
ಪ್ರತಿಷ್ಠಿತ ಮೈಸೂರು ಬಂಟರ ಸಂಘದ ಅಧ್ಯಕ್ಷರಾದ ಶ್ರೀಯುತ ಕೊಳ್ಕೆಬೈಲು ಗಣೇಶ್ ನಾರಾಯಣ ಹೆಗ್ಡೆಯವರ 70 ನೇ ವರ್ಷದ ಹುಟ್ಟುಹಬ್ಬ ಸಮಾರಂಭ ಏಪ್ರಿಲ್ 16 ರಂದು ಮೈಸೂರು ರೇಸ್ ಕ್ಲಬ್, ಕ್ಲಬ್ ಹೌಸ್ ನಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹೋಟೆಲ್ ಮಾಲಕರ ಸಂಘದ ರಾಜ್ಯಾಧ್ಯಕ್ಷ ಜಿ.ಕೆ ಶೆಟ್ಟಿ, ಉಪಾಧ್ಯಕ್ಷ ಮಧುಕರ್ ಶೆಟ್ಟಿ, ಕರ್ನಾಟಕ ರಾಜ್ಯ ಹೋಟೆಲ್ ಮಾಲಕರ ಸಂಘದ ಸದಸ್ಯತ್ವ ಛೇರ್ಮನ್ ಶ್ರೀನಿವಾಸ್ ಶೆಟ್ಟಿ, ಮಹೇಶ್ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ಪಾಲುದಾರ ಕೆ ಪ್ರಕಾಶ್ ಶೆಟ್ಟಿ, ನಾರಾಯಣ್ ವಿ ಹೆಗ್ಡೆ, ಕೆ ಭಾಸ್ಕರ್ ಶೆಟ್ಟಿ, ಆನಂದ ಶೆಟ್ಟಿ ಮುಂತಾದವರು ಈ ಅದ್ದೂರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.



























































































































