ಮುಂಬಯಿ ಬಂಟರ ಸಂಘದ ಮಾಜಿ ಕಾರ್ಯದರ್ಶಿ, ಸದಾಶಿವ ಶೆಟ್ಟಿ & ಕೊ. ಚಾರ್ಟರ್ಡ್ ಅಕೌಂಟೆಂಟ್ಸ್ ಹಾಗೂ ಶೆಟ್ಟಿ & ಬಾಳ ಚಾರ್ಟರ್ಡ್ ಅಕೌಂಟೆಂಟ್ಸ್ ಮಾಲಕರು ಆದಂತಹ ಸಮಾಜ ಸೇವಕ ಸಿ.ಎ. ಸದಾಶಿವ ಶೆಟ್ಟಿ ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ ಸೇರ್ಪಡೆಗೊಂಡಿದ್ದಾರೆ. ಪ್ರಸ್ತುತ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉನ್ನತ ಶಿಕ್ಷಣದ ಮಹತ್ತರ ಯೋಜನೆಯ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಈ ಹಿಂದೆ ಒಕ್ಕೂಟದ ಪೋಷಕ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು.