
ಅಂಬಲಪಾಡಿ ಕಪ್ಪೆಟ್ಟು ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ವಾರ್ಷಿಕ ನೇಮ ಏಪ್ರಿಲ್ 4ರಂದು ನಡೆಯಲಿದೆ. ಏಪ್ರಿಲ್ 3ರಂದು ರಾತ್ರಿ 8 ಗಂಟೆಗೆ ಅನ್ನ ನೈವೇದ್ಯ ಸೇವೆ, ಏಪ್ರಿಲ್ 4 ರಂದು ಮಧ್ಯಾಹ್ನ 12:30 ಕ್ಕೆ ಅನ್ನಸಂತರ್ಪಣೆ, ರಾತ್ರಿ 7:00 ಗಂಟೆಗೆ ಭಂಡಾರ ಇಳಿಯುವುದು, ಅನಂತರ ಶ್ರೀ ಬ್ರಹ್ಮಬೈದರ್ಕಳ ನೇಮ ಜರಗಲಿದೆ. ಏಪ್ರಿಲ್ 7 ರಂದು ರಾತ್ರಿ 10 ಗಂಟೆಗೆ ಪಡು ಗಡುವಾಡಿನಲ್ಲಿ, ಏಪ್ರಿಲ್ 16ರಂದು ರಾತ್ರಿ 10 ಗಂಟೆಗೆ ಮೂಡು ಗಡುವಾಡಿನಲ್ಲಿ (ಸರಕಾರಿ ಆಸ್ಪತ್ರೆ ಬಳಿ) ಶ್ರೀ ವ್ಯಾಘ್ರ ಚಾಮುಂಡಿ ದೈವದ ಕೋಲ ನಡೆಯಲಿದೆ ಎಂದು ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು ತಿಳಿಸಿದ್ದಾರೆ.



























































































































