ಪ್ರತಿಯೊಬ್ಬ ವ್ಯಕ್ತಿಯು ತನಗೆ ತಾನೇ ವಿಕಾಸಗೊಂಡು ತನ್ನ ಮಟ್ಟವನ್ನು ತಲುಪಿದಾಗ ಸಂತೃಪ್ತಿಯನ್ನು ಹೊಂದುತ್ತಾನೆ. ಇದು ತನ್ನ ಸ್ವಸಾಮರ್ಥ್ಯದಿಂದ ಪಡೆದದ್ದು ಆಗಿರುತ್ತದೆ. ಅದೇ ರೀತಿ ಒಡಲಲ್ಲಿ ತುಂಬಿರುವ ಸಮಾಜ ಸೇವೆ ಎಂಬ ತುಡಿತ ಎಲ್ಲರಲ್ಲೂ ಬರಲು ಸಾದ್ಯವಿಲ್ಲ. ಅಂತಹ ತುಡಿತ ಇದ್ದವನು ಸಮಾಜ ಸೇವೆಗೆ ಇಳಿಯದೆ ಸುಮ್ಮನಿರಲಾರ. ಇದೇ ನಾವು ಇಂದು ಸಮಾಜದಲ್ಲಿ ಕಾಣುತ್ತಾ ಇದ್ದೇವೆ. ಸಂಘಟನೆ ಮಾಡುವುದು ಸುಲಭ. ಆದರೆ ಅದರ ಗುರಿ ಮುಟ್ಟಲು ಚಿಂತನಾಶೀಲ, ಸಂಘಟನಾತ್ಮಕ ಮತ್ತು ದೃಡ ಸಂಕಲ್ಪ ಬೇಕು. ಹೃದಯದಲ್ಲಿ ಕರುಣೆ, ಸಮಾನತೆ, ಮಾನವೀಯ ಮೌಲ್ಯಗಳು ಮತ್ತು ಸಹಭಾಗಿತ್ವ ಎಂಬ ಆಶಾ ಭಾವ ನಮ್ಮಲ್ಲಿ ಇದ್ದರೆ ಯಾವ ರೀತಿಯಿಂದಲಾದರೂ ಸೇವೆ ಮಾಡಿ ತೋರಿಸಬಹುದು. ತುಳುಕೂಟ ಪುಣೆ ಸ್ಥಾಪನೆ ಆಗಿ 27 ವರ್ಷಗಳ ಪರ್ಯಂತ ತುಳುವರಿಗಾಗಿ ಶ್ರಮಿಸುತ್ತಾ ಬಂದಿದೆ. ಹಿಂದಿನ ಎಲ್ಲಾ ಅಧ್ಯಕ್ಷರುಗಳು ಹಲವಾರು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಆದರೆ ನಮ್ಮ ಉದ್ದೇಶ ಏನಿತ್ತೋ ಸಂಘಕ್ಕಾಗಿ ತುಳುವರಿಗಾಗಿ ಸ್ವಂತ ಮಿನಿ ಭವನ ಮಾಡಿ ಅ ಮೂಲಕ ತುಳುವರಿಗೆ ಉಪಯೋಗಕಾರಿ ಸೇವೆಗಳನ್ನು ಒದಗಿಸಿಕೊಡುವಲ್ಲಿ ತುಳುಕೂಟ ಶ್ರಮಿಸುತ್ತಿದೆ. ಇನ್ನು ಹೆಚ್ಚಿನ ತುಳುವರ ಇಚ್ಚೆಯಂತೆ ಇದನ್ನು ವಿಸ್ತಾರಗೊಳಿಸಿ ಮತ್ತಷ್ಟು ಸೇವಾ ಕಾರ್ಯಗಳು ಮಾಡಬೇಕೆಂಬ ಸಂಕಲ್ಪ ನಮ್ಮದು. ಬಹಳಷ್ಟು ಮಂದಿ ತುಳುವರು ಮುಂದೆ ಬಂದಿದ್ದಾರೆ. ನಾವು ಮತ್ತು ನಮ್ಮವರು ಎಂಬ ಸಮಷ್ಟಿ ರೂಪದಲ್ಲಿ ಸೇವೆ ಮಾಡಿದರೆ ಅದು ಪುಣ್ಯ ಕಾರ್ಯವಾಗುತ್ತದೆ. ಮನುಷ್ಯನಲ್ಲಿರುವ ಸೇವಾ ಮನೋಭಾವವೇ ಸಮಾಜ ಸೇವೆಗೆ ಮೂಲ ವಸ್ತುವಾಗುತ್ತದೆ. ಇದನ್ನು ಅರಿತು ಮುಂದುವರಿಯೋಣ ಎಂದು ಪುಣೆ ತುಳುಕೂಟದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು ನುಡಿದರು.

ತುಳುಕೂಟ ಪುಣೆ ಇದರ 27ನೇ ವಾರ್ಷಿಕ ಮಹಾಸಭೆಯು ಅಕ್ಟೋಬರ್ 16 ರಂದು ಪುಣೆಯ ಕೊತ್ರೊಡ್ ನಲ್ಲಿಯ ಶೌರ್ಯ ರೆಸಿಡೆನ್ಸಿ ಬ್ಯಾಂಕ್ವೆಟ್ ಹಾಲ್ ನಲ್ಲಿ ಜರಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ದಿನೇಶ್ ಶೆಟ್ಟಿಯವರು, ತುಳುವರಿಗಾಗಿ ಜವಾಬ್ದಾರಿಯುತವಾದ ಸಂಸ್ಥೆಯಾಗಿ ತುಳುಕೂಟ ನಡೆಯುತ್ತಿದೆ. ಹಲವಾರು ತುಳುವರ ಕಷ್ಟ ಕಾರ್ಪಣ್ಯಗಳಿಗೆ ಹೊಂದಿಕೊಂಡು ನಡೆಯುತ್ತಾ ಬರುತ್ತಿದೆ. ನಮ್ಮ ತುಳು ಬಾಷೆ, ಕಲೆ, ಸಂಸ್ಕ್ರತಿ, ಅಚಾರ, ವಿಚಾರಗಳಿಗೆ ಒತ್ತು ನೀಡುತ್ತಾ, ಅದರ ಬೆಳವಣಿಗೆ ದುಡಿಯುತ್ತಿದೆ. ತುಳು ಬಾಷೆಯನ್ನು ಕರ್ನಾಟಕ ರಾಜ್ಯದ ಎರಡನೇ ಬಾಷೆಯಾಗಿ ಘೋಷಿಸುವುದಕ್ಕೆ ಒತ್ತಾಯ ಮಾಡಲಾಗಿದೆ. ಬಹರೈನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಸಭಾಪತಿ ಬಸವರಾಜ್ ಹೊರಟ್ಟಿ ಮತ್ತು ಸಚಿವ ದಿನೇಶ್ ಗುಂಡುರಾವ್ ರವರಿಗೆ ಮನವಿ ಮಾಡಿ ಒತ್ತಾತಯಿಸಲಾಗಿದೆ. ಅದೇ ರೀತಿ ವಿದೇಶಗಳ ತುಳು ಸಂಘಟನೆಗಳ ಒಕ್ಕೂಟ ಕೂಡಾ ಬಹಳಷ್ಟು ಶ್ರಮಿಸುತ್ತಿದೆ. ನಮ್ಮ ಸಮಿತಿಯ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯಗೈಯುತ್ತಿದೆ. ತುಳುಕೂಟದ ಟ್ರಸ್ಟಿಗಳು, ದಾನಿಗಳು ಸದಾ ಪ್ರೋತ್ಸಾಹ ನೀಡುತ್ತಾ ತುಳುಕೂಟದ ಅಭಿವೃದ್ದಿಗೆ ಸಹಕರಿಸಿದ್ದಾರೆ. ಎಲ್ಲರಿಗೂ ವಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಪುಣೆ ತುಳು ಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರುರವರ ಅಧ್ಯಕ್ಷತೆಯಲ್ಲಿ ಜರಗಿದ ಮಹಾಸಭೆಯ ವೇದಿಕೆಯಲ್ಲಿ ತುಳುಕೂಟದ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿದ್ದ ಪ್ರವೀಣ್ ಶೆಟ್ಟಿ ಪುತ್ತೂರು, ತುಳುಕೂಟದ ಗೌರವಾಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ, ಉಪಾಧ್ಯಕ್ಷರಾದ ಉದಯ್ ಶೆಟ್ಟಿ ಕಳತ್ತೂರು, ಪ್ರಧಾನ ಕಾರ್ಯದರ್ಶಿ ರಾಜಾರಾಮ್ ಶೆಟ್ಟಿ, ಕೋಶಾಧಿಕಾರಿ ಸಿಎ ಮನೋಹರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಿಯಾ ಎಚ್ ದೇವಾಡಿಗರವರು ಉಪಸ್ಥಿತರಿದ್ದು, ದೀಪ ಬೆಳಗಿಸಿ ಮಹಾಸಭೆಗೆ ಚಾಲನೆ ನೀಡಿದರು. ತುಳುಕೂಟದ ಉಪಾಧ್ಯಕ್ಷರಾದ ಉದಯ್ ಶೆಟ್ಟಿ ಕಳತ್ತೂರು ಸ್ವಾಗತಿಸಿದರು. ಈ ಸಂದರ್ಭದಲಿ ಪುಣೆ ತುಳುಕೂಟದ ಸಕ್ರಿಯ ಪದಾಧಿಕಾರಿ ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷರಾಗಿದ್ದ ಸಂತೋಷ್ ಶೆಟ್ಟಿ ಎಣ್ಣೆಹೊಳೆಯವರ ಆಘಾತಕಾರಿ ನಿಧನಕ್ಕೆ ಒಂದು ನಿಮಿಷದ ಮೌನ ಪ್ರಾರ್ಥನೆ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು. ಪ್ರಧಾನ ಕಾರ್ಯದರ್ಶಿ ರಾಜರಾಮ್ ಶೆಟ್ಟಿಯವರು ತುಳುಕೂಟದ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ವರದಿಯನ್ನು ಸಲ್ಲಿಸಿದರು ಹಾಗೂ ಕೋಶಾಧಿಕಾರಿ ಸಿ.ಎ ಮನೋಹರ ಶೆಟ್ಟಿಯವರು ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿ ಅನುಮೊದನೆ ಪಡೆದರು. ಸಂಘದ ಮುಂದಿನ ಯೋಜನೆ ಕಾರ್ಯಕ್ರಮಗಳ ಬಗ್ಗೆ ಸದಸ್ಯರ ಸಲಹೆ ಸೂಚನೆಗಳನ್ನೂ ಅಂಗಿಕರಿಸಲಾಯಿತು. ವೇದಿಕೆಯಲ್ಲಿದ್ದ ಗಣ್ಯರು ಸಾಂದರ್ಭಿಕವಾಗಿ ಮಾತನಾಡಿದರು. ಸಭೆಯಲ್ಲಿದ್ದ ಸಮಿತಿಯ ಸದಸ್ಯರು ಸಲಹೆ ಸೂಚನೆ ಮತ್ತು ತುಳುಕೂಟದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿ ಮುಂದಿನ ಯೋಜನೆಗಳಿಗೆ ಸಹಕಾರ ನೀಡುವ ಭರವಸೆ ನೀಡಿದರು. ಸಭೆಯಲ್ಲಿ ಟ್ರಸ್ಟಿಗಳಾದ ಪುರಂದರ ಪೂಜಾರಿ, ಸದಾಶಿವ ಸಾಲ್ಯಾನ್, ತುಳುಕೂಟದ ಸಮಿತಿ ಪದಾಧಿಕಾರಿಗಳಾದ ನಾರಾಯಣ ಹೆಗ್ಡೆ, ಆನಂದ್ ಶೆಟ್ಟಿ ಮಡಂತ್ಯಾರ್, ಪ್ರಕಾಶ್ ಪೂಜಾರಿ ದೊಂಡೆರಂಗಡಿ, ದಿವಾಕರ್ ಶೆಟ್ಟಿ, ಗುರುನಾಥ್ ಶೆಟ್ಟಿ, ಸದಾನಂದ ಪೂಜಾರಿ, ಮಹಾಬಲೇಶ್ವರ ದೇವಾಡಿಗ, ನಾರಾಯಣ ದೇವಾಡಿಗ, ನವೀನ್ ಬಂಟ್ವಾಳ, ಆನಂದ್ ಶೆಟ್ಟಿ ಬಜಗೋಳಿ, ಶರತ್ ಭಟ್, ಸತೀಶ್ ದೇವಾಡಿಗ, ವಿಟ್ಟಲ್ ಮೂಲ್ಯ, ತಾರಾನಾಥ್ ಶೆಟ್ಟಿ ಮಡಂತ್ಯಾರ್, ಹಿತೇಶ್ ಶೆಟ್ಟಿ, ದಿನೇಶ್ ಕುಲಾಲ್, ನಯನಾ ಶೆಟ್ಟಿ, ಸುಜಾತಾ ಶೆಟ್ಟಿ, ಸುಕನ್ಯಾ ಶೆಟ್ಟಿ ಮತ್ತು ಮಹಿಳಾ ವಿಭಾಗ, ಯುವ ವಿಬಾಗದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ತಾರಾನಾಥ ಶೆಟ್ಟಿ ಮಡಂತ್ಯಾರ್ ಕಾರ್ಯಕ್ರಮ ನಿರೂಪಿಸಿ, ಉದಯ್ ಶೆಟ್ಟಿ ಕಳತ್ತೂರು ವಂದಿಸಿದರು.
ಚಿತ್ರ, ವರದಿ: ಹರೀಶ್ ಮೂಡಬಿದಿರೆ, ಪುಣೆ