ತುಳುನಾಡಿನ ಧಾರ್ಮಿಕ ಆಚರಣೆಗಳ ಹಿನ್ನೆಲೆಯಿರುವ 27ನೇ ವರ್ಷದ ಐತಿಹಾಸಿಕ ಶಿರ್ವ ನಡಿಬೆಟ್ಟು ಸೂರ್ಯ-ಚಂದ್ರ ಸಂಪ್ರದಾಯಬದ್ಧ ಜೋಡುಕರೆ ಕಂಬಳವು ನಡಿಬೆಟ್ಟು ಕಂಬಳ ಗದ್ದೆಯಲ್ಲಿ ನಡೆಯಿತು. ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕೇ¤ಸರ ಎಲ್ಲೂರುಗುತ್ತು ಪ್ರಫುಲ್ಲ ಶೆಟ್ಟಿ ದೀಪ ಬೆಳಗಿಸಿ ಜೋಡುಕರೆಗೆ ಕಾಯಿ ಒಡೆಯುವುದರ ಮೂಲಕ ಕಂಬಳವನ್ನು ಉದ್ಘಾಟಿಸಿದರು.ಧಾರ್ಮಿಕ ಹಿನ್ನೆಲೆಯನ್ನು ಹೊಂದಿರುವ ಶಿರ್ವ ನಡಿಬೆಟ್ಟು ಕಂಬಳವು ನಡಿಬೆಟ್ಟು ಚಾವಡಿಯ ದೈವ ಜುಮಾದಿಗೆ ಪೂಜೆ ಪುರಸ್ಕಾರ ನಡೆದ ಬಳಿಕ ಬಂಟ ಕೋಲ ನಡೆದು ಮೆರವಣಿಗೆಯಲ್ಲಿ ಕೊಂಬು, ವಾದ್ಯಘೋಷಗಳೊಂದಿಗೆ ಮನೆಯ ಕೋಣಗಳನ್ನು ಗದ್ದೆಗಿಳಿಸಲಾಯಿತು.
ಹಗ್ಗ ಕಿರಿಯ ವಿಭಾಗದಲ್ಲಿ 30 ಜತೆ ಕೋಣಗಳು ಮತ್ತು ಸಬ್ಜೂನಿಯರ್ ವಿಭಾಗದಲ್ಲಿ 48 ಜತೆ ಒಟ್ಟು 78 ಜತೆ ಕೋಣಗಳು ಕಂಬಳದಲ್ಲಿ ಭಾಗವಹಿಸಿದ್ದವು. ಮನೆತನದ ಕೋಣಗಳನ್ನು ಗದ್ದೆಗಿಳಿಸಿ ಓಡಿಸುವುದರೊಂದಿಗೆ ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನಗೊಂಡಿತು.ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಶಿರ್ವ ಗ್ರಾ.ಪಂ. ಅಧ್ಯಕ್ಷ ರತನ್ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷ ಕೆ.ಆರ್. ಪಾಟ್ಕರ್, ಪಿಲಾರು ಸುಧಾಕರ ಭಂಡ್ರಿಯಾಲ್, ಅಟ್ಟಿಂಜ ಶಂಭು ಶೆಟ್ಟಿ, ಸಚ್ಚಿದಾನಂದ ಹೆಗ್ಡೆ, ಸುಂದರ ಶೆಟ್ಟಿ, ಕಾನಬೆಟ್ಟು ಬಡ್ಡು ಪೂಜಾರಿ, ಗ್ರಾ.ಪಂ. ಸದಸ್ಯ ಪ್ರವೀಣ್ ಸಾಲಿಯಾನ್, ರಾಜೇಶ್ ನಾಯ್ಕ, ವಿಟ್ಠಲ ಅಂಚನ್, ತಮ್ಮಣ್ಣ ಪೂಜಾರಿ, ರತ್ನವರ್ಮ ಹೆಗ್ಡೆ, ರಘುರಾಮ ನಾಯ್ಕ, ಮೊದಲಾದವರು ಉಪಸ್ಥಿತರಿದ್ದರು.
ಶಿರ್ವ ನಡಿಬೆಟ್ಟು ಮನೆತನದ ಯಜಮಾನ ದಾಮೋದರ ಚೌಟ ಅವರ ಮುಂದಾಳತ್ವದಲ್ಲಿ ವ್ಯವಸ್ಥಾಪಕ ಶಿರ್ವ ನಡಿಬೆಟ್ಟು ಶಶಿಧರ ಹೆಗ್ಡೆಯವರು ಊರವರ ಸಹಕಾರದೊಂದಿಗೆ ಕಂಬಳ ನಡೆಸಿಕೊಂಡು ಬರುತ್ತಿದ್ದು, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಫಲಿತಾಂಶ ಹಗ್ಗ ಕಿರಿಯ ವಿಭಾಗದಲ್ಲಿ ನಿಟ್ಟೆ ಪರಪ್ಪಾಡಿ ವಿಹಾನ್ ಕೋಟ್ಯಾನ್ ಪ್ರಥಮ, ಮಾರ್ಪಳ್ಳಿ ಕಂಬಳಮನೆ ರಾಜೇಶ್ ಶೆಟ್ಟಿ ದ್ವಿತೀಯ, ಸಬ್ ಜೂನಿಯರ್ ವಿಭಾಗದಲ್ಲಿ ಬೈಂದೂರು ತಗ್ಗರ್ಸೆ ನೀಲಕಂಠ ಹುದಾರ್ ಪ್ರಥಮ ಮತ್ತು ಭಟ್ಕಳ ಎಚ್.ಎನ್. ನಿವಾಸ ಪಿನ್ನು ಪಾಲ್ ದ್ವಿತೀಯ ಬಹುಮಾನ ಗಳಿಸಿದರು.
ಕನ್ನಡ ಸಂಸ್ಕೃತಿ ಇಲಾಖೆಯ ರಮೇಶ್ ದೇವಾಡಿಗ, ಮುತ್ತುರಾಜ್, ಶಿರ್ವ ಠಾಣಾಧಿಕಾರಿ ರಾಘವೇಂದ್ರ ಸಿ., ಶಿರ್ವ ಗ್ರಾ.ಪಂ. ಅಧ್ಯಕ್ಷ ರತನ್ ಕುಮಾರ್ ಶೆಟ್ಟಿ, ಪೊಲೀಸ್ ಇಲಾಖೆಯ ಶಶಿಧರ್ ಎರಡೂ ವಿಭಾಗಗಳಲ್ಲಿ ಗೆದ್ದ ಕೋಣಗಳ ಮಾಲಕರಿಗೆ ಮತ್ತು ಕೋಣ ಓಡಿಸಿದವರಿಗೆ ಶಾಶ್ವತ ಫಲಕ ಸಹಿತ ನಗದು ಬಹುಮಾನ ನೀಡಿ ಗೌರವಿಸಿದರು.ಹಿರಿಯರಾದ ಶಿರ್ವ ನಡಿಬೆಟ್ಟು ಸುರೇಂದ್ರ ಹೆಗ್ಡೆ, ಕಿಶೋರ್ಚಂದ್ರ ಹೆಗ್ಡೆ, ಚಂದ್ರಶೇಖರ ಹೆಗ್ಡೆ, ಅಟ್ಟಿಂಜೆ ಸುಧೀರ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಕುತ್ಯಾರು ಸಾಯಿನಾಥ ಶೆಟ್ಟಿ, ಶಿಕ್ಷಕ ರಿತೇಶ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸುರೇಂದ್ರ ಪೂಜಾರಿ ಕೊಪ್ಪಲ ನಿರೂಪಿಸಿ, ವಂದಿಸಿದರು. ವೀರೇಂದ್ರ ಪೂಜಾರಿ ಸಹಕರಿಸಿದರು.