ಕುಂದಾಪುರ ಮೂಲದ ಮುವಾಯ್ ಥಾಯ್ ಫೈಟರ್ಗೆ ಮತ್ತೊಂದು ಅಂತಾರಾಷ್ಟ್ರೀಯ ಜಯ ಸಿಕ್ಕಿದೆ. ಕುಂದಾಪುರ ಮೂಲದ ಅನೀಶ್ ಶೆಟ್ಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮುವಾಯ್ ಥಾಯ್ ಫೈಟರ್ ಆಗಿದ್ದು, ಥಾಯ್ಲೆಂಡ್ನ ಪುಕೆಟನ್ ರವಾಯ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮುವಾಯ್ ಥಾಯ್ ಕಿಕ್ ಬಾಕ್ಸಿಂಗ್ ಪಂದ್ಯದಲ್ಲಿ ಜಯಭೇರಿ ಬಾರಿಸಿದ್ದಾರೆ. 68 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅನೀಶ್ ಶೆಟ್ಟಿ ಮುವಾಯ್ ಥಾಯ್ ಫೈಟ್ನಲ್ಲಿ ಸಾಕಷ್ಟು ಅನುಭವವಿರುವ ಎದುರಾಳಿಯನ್ನು ಮಣಿಸಿ ಜಯಗಳಿಸಿದ್ದಾರೆ. ಪ್ರಥಮ ಸುತ್ತಿನಲ್ಲೇ ಫ್ಲೈಯಿಂಗ್ ಕಿಕ್ ಮೂಲಕ ಎದುರಾಳಿಯನ್ನು ನಾಕೌಟ್ ಮಾಡುವ ಮೂಲಕ ಅನೀಶ್ ಭರ್ಜರಿ ಜಯಗಳಿಸಿದ್ದಾರೆ.
Previous Articleಗುರುಪುರ ಗೋಳಿದಡಿ ಗುತ್ತು ಮನೆಯಲ್ಲಿ ಜ.17-19ರವರೆಗೆ ‘ಶ್ರೀ ವರ್ಧಮಾನ’ ಗಡಿಪಟ್ಟ ಸ್ವೀಕಾರದ 12ನೇ ಸಂಭ್ರಮಾಚರಣೆ
Next Article ಯಶಸ್ವಿಯಾಗಿ ನಡೆದ ಚಿಣ್ಣರ ಬಿಂಬ – 20ನೇ ಮಕ್ಕಳ ಉತ್ಸವ