ತನ್ನ ಸಾಮಾಜಿಕ ಜೀವನದಲ್ಲಿ ಪರೋಪಕಾರಿಯಾಗಿ ಕಷ್ಟದಲ್ಲಿದ್ದವರಿಗೆ ಸಹಾಯಕ್ಕಾಗಿ ಸ್ಪಂದಿಸುತ್ತಾ, ಉತ್ತಮ ಸಮಾಜ ಸೇವಾ ಕಾರ್ಯ ಮಾಡುತ್ತಾ ಇದ್ದ ನಮ್ಮ ತುಳುಕೂಟದ ದಿವಂಗತ ಸಂತೋಷ್ ಶೆಟ್ಟಿಯವರ ನೆನಪಾಗುವುದು ಸಾಮಾನ್ಯ. ಅವರ ಸ್ಮರಣೆ ಮಾಡುವ ನಿಟ್ಟಿನಲ್ಲಿ ಸಮಾಜಕ್ಕಾಗಿ ಉಪಯೋಗಕಾರಿಯಾಗುವ ಸೇವೆಯನ್ನು ಮಾಡಬೇಕೆಂಬ ತುಳುಕೂಟದ ಯುವ ವಿಭಾಗದವರು ಆಯೋಜಿಸಿದ ರಕ್ತದಾನ ಮತ್ತು ಉಚಿತ ಅರೋಗ್ಯ ತಪಾಸಣಾ ಕಾರ್ಯಕ್ರಮಕ್ಕೆ ಮಹತ್ವವಿದೆ. ಮನುಷ್ಯ ಜೀವನದಲ್ಲಿ ಆರೋಗ್ಯ ಕಾಪಾಡಲು ಹಲವಾರು ಮಾರ್ಗಗಳಿವೆ. ಅದನ್ನು ಅನುಸರಿಸಿದರೆ ಆರೋಗ್ಯದಾಯಕ ಜೀವನ ಸಾಧ್. ಆದರೆ ಅವೆಲ್ಲವೂ ಅಕಸ್ಮಿಕ ಅನಾರೋಗ್ಯ ಅಥವಾ ಅಪಘಾತ ಎಂಬುದು ಯಾವತ್ತು ಹೇಳಿ ಬರುವುದಿಲ್ಲ. ಜೀವನ ಪದ್ಧತಿ, ಅಹಾರ ಪದ್ಧತಿ ನಗರ ಜೀವನದ ಇಂದಿನ ಕಾಲದ ವಾತಾವರಣದಿಂದ ಮನುಷ್ಯ ಬೇಗನೆ ಅನಾರೋಗ್ಯ ಪಿಡಿತನಾಗುತ್ತಾನೆ. ಅಂತೆಯೇ ಅಸರ್ಮಪಕ ನಿರ್ವಹಣೆಯಿಂದ ಅಥವಾ ಮನುಷ್ಯ ತಪ್ಪಿನಿಂದ ಅನಾರೋಗ್ಯ ಅಪಘಾತಗಳು ಕೂಡಾ ಹೆಚ್ಚೆಚ್ಚು ಆಗುತಿದೆ. ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಮತ್ತು ಮೆಡಿಕಲ್ ಸಂಬಂಧಿತ ಇನ್ಸೂರೆನ್ಸ್ ಇದ್ದರೆ ಒಳ್ಳೆಯದು. ಡಾ. ಸುಜಯ್ ಹೆಗ್ಡೆಯವರು ನಮಗೆ ಉತ್ತಮ ರೀತಿಯ ವೈದ್ಯಕೀಯ ಅದರಲ್ಲೂ ಕ್ಯಾನ್ಸರ್ ನ ಬಗ್ಗೆ ಉಪನ್ಯಾಸ ನೀಡಿ, ಯಾವ ರೀತಿಯ ಮುಂಜಾಗ್ರತೆ ಮಾಡಬೇಕೆಂದು ತಿಳಿಸಿಕೊಟ್ಟಿದ್ದಾರೆ ಹಾಗೂ ರಕ್ತದಾನ ಮಾಡಿದವರಿಗೆ ಕಾರ್ಡ್ ನೀಡಿ ರೂಬಿ ಹಾಸ್ಪಿಟಲ್ ನಲ್ಲಿ ಕೆಲವು ಉಚಿತ ತಪಾಸಣೆ ವ್ಯವಸ್ಥೆ ಕೂಡಾ ಮಾಡಿ ಕೊಟ್ಟಿದ್ದಾರೆ. ಇದರ ಪ್ರಯೋಜನ ಪಡೆಯಬೇಕು. ನಮ್ಮ ಆತ್ಮೀಯರು ಟ್ರಸ್ಟಿಗಳು ಅದ ಸದಾಶಿವ ಸಾಲ್ಯಾನ್ ರವರು ಅತಿಥಿಯಾಗಿ ಬಂದು ಸಾರ್ವಜನಿಕವಾಗಿ ಸಮಾಜಕ್ಕೆ ಆಗುವ ಸೇವಾ ಕಾರ್ಯಗಳಿಗೆ ಸದಾ ನೀಮ್ಮೊಂದಿಗೆ ಇದ್ದೇನೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ನಮ್ಮ ತುಳುಕೂಟದ ಎಲ್ಲರ ಸಹಕಾರದೊದಿಗೆ ಯುವ ವಿಭಾಗ ಮತ್ತು ರಕ್ತದಾನ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಪುಣೆ ತುಳುಕೂಟದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು ನುಡಿದರು. ಪುಣೆ ತುಳುಕೂಟದ ಯುವ ವಿಭಾಗದ ಆಶ್ರಯದಲ್ಲಿ ಪುಣೆ ತುಳುಕೂಟದ ಸಕ್ರಿಯ ಸದಸ್ಯನಾಗಿ ಸಮಾಜ ಸೇವಕನಾಗಿದ್ದ ದಿವಂಗತ ಸಂತೋಷ್ ಶೆಟ್ಟಿ ಎಣ್ಣೆಹೊಳೆ ಸ್ಮರಣಾರ್ಥ ರಕ್ತದಾನ ಮತ್ತು ಅರೋಗ್ಯ ತಪಸಣಾ ಶಿಬಿರವು ಜನವರಿ 4 ರವಿವಾರದಂದು ಪುಣೆಯ ಗಣೇಶ್ ನಗರ ಎರಾಂಡವನ ಕನ್ನಡ ಸಂಘದ ಡಾ. ಶ್ಯಾಮ್ ರಾವ್ ಕಲ್ಮಾಡಿ ಕಾವೇರಿ ಕಾಲೇಜ್ ನ ಪ್ರಾಂಗಣದಲ್ಲಿ ನಡೆಯಿತು.
ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರುರವರ ಅಧ್ಯಕ್ಷತೆಯಲ್ಲಿ ನಡೆದ ಶಿಭಿರದ ಉದ್ಘಾಟನಾ ಸಭೆಯಲ್ಲಿ ಗೌರವ ಅತಿಥಿಗಳಾಗಿ ರೂಬಿ ಹಾಲ್ ನ ಕ್ಯಾನ್ಸರ್ ಸ್ಪೆಷಲಿಸ್ಟ್ ಡಾ. ಸುಜಯ್ ಹೆಗ್ಡೆ ಮತ್ತು ಸಮಾಜ ಸೇವಕ ಪುಣೆ ತುಳುಕೂಟದ ಟ್ರಸ್ಟಿ ಸದಾಶಿವ ಸಾಲ್ಯಾನ್, ಪುಣೆ ಬಂಟರ ಸಂಘದ ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಪುಣೆ ತುಳುಕೂಟದ ಗೌರವಾಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ, ಪ್ರ ಕಾರ್ಯದರ್ಶಿ ರಾಜಾರಾಮ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ಪ್ರಿಯಾ ಎಚ್ ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ ಆಕಾಶ್ ಶೆಟ್ಟಿಯವರು ಉಪಸ್ಥಿತರಿದ್ದು, ದೀಪ ಪ್ರಜ್ವಲಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷ ಉದಯ್ ಶೆಟ್ಟಿ ಕಳತ್ತೂರು ಸ್ವಾಗತಿಸಿದರು. ಅತಿಥಿ ಗಣ್ಯರನ್ನು ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರುರವರು ಶಾಲು, ಪುಷ್ಪಗುಚ್ಛ ನೀಡಿ ಗೌರವಿಸಿದರು. ಡಾ. ರಾಧಿಕಾರವರು ಅರೋಗ್ಯ ದೃಷ್ಟಿಯಿಂದ ಆಹಾರ ಪದ್ದತಿ ಮತ್ತು ಸಮಯ ಪಾಲನೆಯ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿದ್ದ ಗಣರು ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿದರು. ಪುಣೆಯ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದು ಹೆಚ್ಚಿನ ಸಂಖ್ಯೆಯ ತುಳು ಕನ್ನಡಿಗ ಬಾಂಧವರು ರಕ್ತದಾನ ಮಾಡಿ ಅರೋಗ್ಯ ತಪಾಸಣೆ ಮಾಡಿಸಿಕೊಂಡರು. ತುಳುಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು. ಕನ್ನಡ ಸಂಘದ ಅಧ್ಯಕ್ಷರು ಟ್ರಸ್ಟಿಗಳು ಶಾಲೆಯ ಪ್ರಾಂಗಣ ಉಚಿತವಾಗಿ ನೀಡಿ ಕಾರ್ಯಕ್ರಮಕ್ಕೆ ಸಹಕರಿಸಿದರು. ಸಾಂಸ್ಕ್ರತಿಕ ವಿಭಾಗದ ಜಗದೀಪ್ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಚಿತ್ರ, ವರದಿ : ಹರೀಶ್ ಮೂಡುಬಿದ್ರಿ

















































































































