ.
ನೂತನ ಗೆಂಡದ ಸ್ಥಾನ ರಚನ ಸೇವೆ ಶ್ರೀ ಅನಂತ ಶೆಟ್ಟಿ ಮತ್ತು ಮಕ್ಕಳು, ಮೊಮ್ಮಕ್ಕಳು ಕಾಜಾಡಿ ಮನೆ, ಮೊಳಹಳ್ಳಿ ಹೀಗೆ ವಿವಿಧ ಸೇವೆಗಳನ್ನ ವಿಶೇಷವಾಗಿ ವಿಂಗಡಣೆ ಮಾಡಲಾಯಿತು. ಶ್ರೀ ವರಬ್ರಹ್ಮ, ಶ್ರೀ ಸ್ವರ್ಣ ಯಕ್ಷಿ, ಸಪರಿವಾರ ದೇವಸ್ಥಾನಗಳ ಅನ್ನದಾನ ಸೇವೆಯು 2033 ರವರೆಗೆ ಮುಂಗಡ ಹೆಸರನ್ನ ನೋಂದಾಯಿಸಿಕೊಂಡಿದ್ದಾರೆ. ಪ್ರತಿವರ್ಷದಂತೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ನಂಬಿದಂತಹ ಕುಟುಂಬ ವರ್ಗದವರು, ಭಕ್ತಾಭಿಮಾನಿಗಳು, ಊರವರು ಪರವೂರವರು ಹಾಗೂ ಸಮಸ್ತ ಭಕ್ತಾಭಿಮಾನಿಗಳು ಆಗಮಿಸಿದರು. ದೇಗುಲದ ಜಾತ್ರಾ ಮಹೋತ್ಸವದ ಕೊನೆಯಲ್ಲಿ ಕುರಿಸೇವೆ ಮತ್ತು ಕೋಳಿ ಸೇವೆ ನೀಡುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ವರ್ಷ ಪ್ರತಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಭಕ್ತಾದಿಗಳು ದೇವರ ದರ್ಶನವನ್ನು ಪಡೆಯುವುದರೊಂದಿಗೆ ಪೊಳಕಿತರಾದರು. ಧಾರ್ಮಿಕ ಕಾರ್ಯಕ್ರಮವನ್ನು ದೇವಸ್ಥಾನದ ಮೊಕ್ತೇಸರರಾದ ಕಟ್ಟೆ ಮನೆ ರವೀಂದ್ರ ಶೆಟ್ಟಿ ಅವರು ಸ್ವಾಗತಿಸಿ, ಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ಪತ್ರಕರ್ತರು, ವರದಿಗಾರರು, ದೇಗುಲದ ಧಾರ್ಮಿಕ ಟ್ರಸ್ಟ್ ಕಾರ್ಯದರ್ಶಿ ಕೆ.ಸಂತೋಷ್ ಶೆಟ್ಟಿ ಕಾಜಾಡಿ ಮನೆ ಮೊಳಹಳ್ಳಿ ಅವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಶರತ್ ಶೆಟ್ಟಿ ಕೊರಾಳ, ಸಂತೋಷ್ ಶೆಟ್ಟಿ, ಕೀರ್ತಿ ಶೆಟ್ಟಿ, ಪ್ರಜ್ವಲ್ ಶೆಟ್ಟಿ, ನಾಗರಾಜ್ ಶೆಟ್ಟಿ ಕಾಜಾಡಿ ಮನೆ ಸಹಕರಿಸಿದರು.
ವರದಿ : ಕೆ.ಸಂತೋಷ್ ಶೆಟ್ಟಿ ಮೊಳಹಳ್ಳಿ.