ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ಇದರ ವಾರ್ಷಿಕ ಕ್ರೀಡಾಕೂಟವು ಮದನ್ ಲಾಲ್ ಡಿಂಗ್ರಾ ಮೈದಾನ ನಿಗ್ಡಿ ಇಲ್ಲಿ ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ಇವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಈ ಸಂದರ್ಭ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಅಕ್ಷತ್ ಶೆಟ್ಟಿ ನೇತೃತ್ವದ “ಎರ್ಮಾಳ್ ಬಂಟ್ಸ್ ” ತಂಡವು ಪ್ರಶಸ್ತಿಯನ್ನು ಜಯಿಸಿತು. ವೈಷ್ಣವಿ ತಂಡ ದೇಹು ರೋಡ್ ತಂಡ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ “ಎರ್ಮಾಳ್ ಬಂಟ್ಸ್” ತಂಡ ಇಲ್ಲಿ ಜಯವನ್ನು ದಾಖಲಿಸಿರುವುದು ವಿಶೇಷತೆಯಾಗಿದೆ.
ಪುಣೆಯ ಹವ್ಯಾಸಿ ವಾಲಿಬಾಲ್ ಆಟಗಾರ ಅಕ್ಷತ್ ಶೆಟ್ಟಿಯವರು “ವಾಲಿಬಾಲ್ ಅಕ್ಷತ್” ಎಂದೇ ಕರೆಯಲ್ಪಡುತ್ತಿದ್ದು ಪುಣೆಯಲ್ಲಿ ನಡೆಯುವ ವಿವಿಧ ಸಂಘ ಸಂಸ್ಥೆಗಳ ಕ್ರೀಡಾಕೂಟದಲ್ಲಿ ತನ್ನ ಉತ್ಸಾಹಿ ಆಟಗಾರರ ತಂಡದೊಂದಿಗೆ ಸಕ್ರಿಯರಾಗಿ ಪಾಲ್ಗೊಳ್ಳುವ ಹವ್ಯಾಸವನ್ನು ಬೆಳೆಸಿಕೊಂಡಿದ್ದು ಅನ್ಯ ಆಟಗಾರರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ಪುಣೆಯ ವಿವಿಧ ಸಂಘ ಸಂಸ್ಥೆಗಳ ಕ್ರೀಡಾ ಕೂಟದಲ್ಲಿಯೂ ಭಾಗವಹಿಸಿ ತಂಡವನ್ನು ಮುನ್ನಡೆಸಿ ಯಶಸ್ವಿ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಸಂಘದ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆ, ಉಪಾಧ್ಯಕ್ಷರಾದ ಜಗದೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ಬೆಳ್ಳಂಪಳ್ಳಿ, ಕೋಶಾಧಿಕಾರಿ ಸುಧಾಕರ ಶೆಟ್ಟಿ ಪೆಲತ್ತೂರು, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಜಯಾನಂದ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಉಜಿರೆ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ ಕೆ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜ್ಯೋತಿ ವಿ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಆಕಾಶ್ ಶೆಟ್ಟಿ ಉಪಸ್ಥಿತರಿದ್ದು ತಂಡವನ್ನು ಅಭಿನಂದಿಸಿದರು.