ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರು ವಿಶೇಷ ಮನವಿ ಮಾಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಲಸೋಪರ ಗ್ಯಾಲಕ್ಸಿ ಅಂಡ್ ರೀಜೆನ್ಸಿ ಗ್ರೂಪ್ ಆಫ್ ಹೋಟೆಲ್ಸ್ ಇದರ ಆಡಳಿತ ನಿರ್ದೇಶಕ ಶ್ರೀ ಶಶಿಧರ ಕೆ. ಶೆಟ್ಟಿ ಇನ್ನಂಜೆ ಅವರನ್ನು ಒಕ್ಕೂಟದ ಮಹಾ ಪೋಷಕರಾಗಿ ಸೇರ್ಪಡೆ ಗೊಂಡಿದ್ದಾರೆ. ನಮ್ಮ ಹೆಮ್ಮೆಯ ಬಂಟ ಸಮಾಜದ ಸುಪುತ್ರ ಶ್ರೀ ಶಶಿಧರ ಕೆ. ಶೆಟ್ಟಿಯವರು ಇತ್ತೀಚೆಗೆ ತಮ್ಮ 25ನೆ ವರ್ಷದ ವೈವಾಹಿಕ ಜೀವನದ ಸಂಭ್ರಮ ಆಚರಿಸಿದ್ದರು. ಮುಂಬಯಿ ಬಂಟರ ಸಂಘದಲ್ಲೂ ಸಕ್ರಿಯರಾಗಿರುವ ಶ್ರೀಯುತರು ಬಂಟ ಸಮಾಜದ ಏಳಿಗೆಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ.






































































































