ಎನ್ ಎನ್ ಎಂ ಪ್ರೊಡಕ್ಷನ್ ಲಾಂಛನದಲ್ಲಿ ಆತ್ಮಾನಂದ ರೈ ನಿರ್ಮಿಸಿರುವ ಮಯೂರ್ ಆರ್ ಶೆಟ್ಟಿ ನಿರ್ದೇಶನದ ಪಿಲಿ ತುಳು ಚಲನಚಿತ್ರ ಫೆಬ್ರವರಿ 10 ರಂದು ತುಳುನಾಡಿನಾದ್ಯಂತ ಬಿಡುಗಡೆಗೊಳ್ಳಲಿದೆ. ಭರತ್ ಭಂಡಾರಿಯವರು ನಾಯಕ ನಟನಾಗಿ ಹಾಗೂ ನಾಯಕಿಯಾಗಿ. ಸ್ವಾತಿ ಶೆಟ್ಟಿ. ಚಿತ್ರದಲ್ಲಿ ಅಭಿನಯಿಸಿದ್ದಾರೆ, ಇತ್ತೀಚಿಗೆ ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು ಬಹು ಜನರ ಮೆಚ್ಚುಗೆ ಪಡೆದಿದೆ, ಚಿತ್ರದ ಬಗ್ಗೆ ಭರವಸೆ ಹುಟ್ಟಿಸಿದೆ.


ಛಾಯಾಗ್ರಹಣ ಮತ್ತು ನಿರ್ದೇಶನ ಮಯೂರ್ ಆರ್ ಶೆಟ್ಟಿ, ಆತ್ಮಾನಂದ ರೈ ನಿರ್ಮಾಪಕರಾಗಿದ್ದು, ಭರತ್ ರಾಮ್ ರೈ ಸಹ ನಿರ್ಮಾಪಕರಾಗಿದ್ದಾರೆ, ಮಣಿಕಾಂತ್ ಕದ್ರಿಯವರ ಸಂಗೀತ ಸಾರಥ್ಯದಲ್ಲಿ ಅಧ್ಭುತವಾದ ನಾಲ್ಕು ಹಾಡುಗಳಿದ್ದು, ಪಟ್ಲ ಸತೀಶ್ ಶೆಟ್ಟಿ, ನಿಹಾಲ್, ಅನುರಾಧ ಭಟ್, ಕಲಾವತಿ, ಉಜ್ವಲ ಆಚಾರ್, ಮುಂತಾದವರು ಹಾಡಿದ್ದಾರೆ. ಪಟ್ಲ ಸತೀಶ್ ಶೆಟ್ಟಿಯವರ ಕಂಠ ಸಿರಿಯಲ್ಲಿ ಮೂಡಿ ಬಂದ ಶೀರ್ಷಿಕೆ ಗೀತೆಯು ಬಿಡುಗಡೆಗೊಂಡಿದ್ದು ಎಲ್ಲಾ ಕಡೆ ಸದ್ದು ಮಾಡುತ್ತಿದೆ, ಜನವರಿ ತಿಂಗಳಲ್ಲಿ ಚಿತ್ರದ ಎಲ್ಲಾ ಹಾಡುಗಳು ಬಿಡುಗಡೆಗೊಳ್ಳಲಿದೆ.

ಪೆಭ್ರವರಿ ತಿಂಗಳಲ್ಲಿ ತುಳುನಾಡು ಮಾತ್ರವಲ್ಲದೆ, ಅರಬ್ ರಾಷ್ಟ್ರಗಳಲ್ಲಿ ಕೂಡ ಚಿತ್ರವು ಬಿಡುಗಡೆ ಗೊಳ್ಳಳಿದೆ.ಹೊರ ದೇಶದಲ್ಲೂ ಸಿಮಿಮಾದ ಕುರಿತು ಒಳ್ಳೆಯ ನಿರೀಕ್ಷೆ ಹುಟ್ಟಿಸಿದೆ.

ಒಂದು ಗಟ್ಟಿತನವಿರುವ ಕಥೆಯ ಜೊತೆಗೆ, ಕೌಟುಂಬಿಕ ಮನರಂಜನೆ, ಹಾಸ್ಯ, ಪ್ರೀತಿ ಪ್ರೇಮ, ಸುಂದರ ಹಾಡುಗಳ ಜೊತೆಗೆ ಮೈ ನವಿರೇಳಿಸುವ ಸಾಹಸ ಮತ್ತು ಕತೆಯಲ್ಲಿ ಕೊನೆವರೆಗೂ ಸಾಗುವ ನಿಗೂಢತೆ ಇವೆಲ್ಲವೂ ಪ್ರೇಕ್ಷಕರಿಗೆ ಪರಿಪೂರ್ಣ ಮನರಂಜನೆಯನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಚಿತ್ರದಲ್ಲಿ ವಿಜಯ್ಕುಮಾರ್ ಕೊಡಿಯಾಲ್ಬೈಲ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿ ದ್ದಾರೆ. ತ್ರಿಷಾ ಶೆಟ್ಟಿ, ಕೃತಿ ಶೆಟ್ಟಿ, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ್, ಸ್ವರಾಜ್ ಶೆಟ್ಟಿ, ಸಂತೋಷ್ ಶೆಟ್ಟಿ, ರೂಪ ಡಿ ಶೆಟ್ಟಿ, ನಮಿತಾ ಕೂಳೂರು, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ ಸೇರಿದಂತೆ ಹಲವಾರು ಪ್ರಭುದ್ಧ ಕಲಾವಿದರು ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ. ಗಣೇಶ್ ನೀರ್ಚಾಲ್ ಅವರ ಸಂಕಲನ ಈ ಚಿತ್ರಕ್ಕಿದೆ. ಸುಂದರವಾದ ನಾಲ್ಕು ಹಾಡುಗಳಿಗೆ ಮಯೂರ್ ಆರ್. ಶೆಟ್ಟಿ, ಡಿ.ಬಿ.ಸಿ ಶೇಖರ್ ಮತ್ತು ಕೆ.ಕೆ. ಪೇಜಾವರ್ ಸಾಹಿತ್ಯ ಬರೆದಿದ್ದಾರೆ. ಈ ಚಿತ್ರಕ್ಕೆ ಸಂದೇಶ್ ಬಿಜೈ ಸಂಭಾಷಣೆ ಬರೆದಿದ್ದು, ನಿರ್ದೇಶನ ತಂಡದಲ್ಲಿ ಚಿತ್ರ ನಿರ್ದೇಶಕ ತ್ರಿಶೂಲ್ ಶೆಟ್ಟಿ, ಸಂದೇಶ್ ಬಿಜೈ ಮುಂತಾದವರು ಕಾರ್ಯ ನಿರ್ವಹಿಸಿದ್ದಾರೆ. ಪ್ರಚಾರ ಕಲೆ ವಿನ್ಯಾಸ ದೇವಿ ರೈಯವರದ್ದಾಗಿದೆ. ತುಳುನಾಡಿನ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಸೇರಿದಂತೆ ಮಂಗಳೂರಿನ ಸುತ್ತಮುತ್ತ ಇರುವಂತಹ ಹಲವಾರು ಸುಂದರ ತಾಣಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದ್ದು, ಚಿತ್ರ ಬಹಳ ಸುಂದರವಾಗಿ ಮೂಡಿಬಂದಿದ್ದು ಚಿತ್ರ ತಂಡಕ್ಕೆ ಹೊಸ ಭರವಸೆಯನ್ನು ಮೂಡಿಸಿದೆ. ಮಾತ್ರವಲ್ಲದೆ ಈ ಚಿತ್ರವು ತುಳು ಚಿತ್ರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ನಂಬಿಕೆ ಚಿತ್ರ ತಂಡದ್ದಾಗಿದೆ. ತುಳುನಾಡಿನ ಸಮಸ್ತ ಚಿತ್ರ ಪ್ರೇಮಿಗಳು ಚಿತ್ರಮಂದಿರಕ್ಕೆ ಬಂದು ಈ ಚಿತ್ರವನ್ನು ವೀಕ್ಷಿಸಿ,ಹರಸಿ ಹಾರೈಸಬೇಕಾಗಿ ‘ಪಿಲಿ’ ಚಿತ್ರತಂಡ ಕೋರಿದೆ.








































































































