ನೆಮ್ಮದಿಯ ಬದುಕು, ಸುಖ ಸಮೃದ್ದಿಯ ಬದುಕು ನೀಡಿದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿಗೆ ಅಧ್ಯಕ್ಷರಾಗಿ ಸತ್ವ ಪರೀಕ್ಷೆಯಂತೆ ಬಂದ ಕಾರ್ಯವನ್ನು ಮಾಡುವ ಜವಾಬ್ದಾರಿ ಬಂದಾಗ ಒಂದು ಹೆಜ್ಜೆ ಮುಂದೆ ಇಟ್ಟರೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬಂತೆ ದೇವಸ್ಥಾನದ ಪುನರ್ ನಿರ್ಮಾಣಕ್ಕೆ ಇಳಿದಿದ್ದೇವೆ. ಎಲ್ಲವೂ ದೇವರ ಅನುಮತಿಯಂತೆ ನಡೆಯುತ್ತದೆ ಎಂಬುದನ್ನು ನಾವು ನಂಬಿದವರು. ಸಣ್ಣ ಪುಟ್ಟ ಅಡೆತಡೆಗಳು ನಿವಾರಣೆಯಾಗಿ ಯಾವುದೇ ಜಾತಿ ಪಂಗಡ ಧರ್ಮ ಇರಲಿ ಅಥವಾ ಯಾವುದೇ ವ್ಯಕ್ತಿ ಕೂಡಾ ಮನಸ್ಸು ಬೇಜಾರು ಮಾಡಿಕೊಳ್ಳದೆ ಒಂದು ಸೇರಿ ನನ್ನ ಬಳಿ ಬಂದಾಗ ಇಲ್ಲ ಎನ್ನದೇ ಮತ್ತು ನನ್ನ ಧರ್ಮಪತ್ನಿಯ ಸಂಕಲ್ಪ ಏನಿದೆಯೋ ಅದರಂತೆ ಇಂದು ದೇವಸ್ಥಾನದ ಕಾರ್ಯಗಳು ನಡೆಯುತ್ತಿವೆ. ನಮ್ಮ ಪಾಲಿಗೆ ದೇವತಾ ಕಾರ್ಯ ಮಾಡುವ ಯೋಗ ಬಂದಿದೆ. ನನ್ನ ವೈಯುಕ್ತಿಕ ಸೇವೆ ಇದ್ದೇ ಇದೆ. ಆದರೆ ಇಲ್ಲಿ ಸೇರಿದ ಮತ್ತು ಪಡುಬಿದ್ರಿ ಮಹಾಲಿಂಗೇಶ್ವರ ಭಕ್ತರ, ಎಲ್ಲರ ತನು ಮನ ಧನದ ಸೇವೆ ಸಲ್ಲಬೇಕು ಎಂಬುದೇ ನಮ್ಮ ಆಶಯ. ನೀಡಿದ ಸೇವೆಗೆ ದೇವರ ಅನುಗ್ರಹ ಆಶೀರ್ವಾದ ನಮಗೆ ಸಿಕ್ಕೇ ಸಿಗುತ್ತದೆ. ಇಲ್ಲಿ ಸೇರಿದ ನಿಮ್ಮೆಲ್ಲರ ಸೇವೆಯನ್ನು ದೇವರು ಸ್ವೀಕಾರ ಮಾಡುತ್ತಾರೆ. ಪಡುಬಿದ್ರಿ ಶಿವ ಗಣಪತಿಯವರ ಪ್ರೇರಣೆಯಂತೆ ಪುನರ್ ನಿರ್ಮಾಣದ ಕಾರ್ಯ ಸಿದ್ದಿಯಾಗುತ್ತದೆ. ಸಾಕ್ಷತ್ ಸರಸ್ವತಿಯೇ ಒಲಿದು ಬಂದು ಉತ್ತಮ ವಾಗ್ಮಿಯಾಗಿ ಮಾತನಾಡಬಲ್ಲ ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿಯವರು ನಿಮ್ಮ ಸಮಿತಿಯ ಜೊತೆ ನಮ್ಮ ಪುಣೆ ಸೇವಾ ಸಮಿತಿಯ ಸಭೆ ನಡೆಸುವ ಎಂದಾಗ ನಾವಿಲ್ಲಿ ಜೀರ್ಣೋದ್ದಾರ ಸಮಿತಿಯವರು ಬಂದಿದ್ದೇವೆ. ನಾನು ಬಹಳಷ್ಟು ಸಾರಿ ಈ ಭವನಕ್ಕೆ ಬಂದಿದ್ದೇನೆ. ಇದರ ಒಳಗೆ ಬಂದಾಗ ದೇವಸ್ಥಾನಕ್ಕೆ ಬಂದ ಹಾಗೆ ಆಗುತ್ತದೆ. ಇಲ್ಲಿ ಏನೋ ಒಂದು ರೀತಿಯ ದೈವಿ ಶಕ್ತಿಯ ಮಹಿಮೆ ಇದೆ. ಅದೇ ರೀತಿ ಇಂದು ಇಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಪಡಿಪೂಜೆಯಲ್ಲಿ ಪಾಲು ಪಡೆಯುವ ಯೋಗ ಬಂತು. ಧರ್ಮ ಮತ್ತು ಧಾರ್ಮಿಕ ಕಾರ್ಯಗಳು ಮನುಷ್ಯನನ್ನು ಉತ್ತಮ ಜೀವನ ನಡೆಸಲು ಪ್ರೇರೇಪಿಸುತ್ತದೆ ಎಂದು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಡಾ| ಕೆ ಪ್ರಕಾಶ್ ಶೆಟ್ಟಿ ನುಡಿದರು.

ಪಡುಬಿದ್ರಿ ಸೀಮೆಯ ಒಡೆಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪುನರ್ ನಿರ್ಮಾಣ ಜೀರ್ಣೋದ್ದಾರ ಪುಣೆ ಸೇವಾ ಸಮಿತಿಯ ಸಮಾಲೋಚನ ಸಭೆಯು ಪುಣೆ ಬಂಟರ ಭವನದಲ್ಲಿ ಜನವರಿ 3ರಂದು ಜರಗಿತು. ಸಭೆಯಲ್ಲಿ ಗೌರವ ಉಪಸ್ಥಿತಿ ಇದ್ದು ಮಾತನಾಡಿದ ಡಾ| ಪ್ರಕಾಶ್ ಶೆಟ್ಟಿಯವರು ಎಪ್ರಿಲ್ ಮೇ ತಿಂಗಳಲ್ಲಿ ದೇವರ ಪುನಃ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ನಡೆಸುವ ತಯಾರಿ ಆಗುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲೆಯಲ್ಲಿ ಸುಮಾರು 30 ಕೋಟಿ ವೆಚ್ಚದ ದೇವಸ್ಥಾನದ ಜೀರ್ಣೋದ್ದಾರ ಒಂದು ವರ್ಷದಲ್ಲಿ ಆಗುತ್ತಿದೆ ಎಂದರೆ ಅದು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಎಂದು ಹೇಳಲು ಹೆಮ್ಮೆಯಾಗುತಿದೆ. ದೇವಸ್ಥಾನ ಜೀರ್ಣೋದ್ದಾರಗೊಂಡು ಕಂಗೋಳಿಸುತ್ತಾ ಶಕ್ತಿ ಮತ್ತು ಈ ನೆಲದ ಪವಿತ್ರತೆಯ ಹೆಚ್ಚಿಸುವ ಜತೆಯಲ್ಲಿ ಜನರ ಭಕ್ತಿಯ ಹೃದಯ ವೈಶಾಲ್ಯತೆಯನ್ನು ತೆರೆಡಿದಲಿದೆ ಎಂದರು.
ಪಡುಬಿದ್ರಿ ದೇವಸ್ಥಾನದ ಪ್ರಧಾನ ಸೇವಕನಾಗಿ ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟುರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ದೇವಸ್ಥಾನದ ಜೀರ್ಣೋದ್ದಾರದ ಸಂಕಲ್ಪವನ್ನು ಮಾಡಿ, ಧಾರ್ಮಿಕ ಕಾರ್ಯವನ್ನು ಕೈಗೆತ್ತಿಕೊಂಡು ದೇವತಾ ಕಾರ್ಯದ ನೇತೃತ್ವ ವಹಿಸಿಕೊಂಡ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಡಾ| ಕೆ ಪ್ರಕಾಶ್ ಶೆಟ್ಟಿ, ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಅನುವಂಶಿಕ ಮೊಕ್ತೇಸರರಾದ ಭವಾನಿ ಶಂಕರ ಹೆಗ್ಡೆ, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಸುಕುಮಾರ್ ಪಡುಬಿದ್ರಿ, ಜೊತೆ ಕಾರ್ಯದರ್ಶಿ ನವೀನ್ ಚಂದ್ರ ಶೆಟ್ಟಿ ಪಡುಬಿದ್ರಿ, ಕೋರ್ ಕಮಿಟಿ ಸಮನ್ವಯಕರಾದ ಮುರಳಿನಾಥ್ ಶೆಟ್ಟಿ, ಯೋಜನೆ ಅನುಷ್ಟಾನ ಸಮಿತಿಯ ನವೀನ್ ಶೆಟ್ಟಿ, ಸಂತೋಷ್ ಶೆಟ್ಟಿ ಪಲ್ಲವಿ, ಪುಣೆ ಬಂಟರ ಸಂಘದ ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರು ಗುತ್ತು, ಮಾಜಿ ಅಧ್ಯಕ್ಷರಾದ ಸದಾನಂದ ಕೆ ಶೆಟ್ಟಿ, ಪುಣೆ ಬಂಟರ ಸಂಘದ ಟ್ರಸ್ಟಿಗಳಾದ ಜಿತೇಂದ್ರ ಹೆಗ್ಡೆ, ಕೆ ಕೆ ಶೆಟ್ಟಿ, ಸಮಿತಿ ಪದಾಧಿಕಾರಿಗಳಾದ ವಿಶ್ವನಾಥ್ ಶೆಟ್ಟಿ ಶೀತಲ್, ರಾಮಕೃಷ್ಣ ಶೆಟ್ಟಿ, ಸುಧೀರ್ ಶೆಟ್ಟಿ ಕಣಂಜಾರು, ಚಂದ್ರಹಾಸ್ ಶೆಟ್ಟಿ ಎರ್ಮಾಳ್, ಗಣೇಶ್ ಹೆಗ್ಡೆ ಪುಣ್ಚೂರ್, ಮಾಧವ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಪ್ರವೀಣ್ ಶೆಟ್ಟಿ ಪುತ್ತೂರು, ಸತೀಶ್ ಶೆಟ್ಟಿ, ಶಶೀಂದ್ರ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ ನಿಟ್ಟೆ, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಸೀತಾರಾಮ್ ಶೆಟ್ಟಿ, ಮುಂಬಯಿ ಸಮಿತಿಯ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪೇಟೆಮನೆ, ಕೋಶಾಧಿಕಾರಿ ಸುನಿಲ್ ಶೆಟ್ಟಿ ಉಪಸ್ಥಿತಿಯೊಂದಿಗೆ ಸಭೆಯಲ್ಲಿ ಪುಣೆಯ ವಿವಿಧ ಸಂಸ್ಥೆಗಳ ಪ್ರಮುಖರಾದ ಪುಣೆ ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ, ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ, ಬಂಟ್ಸ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ನಿಕಟ ಪೂರ್ವ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ, ಮಾಜಿ ಅಧ್ಯಕ್ಷರಾದ ವಿಶ್ವನಾಥ್ ಶೆಟ್ಟಿ, ಉದ್ಯಮಿಗಳಾದ ಸುಂದರ್ ಪೂಜಾರಿ, ಬಾಲಚಂದ್ರ ಶೆಟ್ಟಿ ಎರ್ಮಾಳ್, ಪಿಂಪ್ರಿ ತುಳು ಸಂಘದ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕುರ್ಕಾಲ್, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುಭಾಶ್ ಶೆಟ್ಟಿ, ದೇವಾಡಿಗ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ, ಪುಣೆ ಬಂಟರ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಶಮ್ಮಿ ಎ ಹೆಗ್ಡೆ, ಮಾಜಿ ಕಾರ್ಯಾಧ್ಯಕ್ಷೆಯರುಗಳಾದ ಸುಲತಾ ಎಸ್ ಶೆಟ್ಟಿ, ಜಯಂತಿ ಜೆ ಶೆಟ್ಟಿ, ಶೋಭಾ ಜೆ ಶೆಟ್ಟಿ, ಶಶಿ ಬಿ ಹೆಗ್ಡೆ, ಸಂಧ್ಯಾ ವಿ ಶೆಟ್ಟಿ ಮತ್ತು ಪದಾಧಿಕಾರಿಗಳು, ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳಾದ ಸುಧಾಕರ್ ಶೆಟ್ಟಿ, ನಾರಾಯಣ ಹೆಗ್ಡೆ, ಸಂದೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಮಹಿಳಾ ಕಾರ್ಯಾಧ್ಯಕ್ಷೆಯರುಗಳಾದ ವಿನೋದಾ ಶೆಟ್ಟಿ, ಪ್ರೇಮಾ ಅರ್ ಶೆಟ್ಟಿ, ಶಾಲಿನಿ ಎಂ ಶೆಟ್ಟಿ, ನಯನಾ ಸಿ ಶೆಟ್ಟಿ ಮತ್ತು ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ಮೊದಲಿಗೆ ಬಂಟರ ಭವನದ ಚಾವಡಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ವೃತಾದಾರಿಗಳಿಂದ ಪ್ರಭಾಕರ್ ಸ್ವಾಮಿ, ಭಾಸ್ಕರ್ ಸ್ವಾಮಿಯವರ ನೇತೃತ್ವದಲ್ಲಿ ಭಜನೆ, ನಂತರ ಪಡಿಪೂಜೆ ನಡೆಯಿತು. ನಂತರ ಸಮಾಲೋಚನಾ ಸಭೆಯಲ್ಲಿ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಅಲಂಕೃತ ಮಂಟಪಕ್ಕೆ ಪುರೋಹಿತರಾದ ಹರೀಶ್ ಭಟ್ ರವರ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಆರತಿ ಬೆಳಗಿದರು. ಸಭೆಯಲ್ಲಿದ್ದ ಪ್ರಮುಖರು ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿ ಸಭೆಗೆ ಚಾಲನೆ ನೀಡಿದರು. ಸಂತೋಷ್ ಶೆಟ್ಟಿಯವರು ಸ್ವಾಗತಿಸಿ, ಪಡುಬಿದ್ರಿ ದೇವಸ್ಥಾನದ ಜೀರ್ಣೋದ್ದಾರದ ಪುಣೆ ಸೇವಾ ಸಮಿತಿಯ ಕಾರ್ಯ ಯೋಜನೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್ ಶೆಟ್ಟಿಯವರು ಡಾ| ಪ್ರಕಾಶ್ ಶೆಟ್ಟಿಯವರನ್ನು ಮತ್ತು ಗಣ್ಯರನ್ನು ಶಾಲು ಸ್ಮರಣಿಕೆ ನೀಡಿ ಸತ್ಕರಿಸಿದರು. ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು ಕಾರ್ಯ ಯೋಜನೆಗಳ ಬಗ್ಗೆ ತಿಳಿಸಿದರು. ಪಡುಬಿದ್ರಿ ದೇವಸ್ಥಾನದ ಚರಿತ್ರೆಯ ಬಗ್ಗೆ ಕಿಶೋರ್ ಹೆಗ್ಡೆಯವರು ಸಂಕ್ತಿಪ್ತವಾಗಿ ವಿವರಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ನಂತರ ಪ್ರೀತಿ ಭೋಜನ ನಡೆಯಿತು.
ಚಿತ್ರ, ವರದಿ : ಹರೀಶ್ ಮೂಡುಬಿದ್ರಿ

















































































































