ಬಂಟರ ಸಂಘ ಬೆಂಗಳೂರು ಇದರ ಆಶ್ರಯದಲ್ಲಿ ದೀಪಾವಳಿ ಸಂಭ್ರಮಾಚರಣೆಯ ಪ್ರಯುಕ್ತ ನಡೆದ ಅಂತರ್ ಬಂಟರ ಸಂಘಗಳ ಸಾಂಸ್ಕೃತಿಕ ನಾಟ್ಯ ಕಥಾ ರೂಪಕ ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘ 1,50,000 ನಗದಿನೊಂದಿಗೆ ಶಾಶ್ವತ ಫಲಕದೊಂದಿಗೆ ಪ್ರಥಮ ಸ್ಥಾನವನ್ನು ಗಳಿಸಿದೆ. ಪ್ರಶಸ್ತಿಯನ್ನು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿಎ ಅಶೋಕ್ ಶೆಟ್ಟಿ ಎಂ, ಸಾಂಸ್ಕೃತಿಕ ಸಮಿತಿಯ ಚೇರ್ ಪರ್ಸನ್ ರಮೇಶ್ ಶೆಟ್ಟಿ, ಸಂಘದ ಗೌರವ ಕಾರ್ಯದರ್ಶಿ ವಿಜಯ ಜೆ ಶೆಟ್ಟಿ ಹಾಲಾಡಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಸಂತೋಷ್ ಶೆಟ್ಟಿ ತಲೇಕಳ ಅವರು ಪ್ರಶಸ್ತಿಯನ್ನು ವಿತರಿಸಿದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಮಾಜಿ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ, ಸಂಘದ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ, ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ದೇವೇಂದ್ರ ಶೆಟ್ಟಿ, ಮಹಿಳಾ ವೇದಿಕೆಯ ಸಾಂಸ್ಕೃತಿಕ ಕಾರ್ಯದರ್ಶಿ ಆಶಾಕಿರಣ್ ಪ್ರಸಾದ್ ರೈ, ಮಹಿಳಾ ವೇದಿಕೆಯ ಅಧ್ಯಕ್ಷೆ ಸರೋಜ ಟಿ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.

ಉಲ್ಲಾಸ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ರಾಜೇಶ್ವರಿ ಡಿ ಶೆಟ್ಟಿ ಕತೆ,ಸಂಭಾಷಣೆ ಬರೆದು ಪ್ರಹಸನವನ್ನು ನಿರ್ದೇಶಿಸಿದ್ದರು. ರಾಮಚಂದ್ರ ಶೆಟ್ಟಿ, ಸುಖೇಶ್ ಶೆಟ್ಟಿ ಪ್ರಾಣೇಶ್ ಶೆಟ್ಟಿಯವರ ಸಹಕಾರವೂ ಇತ್ತು. ಇಪ್ಪತ್ತು ನಿಮಿಷಗಳ ಕಾಲಾವಧಿಯಲ್ಲಿ ಭರತ ನೃತ್ಯ ರೂಪಕ, ಬುಡಕಟ್ಟು ಸಮಾಜದ ಡೋಂಗ್ರಿ ನೃತ್ಯ, ಆದಿವಾಸಿಗಳ ದಿನಚರಿ, ಧರ್ಮದ ಕುರಿತು ಜಾಗೃತಿ ಮೂಡಿಸುವ ದೃಶ್ಯಾವಳಿ, ತುಳುನಾಡಲ್ಲಿ ನಾಗಬ್ರಹ್ಮನ ಮಹಿಮೆಯ ಚಿತ್ರಣ, ಜನರ ಬದುಕು ಬವನೆ ಮೊದಲಾದ ಚಿತ್ರಣಗಳನ್ನು ಇಪ್ಪತ್ತು ನಿಮಿಷಗಳ ಕಾಲಾವಧಿಯಲ್ಲಿ 106 ಮಂದಿ ಕಲಾವಿದರು ಪ್ರಸ್ತುತ ಪಡಿಸಿದರು.








































































































