ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಮತ್ತು ಯಕ್ಷದ್ರುವ ಪಟ್ಲ ಪೌಂಡೇಷನ್ ದುಬೈ ಘಟಕದ ವತಿಯಿಂದ “ದುಬೈ ಯಕ್ಷೋತ್ಸವ-2023 – ವಿಶ್ವ ಪಟ್ಲ ಸಂಭ್ರಮ” ಜೂನ್ 11 ರಂದು ದುಬೈನಲ್ಲಿ ಜರಗಲಿದೆ. ನಗರದ ಕರಾಮ ಇಂಡಿಯನ್ ಸ್ಕೂಲ್ನ ಶೇಖ್ ರಷೀದ್ ಸಭಾಂಗಣದಲ್ಲಿ ಜೂನ್ 11 ರಂದು ಮಧ್ಯಾಹ್ನ 2 ಗಂಟೆಯಿಂದ ವಿಶ್ವದಲ್ಲಿ ಇರುವ ಪಟ್ಲ ಪೌಂಡೇಷನ್ ನ 38 ಘಟಕದ ಪದಾಧಿಕಾರಿಗಳ ಸಮ್ಮುಖದಲ್ಲಿ “ವಿಶ್ವ ಪಟ್ಲ ಸಂಭ್ರಮ” ಜರಗಲಿದೆ.
ಯಕ್ಷಶ್ರೀ ರಕ್ಷ ಗೌರವ :
ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇವರು ದುಬೈ ಮತ್ತು ತಾಯಿನಾಡಿನ ಯಕ್ಷಗಾನ ರಂಗದ ಸಾಧಕರೊಬ್ಬರನ್ನು ಗುರುತಿಸಿ ನೀಡುವ “ಯಕ್ಷಶ್ರೀ ರಕ್ಷಾ ಗೌರವ” ಪ್ರಶಸ್ತಿಯನ್ನು ಕಲಾವಿದರಾದ ಪಟ್ಲ ಗುತ್ತು ಮಹಾಬಲ ಶೆಟ್ಟಿಯವರಿಗೆ ಗಣ್ಯತಿ ಗಣ್ಯರ ಸಮ್ಮುಖದಲ್ಲಿ ನೀಡಲಾಗುವುದು. ಮುಖ್ಯ ಅತಿಥಿಗಳಾಗಿ ಪಟ್ಲ ಪೌಂಡೇಷನ್ ಕೇಂದ್ರ ಘಟಕದ ಗೌರವಾಧ್ಯಕ್ಷರಾದ ಉದ್ಯಮಿ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ, ಘಟಕದ ಪ್ರದಾನ ಸಂಚಾಲಕರಾದ ಶಶಿಧರ ಶೆಟ್ಟಿ ಬರೋಡ, ಐಕಳ ಹರೀಶ್ ಶೆಟ್ಟಿ, ಪಟ್ಲ ಘಟಕ ಯುಎಇಯ ಗೌರವಾಧ್ಯಕ್ಷರಾದ ಪುತ್ತಿಗೆ ವಾಸುದೇವ ಭಟ್, ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಭೀಮ ಜ್ಯುವೆಲ್ಲರ್ಸ್ ನ ಯು.ನಾಗರಾಜ ರಾವ್, ಉದ್ಯಮಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಹರೀಶ್ ಶೇರಿಗಾರ್, ಬಿಲ್ಲವಾಸ್ ನ ಪ್ರಭಾಕರ್ ಸುವರ್ಣರವರು ಉಪಸ್ಥಿತರಿರುವರು.
“ದಶಾವತಾರ” ಯಕ್ಷಗಾನ ಪ್ರದರ್ಶನ :
ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ಆರು ವರ್ಷದ ಬಾಲ ಕಲಾವಿದರಿಂದ ಹಿಡಿದು ಅರುವತ್ತು ವರ್ಷದ ಕಲಾವಿದರು ಹಾಗೂ ಊರಿನ ಸುಪ್ರಸಿದ್ಧ ಹಿಮ್ಮೆಳ ಕಲಾವಿದರಿಂದ ಕೂಡುವಿಕೆಯಿಂದ “ದಶಾವತಾರ” ಯಕ್ಷಗಾನ ಪ್ರದರ್ಶನವಾಗಲಿದೆ. ಈ ಯಕ್ಷಗಾನ ಪ್ರದರ್ಶನದಲ್ಲಿ ದುಬೈ ಯಕ್ಷಗಾನದಲ್ಲೇ ದಾಖಲೆಯ 109 ಪಾತ್ರಗಳು, ವಿಶೇಷ ದೃಶ್ಯ- ಬೆಳಕಿನ ಸಂಯೋಜನೆ ಮತ್ತು ಏಕಕಾಲದಲ್ಲಿ ರಂಗದಲ್ಲಿ 10 ರಿಂದ20 ಪಾತ್ರಗಳ ವಿಶೇಷ ದೃಶ್ಯ ಸಂಯೋಜನೆಯೊಂದಿಗೆ ದಶಾವತಾರ ಪ್ರಸಂಗ ಪ್ರದರ್ಶಣಗೊಳ್ಳಲಿದೆ.
ತಾಯ್ನಾಡಿನ ವಿಶೇಷ ಅತಿಥಿ ಕಲಾವಿದರಾಗಿ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಮತ್ತು ಗಾನಸುರಭಿ ರವಿಚಂದ್ರ ಕನ್ನಡಿಕಟ್ಟೆ ಬಾಗವತರಾಗಿ ಯುಎಇಯ ಯಕ್ಷಾಭಿಮಾನಿಗಳನ್ನು ರಂಜಿಸಲಿದ್ದರೆ, ಚೆಂಡೆ- ಮದ್ದಲೆಯಲ್ಲಿ ಪದ್ಮನಾಭ ಉಪಾಧ್ಯಾಯ, ಚೈತನ್ಯ ಕೃಷ್ಣ ಪದ್ಯಾಣ, ವಸ್ತ್ರ ಅಲಂಕಾರದಲ್ಲಿ ಗಂಗಾಧರ ಶೆಟ್ಟಿಗಾರ್ ಕಿನ್ನಿಗೋಳಿ, ನಿತಿನ್ ಕುಂಪಲ, ಮನೋಜ್ ಶೆಟ್ಟಿಗಾರ್ ಹಳೆಯಂಗಡಿಯವರು ಬಾಗವಹಿಸಲಿದ್ದರೆ. ಯುಎಇಯ ಕಲಾವಿದರಾಗಿ ಅಕ್ಷಯ ಭಟ್ ಎಲ್ಲೂರು, ಅಥರ್ವ್ ವಸಂತ ಶೆಟ್ಟಿ, ಅದಿತಿ ದಿನೇಶ್ ಶೆಟ್ಟಿ ಕೊಟ್ಟಿಂಜ, ಅನನ್ಯ ವೇದವ್ಯಾಸ, ಅರುಂದತಿ ಮನೋಹರ್ ಪದ್ಮಶಾಲಿ, ಆದಿತ್ಯ ದಿನೇಶ್ ಶೆಟ್ಟಿ ಕೊಟ್ಟಿಂಜ, ಆನಂದ ಸಾಲ್ಯಾನ್ ಕಿನ್ನಿಗೋಳಿ, ಆರಾಧಾನ ಭಟ್ ಎಲ್ಲೂರು, ಆಶಿತ್ ಎ ರಾಯಿ, ಇಷಿತ ಶೇಖರ್ ಪೂಜಾರಿ, ಐಶಾನಿ ದೀಪಕ್ ಕುಮಾರ್, ಕಾರ್ತಿಕ್ ಪ್ರಶಾಂತ್ ಆಚಾರ್ಯ, ಕಿಶನ್ ಪೂಜಾರಿ, ಕೃಷ್ಣಪ್ರಸಾದ್ ರಾವ್ ಸುರತ್ಕಲ್, ಗಿರೀಶ್ ನಾರಾಯಣ ಕಾಟಿಪಳ್ಳ, ಚರಣ್ ರಾಜ್ ಅರ್ಲಪದವು, ಜೀವನ್ ಕ್ರಾಸ್ತ ಪುತ್ತೂರು, ದಿಯ ಕಿರಣ್ ಕದ್ರಿ, ದಿಯಾ ಗೋಹನ್ ವಲ್ಲಬನ್, ದಿಶಾ ಕಿರಣ್ ಕದ್ರಿ, ನಯೋಮಿ ಸಾಯಿನಾಥ್ ಶೆಟ್ಟಿ, ನೀಲೆಶ್ ನಾರಾಯಣ ಶೆಟ್ಟಿ, ಪ್ರಭಾಕರ ಡಿ.ಸುವರ್ಣ ಕರ್ನಿರೆ, ಪ್ರಿಶಾ ಸಂತೋಷ್ ಶೆಟ್ಟಿ, ಪ್ರಿಶಾ ಸೀತಾರಾಮ ಶೆಟ್ಟಿ, ಬಾಲಕೃಷ್ಣ ಡಿ.ಶೆಟ್ಟಿಗಾರ್ ಕಿನ್ನಿಗೋಳಿ, ಭವಾನಿಶಂಕರ ಶರ್ಮ, ಭಾಸ್ಕರ ಸಾಲ್ಯಾನ್ ಐಕಳ, ಮಹೇಶ್ ಮಣಿಪಾಲ, ಯಜ್ವಿನ್ ನಾಗಪ್ಪ ಗೌಡ, ಯಶಸ್ವಿ ಶೇಖರ್ ಪೂಜಾರಿ, ರತಿಕಾ ರತೀಶ್ ಕುಮಾರ್, ರವಿಂದ್ರ ಕುಕ್ಯನ್ ಹೊಸಬೆಟ್ಟು, ವಿದಾತ್ರಿ ಕೃಷ್ಣಪ್ರಸಾದ್ ಸುರತ್ಕಲ್, ವೆಂಕಟೇಶ ಶಾಸ್ತ್ರಿ ಪುತ್ತಿಗೆ, ವೈಷ್ಣವಿ ಮನೋಹರ್ ಪದ್ಮಶಾಲಿ, ಶರಣ್ಯ ಭಾಸ್ಕರ ಸಾಲ್ಯಾನ್, ಶರಣ್ಯ ವೇದವ್ಯಾಸ, ಶರತ್ ಕುಡ್ಲ, ಶೇಖರ್ ಡಿ.ಶೆಟ್ಟಿಗಾರ್ ಕಿನ್ನಿಗೋಳಿ, ಶೈವಿ ಪ್ರಭಾಕರ್ ಪೂಜಾರಿ, ಶ್ರಿನಿಕಾ ರಮಾನಂದ ಶೆಟ್ಟಿ, ಶ್ರೀಶ ಪ್ರಭಾಕರ ಪೂಜಾರಿ, ಶ್ರೀಶ್ ವಿಜಯ ಆಚಾರ್ಯ, ಸತೀಶ ಶೆಟ್ಟಿಗಾರ್ ವಿಟ್ಲ, ಸಮಂತ ಗಿರೀಶ್ ಕಾಟಿಪಳ್ಳ, ಸಾಗರ್ ಆಚಾರ್ಯ, ಸಾತ್ವಿ ನಿತ್ಯಾನಂದ ಶೆಟ್ಟಿ, ಸಾತ್ವಿಕ್ ಕೊಂಚಾಡಿ, ಸಾನ್ವಿ ನಿತ್ಯಾನಂದ ಶೆಟ್ಟಿ, ಸಾನ್ವಿ ಮೋಹನ್ ಗುಜರನ್, ಸೀತಾರಾಮ ಶೆಟ್ಟಿ, ಸುಚಿತ್ರ ಕೊಕ್ಕಡ, ಸೌಜನ್ಯ ಪ್ರಭಾಕರ ಶೆಟ್ಟಿ, ಸೌರಭ್ ಭಾಸ್ಕರ ಸಾಲ್ಯಾನ್, ಸ್ವಾತಿ ಶರತ್ ಸರಳಾಯ ರಂಗದಲ್ಲಿ ಮಿಂಚಲಿದ್ದಾರೆ.
ರಂಗಸಜ್ಜಿಕೆಯಲ್ಲಿ ಭಾಸ್ಕರ್ ಪೂಜಾರಿ ನೀರುಮಾರ್ಗ, ಪ್ರಭಾಕರ್ ಪೂಜಾರಿ, ಸೌಮ್ಯ ಭಾಸ್ಕರ್ ಸಾಲ್ಯಾನ್, ಅಮೃತ ಪ್ರಭಾಕರ್ ಪೂಜಾರಿ, ನೈಪಥ್ಯ ವಿಭಾಗದಲ್ಲಿ ಪ್ರತಿಮ ಸಾಯಿನಾಥ ಶೆಟ್ಟಿ, ಸುಜಯ ವಿಜಯ ಆಚಾರ್ಯ, ಸುಕನ್ಯ ವೇದವ್ಯಾಸ ಕಾಮತ್, ಶೈಲಜಾ ನಿತ್ಯಾನಂದ ಶೆಟ್ಟಿ, ವಸ್ತ್ರಾಲಂಕಾರದಲ್ಲಿ ನಿತಿನ್ ಶೆಟ್ಟಿಗಾರ್ ಕುಂಜಿಗಿರಿಯವರು ಸಹಕರಿಸಲಿದ್ದಾರೆ. ಕೊಟ್ಟಿಂಜ ದಿನೇಶ್ ಶೆಟ್ಟಿಯವರ ಸಂಯೋಜನೆಯಲ್ಲಿ ಪ್ರಸಂಗದ ನಿರ್ದೇಶನವನ್ನು ಶೇಖರ್ ಡಿ.ಶೆಟ್ಟಿಗಾರ್ ಮತ್ತು ಶರತ್ ಕುಡ್ಲರವರು ಮಾಡಲಿದ್ದರೆ.
ಪ್ರದರ್ಶನದ ವೈಶಿಷ್ಟ್ಯಗಳು :
* ಪೂರ್ವರಂಗದಲ್ಲಿ ಗಣಪತಿ ಕೌತುಕ
* ಸಮದ್ರಮಧ್ಯದಿಂದ ಎದ್ದು ಬರುವ ಮತ್ಸ್ಯಾವತಾರ.
* ಹಿರಣ್ಯಾಕ್ಷನ ಅಟ್ಟಹಾಸವನ್ನು ನಿಲ್ಲಿಸಲು ರಸಾತಳದಿಂದ ಎದ್ದು ಬರುವ ಶ್ವೇತವರಾಹ.
* ಹಿರಣ್ಯ ಕಶ್ಯಪನ ಭವ್ಯ ಅರಮನೆಯ ವಜ್ರಕಂಬದಿಂದೊಡೆದು ಬಿಂಬತೋರುವ ಉಗ್ರನರಸಿಂಹ.
* ವಿಶೇಷ ಸೆಟ್ಟಿಂಗ್ ನಲ್ಲಿ ಅಭೂತಪೂರ್ವ ಏಕಕಾಲದಲ್ಲಿ ರಂಗದಲ್ಲಿ 20 ವೇಷಗಳೊಂದಿಗೆ ದೇವ ದಾನವರ ಸಮುದ್ರಮಥನ – ಯಕ್ಷರಂಗದಲ್ಲೇ ನೂತನವಾಗಿ ಸಂಯೋಜಿಸಿದ ಮಂದರಾದ್ರಿಯನ್ನೆತ್ತುವ ಕೂರ್ಮನ ವೇಷ, ನೋಡ ಬನ್ನಿ.
* ಬಲಿಯನ್ನು ಪಾತಾಳಕ್ಕೊತ್ತುವಲ್ಲಿ ವಾಮನ – ತ್ರಿವಿಕ್ರಮನಾಗಿ ಪ್ರಕಟನಾಗುವ ವಿಶೇಷ ದೃಶ್ಯ.
* ಸಹಸ್ರಬಾಹು – ಕಾರ್ತವೀರ್ಯಾರ್ಜುನನಿಗೆ ಮೋಕ್ಷ ಕರುಣಿಸಲು, ಪರಶುರಾಮನಾಗಿ ಹರಿ ಪ್ರಕಟ.
* ಸೀತಾಪಹಾರ ಮಾಡಿದ ದುರುಳನಾದರೂ ಶಿವಭಕ್ತ ರಾವಣನಿಗೆ ಶ್ರೀರಾಮನ ವಿಶ್ವರೂಪ ದರ್ಶನ.
* ಅಗ್ರಪೂಜಾ ವ್ಯತಿಕರದಲ್ಲಿ ಶಿಶುಪಾಲ – ಅನುಚರರ ದೌರ್ಷ್ಯಕ್ಕೆ ಶ್ರೀಕೃಷ್ಣನಿಂದ ದಿವ್ಯೌಷದ.
* ಬುದ್ಧ – ಕಲ್ಕಿ ಅವತಾರಗಳ ದರ್ಶನ – ದಶಾವತಾರ – ಶ್ರೀ ವಿಷ್ಣುವನ್ನು ಸಹಸ್ರನಾಮಾವಳಿಯಿಂದ ಸ್ತುತಿಸಿ ಕೃತಾರ್ಥರಾಗುವ ಸದವಕಾಶದಿಂದ ವಂಚಿತರಾಗಬೇಡಿ.
1500 ಆಸನಗಳನ್ನು ಹೊಂದಿರುವ ದುಬೈಯ ಶೇಖ್ ರಷೀದ್ ಸಭಾಂಗಣದಲ್ಲಿ ಈಗಾಗಲೇ ಕೆಲವೇ ಕೆಲವು ಟಿಕೆಟ್ ಗಳು ಬಾಕಿ ಇರುವುದರಿಂದ “ವಿಶ್ವ ಪಟ್ಲ ಸಂಭ್ರಮ” ದ ಸಂಭ್ರಮವನ್ನು ನೋಡಲಿಚ್ಚಿಸುವರು ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದು. 0507083537,0529157825,0553912535