ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಶ್ರೀ ಐಕಳ ಹರಿಶ್ ಶೆಟ್ಟಿಯವರ ಸಮರ್ಥ ಅಧ್ಯಕ್ಷತೆಯಲ್ಲಿ ಸಮಾಜಮುಖಿ ಕೆಲಸಗಳನ್ನು ಶ್ರದ್ಧಾ ಭಕ್ತಿಯಿಂದ ಇದ್ದವರಿಂದ ಪಡೆದು ಇಲ್ಲದವರಿಗೆ ಹಂಚಿ ಬಡವರ ಕಣ್ಣೊರೆಸುವ ಶ್ಲಾಘನೀಯ ಕೆಲಸ ಮಾಡುತ್ತಿದೆ ಸಮಾಜದ ಅರ್ಥರ ಧ್ವನಿಯಾಗಿ ನೋಂದವರ ಪಾಲಿಗೆ ಸದಾ ಸೃಜನ ಶೀಲ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಸಮಾಜದ ಪ್ರತಿಯೊಬ್ಬರಿಗೂ ಕೂಡ ಭರವಸೆಯ ಬೆಳಕನ್ನು ಮೂಡಿಸಿದೆ ಒಕ್ಕೂಟದ ಕೆಲಸ ಶ್ಲಾಘನೀಯ ನಾನು ನಿಮ್ಮ ಎಲ್ಲಾ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತು ಸಂಪೂರ್ಣ ಸಹಕಾರ ನೀಡುತ್ತೇನೆ. ನೀವು ಇತಿಹಾಸ ನಿರ್ಮಾಣ ಮಾಡಿದ್ದೀರಿ ನಿಮ್ಮ ಕೆಲಸವು ಇನ್ನು ಮುಂದುವರಿಯಬೇಕಾದರೆ ನಾವೆಲ್ಲ ನಿಮ್ಮ ಜೊತೆ ಇರಬೇಕು, ಖಂಡಿತವಾಗಿಯೂ ನಿಮ್ಮ ಅಮೂಲ್ಯ ಚಟುವಟಿಕೆಗಳಿಗೆ ನಾವೆಲ್ಲರೂ ಜೊತೆಯಾಗಿದ್ದು ನಾನು ಸಂಪೂರ್ಣ ಹೃದಯಪೂರ್ವಕ ಬೆಂಬಲವನ್ನು ನೀಡುತ್ತೇನೆ ಎಂಬ ಭರವಸೆಯನ್ನು ಎಂ ಆರ್ ಜಿ ಗ್ರೂಪ್ ಆಫ್ ಕಂಪನೀಸ್ ಅಧ್ಯಕ್ಷ ಶ್ರೀ ಪ್ರಕಾಶ್ ಶೆಟ್ಟಿ ಕೆ ನುಡಿದರು.
ಮುಂಬೈಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶ್ವ ಬಂಟರ ಸಮ್ಮೇಳನ ಹಾಗೂ ಮಹಾಧಿವೇಶನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಿಜೆಪಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಸಿಟಿ ರವಿ ಅವರು ಬಂಟರು ಸಮರ್ಥ ನಾಯಕತ್ವವನ್ನು ನೀಡಿ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದವರು ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಮನೆ ಇಲ್ಲದವರಿಗೆ ಮನೆ ನಿರ್ಮಾಣ ಅನಾರೋಗ್ಯ ಹೊಂದಿದವರಿಗೆ ಸಹಾಯ ಹಸ್ತ ಮದುವೆಯಾಗುವ ಆರ್ಥಿಕ ಸಂಕಷ್ಟದ ಹೆಣ್ಣು ಮಕ್ಕಳಿಗೆ ಮದುವೆಗೆ ಸಹಾಯ ಶಿಕ್ಷಣ ಕ್ಷೇತ್ರದಲ್ಲಿ ಸಹಾಯಧನ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಶ್ರೀ ಐಕಳ ಹರೀಶ್ ಶೆಟ್ಟಿ ಅವರ ಸಮರ್ಥ ನಾಯಕತ್ವದಲ್ಲಿ ಉನ್ನತಮಟ್ಟದ ಕೆಲಸವನ್ನು ಮಾಡಿಕೊಂಡು ಬರುತ್ತಿದೆ ಸರಕಾರದ ಕೆಲಸವನ್ನು ಒಂದು ಸಂಸ್ಥೆ ಮಾಡುತ್ತಿದೆ ಎಂದು ಹೇಳಲು ಸಂತೋಷವಾಗುತ್ತದೆ ಸರಕಾರ ನಿಮ್ಮೊಂದಿಗೆ ಇದೆ ಎಂದು ನುಡಿದರು.
ಮುಂಬೈನ ವರ್ಲಿಯಲ್ಲಿರುವ ಪ್ರಕಾಶ್ ಶೆಟ್ಟಿ ಅವರ ಸ್ವಗೃಹದದಲ್ಲಿ ಜರಗಿದ ಸರಳ ಸಮಾರಂಭದಲ್ಲಿ ಆಮಂತ್ರಣ ಪತ್ರಿಕೆಯನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷರಾದ ಶ್ರೀ ವಿಶ್ವನಾಥ ಶೆಟ್ಟಿ ಕರ್ನಿರೆ, ಕೋಶಾಧಿಕಾರಿಗಳಾದ ಉಳ್ತೂರು ಮೋಹನ್ ದಾಸ್ ಶೆಟ್ಟಿ
ಒಕ್ಕೂಟದ ನಿರ್ದೇಶಕರುಗಳಾದ ಶ್ರೀ ಆರ್ ಕೆ ಶೆಟ್ಟಿ ಹೇರಂಬ, ಶ್ರೀ ಪ್ರವೀಣ್ ಬಿ ಶೆಟ್ಟಿ, ಶ್ರೀ ರಾಜೇಶ್ ಶೆಟ್ಟಿ ರಾಕ್ಷಿ ಬಿಲ್ಡರ್ಸ್, ಶ್ರೀ ಕೃಷ್ಣ ವೈ ಶೆಟ್ಟಿ ಕೃಷ್ಣ ಪ್ಯಾಲೇಸ್, ಶ್ರೀ ಶಶಿಧರ ಶೆಟ್ಟಿ ಇನ್ನಂಜೆ, ಶ್ರೀ ರತ್ನಾಕರ ಶೆಟ್ಟಿ ಮುಂಡ್ಕೂರು, ಶ್ರೀ ರವಿ ಎಸ್ ಶೆಟ್ಟಿ ಸಾಯಿ ಪ್ಯಾಲೇಸ್, ಶ್ರೀ ಅರವಿಂದ ಶೆಟ್ಟಿ ಬಿಜೆಪಿ ಕಾರ್ಪೊರೇಟರ್ ,
ಶ್ರೀ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ ಬೆಟ್ಟು, ಶ್ರೀ ಉಪೇಂದ್ರ ಶೆಟ್ಟಿ ಬೆಂಗಳೂರು, ಶ್ರೀ ಸತೀಶ್ ಶೆಟ್ಟಿ ಪೂನಾ, ಶ್ರೀ ವಿಜಯ ಶೆಟ್ಟಿ ಬಾಬಾಸ್, ಶ್ರೀ ಆರ್ ಕೆ ಶೆಟ್ಟಿ ಕಾರ್ಯದರ್ಶಿ ಮುಂಬೈ ಬಂಟರ ಸಂಘ, ಶ್ರೀ ಆದರ್ಶ ಶೆಟ್ಟಿ, ಶ್ರೀ ಗೌತಮ್ ಶೆಟ್ಟಿ, ಶ್ರೀ ಶಿವ ಶೆಟ್ಟಿ, ಶ್ರೀ ಹೇಮಂತ್ ಶೆಟ್ಟಿ ಉಪಸ್ಥಿತರಿದ್ದರು