ಪುಣೆ ಬಂಟರ ಸಂಘದ ಯುವ ವಿಭಾಗದ ವತಿಯಿಂದ ಬಾಕ್ಸ್ ಕ್ರಿಕೆಟ್ ಪಂದ್ಯಾಟವು (ಬಂಟ್ಸ್ ಬಾಕ್ಸ್ ಕ್ರಿಕೆಟ್ ಲೀಗ್ ) ಜ .7 ರಂದು ನಗರದ ಗ್ರೀನ್ ಬಾಕ್ಸ್ ಟರ್ಫ್ ,ಭಂಡಾರ್ಕರ್ ಇನ್ಸ್ಟಿಟ್ಯೂಟ್ ,ಲಾ ಕಾಲೇಜು ರೋಡ್ ,ಪುಣೆ ಇಲ್ಲಿ ನಡೆಯಿತು. ಒಟ್ಟು 16 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದು ಅಂತಿಮವಾಗಿ ವೈಷ್ಣವಿ ತಂಡ ಹಾಗೂ ದೇಹು ರೋಡೀಸ್ ತಂಡಗಳು ಫೈನಲ್ ನಲ್ಲಿ ಸೆಣಸಿದ್ದು ವೈಷ್ಣವಿ ತಂಡ ವಿಜೇತ ಟ್ರೋಫಿ ಹಾಗೂ ರೂ 11,111/- ನಗದನ್ನು ಪಡೆದುಕೊಂಡರೆ ರನ್ನರ್ಸ್ ಆಪ್ ತಂಡವಾದ ದೇಹು ರೋಡೀಸ್ ರೂ .7,777/- ನಗದು ಹಾಗೂ ಟ್ರೋಫಿಯನ್ನು ಗಳಿಸಿಕೊಂಡಿತು . ಸುಶಾಂತ್ ಶೆಟ್ಟಿ ಮ್ಯಾನ್ ಆಪ್ ದ ಸೀರಿಸ್ ಪ್ರಶಸ್ತಿ ಗಳಿಸಿದರೆ ನಿಧಿ ಅಜಿತ್ ಹೆಗ್ಡೆ ವಿಮೆನ್ ಆಪ್ ದ ಸೀರೀಸ್ ,ಆರ್ಯನ್ ಕಿಶೋರ್ ಶೆಟ್ಟಿ ಬೆಸ್ಟ್ ಬ್ಯಾಟ್ಸ್ ಮೆನ್ ಹಾಗೂ ಶ್ವೇತಾ ಶೆಟ್ಟಿ ಬೆಸ್ಟ್ ಬೌಲರ್ ಪ್ರಶಸ್ತಿ ಪಡೆದುಕೊಂಡರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪುಣೆ ಬಂಟರ ಸಂಘದ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ಹಾಗೂ ಸಂಘದ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ವಿವೇಕಾನಂದ ಶೆಟ್ಟಿ ಆವರ್ಸೆ ಇಸಾರಮಕ್ಕಿ ಉಪಸ್ಥಿತರಿದ್ದು ಪ್ರಶಸ್ತಿಯನ್ನು ವಿತರಿಸಿದರು .
ಈ ಸಂದರ್ಭ ಪ್ರವೀಣ್ ಶೆಟ್ಟಿ ಪುತ್ತೂರು ಮಾತನಾಡಿ ನಮ್ಮ ಸಂಘದ ಯುವ ವಿಭಾಗ ಉದಯ್ ಶೆಟ್ಟಿಯವರ ನೇತೃತ್ವದಲ್ಲಿ ಈ ಬಾಕ್ಸ್ ಕ್ರಿಕೆಟ್ ಪಂದ್ಯಾಟವನ್ನು ಬೆಳಗ್ಗಿನಿಂದ ಸಂಜೆಯವರೆಗೆ ಯಶಸ್ವಿಯಾಗಿ ಆಯೋಜಿಸಿ ಯುವ ಸಮೂಹವನ್ನು ಒಗ್ಗೊಡಿಸುವ ಕಾರ್ಯವನ್ನು ಮಾಡಿರುವುದಕ್ಕೆ ಹಾರ್ದಿಕವಾಗಿ ಅಭಿನಂದಿಸುತ್ತೇನೆ . ಇಲ್ಲಿ ಭಾಗವಹಿಸಿದ ಎಲ್ಲಾ ತಂಡಗಳೂ ಅಭಿನಂದನಾರ್ಹವಾಗಿದೆ . ಇಲ್ಲಿ ಸೋಲು ಗೆಲುವುಗಳು ಮುಖ್ಯವಲ್ಲ . ಪಂದ್ಯಾಟದಲ್ಲಿ ಭಾಗವಹಿಸುವಿಕೆ ಮುಖ್ಯವಾಗಿದ್ದು ಇಂತಹ ಕಾರ್ಯಕ್ರಮಗಳಿಂದ ಯುವ ಸಮೂಹ ಒಗ್ಗಟ್ಟಿನೊಂದಿಗೆ ಬೆಸೆದುಕೊಂಡು ಸಂಘದ ಮುಖ್ಯವಾಹಿಯಲ್ಲಿ ತೊಡಗಿಸಿಕೊಂಡಂತಾಗುತ್ತದೆ . ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳು ನಿಮ್ಮಿಂದ ನಡೆಯುತ್ತಿರಲಿ . ನಮ್ಮೆಲ್ಲರ ಸಹಕಾರ ನಿಮಗಿದೆ ಎಂದರು . ಯುವ ವಿಭಾಗದ ಕಾರ್ಯಾಧ್ಯಕ್ಷ ಉದಯ್ ಜೆ ಶೆಟ್ಟಿ ಪಂದ್ಯಾಟವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಭಾಗವಹಿಸಿದ ಎಲ್ಲಾ ಆಟಗಾರರಿಗೆ ,ಆರ್ಥಿಕ ಸಹಕಾರ ನೀಡಿದ ದಾನಿಗಳಿಗೆ ,ಭಾಗವಹಿಸಿದ ಅತಿಥಿಗಳಿಗೆ ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು .
ಯುವ ವಿಭಾಗದ ಮಾಜಿ ಕಾರ್ಯಾಧ್ಯಕ್ಷ ರೌನಕ್ ಜೆ ಶೆಟ್ಟಿ ,ಉಪ ಕಾರ್ಯಾಧ್ಯಕ್ಷ ಅಭಿಷೇಕ್ ಜಿ ಶೆಟ್ಟಿ ,ಪ್ರಫುಲ್ ಕುಮಾರ್ ವಿ ಶೆಟ್ಟಿ ,ಕಾರ್ಯದರ್ಶಿ ನಿಶಾನ್ ಎಸ್ ಶೆಟ್ಟಿ ,ಕೋಶಾಧಿಕಾರಿ ವಿಶಾಲ್ ಎಸ್ ಶೆಟ್ಟಿ , ಪದಾಧಿಕಾರಿಗಳಾದ ಜಿತೇಶ್ ಜೆ ಶೆಟ್ಟಿ ,ಅಕ್ಷಯ್ ವಿ ಶೆಟ್ಟಿ ,ಅಭಿನಂದನ್ ಎಸ್ ಶೆಟ್ಟಿ ,ಭಾಗ್ಯೇಶ್ ಬಿ ಶೆಟ್ಟಿ ,ಸುಮಿತ್ ಶೆಟ್ಟಿ ,ನಿತೇಶ್ ಎಸ್ ಶೆಟ್ಟಿ ,ಧೀರ್ ಎಸ್ ಶೆಟ್ಟಿ ,ಅಶಿತ್ ವಿ ಶೆಟ್ಟಿ ,ಅದ್ವಿಕ್ ಎಸ್ ಶೆಟ್ಟಿ ,ಪ್ರಶಾಂತ್ ಎ ಶೆಟ್ಟಿ ,ಶ್ರಾವ್ಯ ಎಸ್ ಶೆಟ್ಟಿ ,ನಿಖಿತಾ ಎಸ್ ಶೆಟ್ಟಿ ,ಅಭಿಜಿತ್ ವಿ ಶೆಟ್ಟಿ ,ಅಶ್ವಿನಿ ಸಿ ಶೆಟ್ಟಿ ಹಾಗೂ ನಿಧಿ ಎ ಹೆಗ್ಡೆ ಪಂದ್ಯಾಟದ ಯಶಸ್ಸಿಗೆ ಸಹಕರಿಸಿದರು.
ಚಿತ್ರ ,ವರದಿ : ಕಿರಣ್ ಬಿ ರೈ ಕರ್ನೂರು