ಸುರತ್ಕಲ್: “ರಾಜ್ಯಕ್ಕೆ ಮಾದರಿ ಶಾಲೆ ಎನಿಸಿರುವ ಮಧ್ಯ ಸರಕಾರಿ ಪ್ರಾಥಮಿಕ ಶಾಲೆಗೆ ಸರಕಾರದ ವತಿಯಿಂದ ಆಟದ ಮೈದಾನ ನಿರ್ಮಿಸಲು 2 ಎಕ್ರೆ ಜಾಗ ದೊರೆತಿದ್ದು ಅದರಲ್ಲಿ ಟ್ರಸ್ಟ್ ಗೌರವಾಧ್ಯಕ್ಷರಾದ ಕರುಣಾಕರ ಎಂ ಶೆಟ್ಟಿ ಇವರ ನೇತೃತ್ವದಲ್ಲಿ ಸುಮಾರು 2 ಕೋಟಿ ಅಂದಾಜು ವೆಚ್ಚದಲ್ಲಿ ಶಾಲೆಗೆ ಹೆಚ್ಚುವರಿ ಕೊಠಡಿ ಮತ್ತು 9 ಮತ್ತು 10 ನೇ ತರಗತಿ ಹಾಗೂ ಸುಸಜ್ಜಿತವಾದ ಆಟದ ಮೈದಾನವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ” ಎಂದು ವಿದ್ಯಾನಿಧಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
2015-16 ರ ಸಾಲಿನಲ್ಲಿ 75 ಮಕ್ಕಳನ್ನು ಹೊಂದಿದ್ದ ಶಾಲೆಯು ಸುವರ್ಣ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷರಾದ ಕರುಣಾಕರ ಎಂ.ಶೆಟ್ಟಿ ಮಧ್ಯ ಗುತ್ತು ಮತ್ತು ಮೋಹನ್ ಚೌಟ ಮಧ್ಯ ಇವರ ಮುತುವರ್ಜಿಯಿಂದ ಮುಂಬೈಯ ಉದ್ಯಮಿಗಳಿಂದ, ಮಹಾ ದಾನಿಗಳಿಂದ, ಸಂಘ ಸಂಸ್ಥೆಗಳಿಂದ, ಊರಿನ ಹಿರಿಯರಿಂದ, ಹಳೆ ವಿದ್ಯಾರ್ಥಿಗಳಿಂದ, ಸರಕಾರದಿಂದ ಮತ್ತು ಜನಪ್ರತಿನಿಧಿಗಳಿಂದ ಹಾಗೂ ವಿದ್ಯಾಭಿಮಾನಿಗಳ ಸಹಕಾರದಿಂದ ಶಾಲೆಯ ಚಿತ್ರಣವೇ ಬದಲಾಗಿ, ಇಡೀ ಜಿಲ್ಲೆ ಹಾಗೂ ರಾಜ್ಯಕ್ಕೆ ಮಾದರಿ ಎನಿಸಿದೆ. ಮಕ್ಕಳ ಕಲಿಕೆಗೆ ಪೂರಕವಾದ ಉತ್ತಮ ರೀತಿಯ ತರಗತಿಗಳ ವಿನ್ಯಾಸ, ಪ್ರತಿ ಕೊಠಡಿಗಳ ನೆಲಕ್ಕೆ ಟೈಲ್ಸ್ ಅಳವಡಿಕೆ, ಸ್ಮಾರ್ಟ್ ಕ್ಲಾಸ್ ರಚನೆ, ಶಾಲಾ ಮಕ್ಕಳಿಗಾಗಿ 3 ವಾಹನದ ವ್ಯವಸ್ಥೆ, ಕುಡಿಯುವ ಶುದ್ಧ ನೀರಿನ ವ್ಯವಸ್ಥೆ, ಗಂಡು ಮಕ್ಕಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಸುಸಜ್ಜಿತವಾದ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ, ಉತ್ತಮ ರೀತಿಯ ತರಗತಿಯ ಕೊಠಡಿಗಳು, ಗ್ರಂಥಾಲಯ ವ್ಯವಸ್ಥೆ, ಆಟವಾಡಲು ಬಾಲವನದ ವ್ಯವಸ್ಥೆ, 2 ಎಕ್ರೆ ಸ್ಥಳದಲ್ಲಿ ಆಟದ ಮೈದಾನ, ಉಚಿತ ಬರೆಯುವ ಪುಸ್ತಕದ ವ್ಯವಸ್ಥೆ, ಶಾಲೆಯ ಸುರಕ್ಷತೆಗಾಗಿ ಸಿ.ಸಿ.ಟಿ.ವಿ ಯ ಅಳವಡಿಕೆ, ಕಂಪ್ಯೂಟರ್ ತರಗತಿಗಳು ಹೀಗೆ ಹತ್ತು ಹಲವಾರು ರೀತಿಯ ವ್ಯವಸ್ಥೆಯನ್ನು ಮಾಡಿರುತ್ತೇವೆ ಎಂದರು.
ಎಲ್.ಕೆ.ಜಿ ಯುಕೆಜಿ ಯಿಂದ ಎಂಟನೇ ತರಗತಿಯವರೆಗೆ ಒಟ್ಟು 700 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದು ಮಕ್ಕಳಿಗೆ ಶಿಕ್ಷಣ ಪಡೆಯಲು ಕಷ್ಟವಾಗಬಾರದು ಎಂಬ ನಿಟ್ಟಿನಲ್ಲಿ 50 ಲಕ್ಷ ರೂ. ಮೊತ್ತದ ಶಾಶ್ವತ ಜ್ಞಾನನಿಧಿ ಯೋಜನೆ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಟ್ರಸ್ಟ್ ಗೌರವಾಧ್ಯಕ್ಷ ಕರುಣಾಕರ ಶೆಟ್ಟಿ ಮಧ್ಯಗುತ್ತು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ನ ಗೌರವಾಧ್ಯಕ್ಷ ಕರುಣಾಕರ.ಎಂ.ಶೆಟ್ಟಿ ಮಧ್ಯ ಗುತ್ತು, ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಭಟ್ ಕೋಶಾಧಿಕಾರಿ ಪ್ರಕಾಶ್.ಎಂ.ಶೆಟ್ಟಿ, ಸದಸ್ಯ ವಿಠಲ ಶೆಟ್ಟಿ ಎಲ್ಲದಡಿ, ವಜ್ರಾಕ್ಷಿ ಪಿ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭಗವಾನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ ದೇವಾಡಿಗ, ವಜ್ರಾಕ್ಷಿ ಪಿ. ಶೆಟ್ಟಿ ಉಪಸ್ಥಿತರಿದ್ದರು. ಪ್ರಸ್ತುತ ಸಾಲಿನಲ್ಲಿ ಯೋಗ, ಕರಾಟೆ, ಭರತನಾಟ್ಯ, ಕಂಪ್ಯೂಟರ್ ಕ್ಲಾಸ್ ಯಕ್ಷಗಾನ ತರಗತಿಗಳನ್ನು ಪ್ರಾರಂಭಿಸಲಾಗಿದೆ.
Previous Article“ಮ್ಯೂಸಿಯಂ ಆಫ್ ಅನಾಟಮಿ” ಕುತೂಹಲದ ಕಣ್ಣಿಗೆ ಅಚ್ಚರಿಯ ನೋಟ