ಗುರುಪುರ ಬಂಟರ ಮಾತೃ ಸಂಘ(ರಿ) ಇದರ ಸಾಮಾಜಿಕ ಸೇವಾ ಯೋಜನೆಯಡಿ ಕಡು ಬಡತನದಲ್ಲಿರುವ ಮೂಡುಶೆಡ್ಡೆಯ ಸುಶೀಲಾ ಶೆಟ್ಟಿಯವರಿಗೆ ಉಚಿತ ಮನೆ ನಿರ್ಮಿಸಿ ಕೊಡಲಿದ್ದು, ಮೂಡುಶೆಡ್ಡೆಯಲ್ಲಿ ಹೊಸ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿತು.
ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ ಬಂಟ ಸಮಾಜದ ಅರ್ಹ ಫಲಾನುಭವಿಗಳನ್ನು ಗುರುತಿಸಿ ನೆರವಾಗುವಂತಹ ಕೆಲಸ ಇದಾಗಿದ್ದು, ಜಾಗತಿಕ ಬಂಟರ ಸಂಘವು ಇದುವರೆಗೆ ೧೮೨ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟಿದೆ. ಕಳೆದ ಸಾಲಿನಲ್ಲಿ ಸಮಾಜದ ಅರ್ಹರಿಗಾಗಿ ಒಂಬತ್ತು ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿತ್ತು ಎಂದರು.
ಗುರುಪುರ ಬಂಟರ ಮಾತೃ ಸಂಘದ ಮಾಜಿ ಅಧ್ಯಕ್ಷ ರಾಜ್ಕುಮಾರ್ ಶೆಟ್ಟಿ ತಿರುವೈಲುಗುತ್ತು ಮಾತನಾಡಿ ಸಂಘದ ಪ್ರಯೋಜನ ಪಡೆಯುವಂತಹ ಕುಟುಂಬಗಳ ಮಕ್ಕಳು ಭವಿಷ್ಯದಲ್ಲಿ ಉತ್ತಮ ಸ್ಥಿತಿವಂತರಾಗಿ ಸಮಾಜದ ಏಳಿಗೆಗೆ ನೆರವಾಗಬೇಕು ಎಂದರು.
ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಹೊಸಲಕ್ಕೆ ಮೂಡುಶೆಡ್ಡೆ ಮಾತನಾಡಿ ಗುರುಪುರ ಬಂಟರ ಮಾತೃ ಸಂಘವು ಬಂಟ ಸಮಾಜದ ಬಡ ಕುಟುಂಬಗಳನ್ನು ಗುರುತಿಸಿ, ನೆರವು ನೀಡುವ ಕೆಲಸ ಮಾಡುತ್ತಿದೆ. ಪ್ರಸ್ತುತ ಸಂಘವು ‘ಫಲ್ಗುಣಿ ದತ್ತಿ ನಿಧಿ’ ರಚಿಸಿದ್ದು, ಈ ಮೂಲಕ ಇನ್ನಷ್ಟು ಸಾಮಾಜಿಕ ಕಳಕಳಿಯ, ಅಶಕ್ತರಿಗೆ ನೆರವು ನೀಡುವ ಕೆಲಸ ಮಾಡುವ ಉದ್ದೇಶ ಹೊಂದಿದೆ ಎಂದರು. ಸಂಘದ ಮಾಜಿ ಸಂಚಾಲಕ ಸುದರ್ಶನ ಶೆಟ್ಟಿ ಪೆರ್ಮಂಕಿ ಮಾತನಾಡಿ ಸಂಘದ ವ್ಯಾಪ್ತಿಯ ಬಡ ಕುಟುಂಬಗಳಿಗೆ ಮನೆ ನಿರ್ಮಾಣ, ಸಹಾಯಧನ ನೀಡಲು ಉದ್ದೇಶಿಸಿ ರಚಿಸಿರುವ ದತ್ತಿ ನಿಧಿಗೆ ಅನೇಕ ಮಂದಿ ಧನ ಸಹಾಯ ನೀಡಲು ಮುಂದೆ ಬಂದಿದ್ದು, ಸಮಾಜದ ಎಲ್ಲಾ ದಾನಿಗಳ ನೆರವಿನಿಂದ ಇಂತಹ ಸಮಾಜಮುಖಿ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ನಿರ್ಧರಿಸಿದ್ದೇವೆ ಎಂದರು. ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಯುವ ವಿಭಾಗದ ಅಧ್ಯಕ್ಷರಾದ ದೇವಿಚರಣ್ ಶೆಟ್ಟಿ, ರತನ್ ಶೆಟ್ಟಿ, ಮೂಡುಶೆಡ್ಡೆ ಪಂಚಾಯತ್ ಉಪಾಧ್ಯಕ್ಷ ಅನಿಲ್ ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ಶೇಖರ, ಬಬಿತಾ ಮತ್ತು ಕಿರಣ್ ಶೆಟ್ಟಿ, ಉಳಾಯಿಬೆಟ್ಟು ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ, ಸಂಘದ ಪದಾಧಿಕಾರಿಗಳಾದ ಪ್ರವೀಣ್ ಆಳ್ವ ಗುಂಡ್ಯ, ಜಯರಾಂ ಶೆಟ್ಟಿ ವಿಜೇತ, ಹರೀಶ್ ಶೆಟ್ಟಿ ಉಪ್ಪುಗೂಡು, ಸತ್ಯವಾನ್ ಆಳ್ವ, ಪುರುಷೋತ್ತಮ ಮಲ್ಲಿ, ಜಯರಾಮ ರೈ ಉಳಾಯಿಬೆಟ್ಟು, ಮಹಿಳಾ ವಿಭಾಗದ ಅಧ್ಯಕ್ಷೆ ಇಂದಿರಾಕ್ಷಿ ಶೆಟ್ಟಿ, ಪ್ರತಿಮಾ ಶೆಟ್ಟಿ, ಪ್ರಮೀಳಾ ಶೆಟ್ಟಿ, ಗೀತಾ ಸಚ್ಚಿದಾನಂದ ಆಳ್ವ, ಆಶಾ ರೈ, ವೀರಣ್ಣ ಹಾಗೂ ಇತರರು ಉಪಸ್ಥಿತರಿದ್ದರು.
Previous Articleಬಂಟ ಪ್ರತಿಭಾನ್ವೇಷಣೆಯ ಪೂರ್ವಭಾವಿ ಸಭೆ