ಶತಮಾನ ಪೂರೈಸಿದ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಗ್ರಾಹಕರಿಗೆ ಪ್ರಯೋಜನ ಆಗುವ ರೀತಿಯಲ್ಲಿ ಹಲವು ಹೊಸತನಗಳೊಂದಿಗೆ ಸಂಪೂರ್ಣ ಡಿಜಿಟಲೀಕರಣವಾಗುತ್ತಿದ್ದು, ಇದರ ಪ್ರಮುಖ ಯೋಜನೆಗಳನ್ನು ಸೆಪ್ಟೆಂಬರ್ 14ರಂದು ನಡೆಯುವ 116ನೇ ವರ್ಷದ ಮಹಾಸಭೆಯಲ್ಲಿ ಚಾಲನೆ ನೀಡಲಾಗುವುದು ಎಂದು ಪುತ್ತೂರು ಆಪರೇಟಿವ್ ಟೌನ್ ಬ್ಯಾಂಕ್ ಅಧ್ಯಕ್ಷ ಕಿಶೋರ್ ಕೊಳತ್ತಾಯ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 2024- 25 ನೇ ಸಾಲಿನಲ್ಲಿ ನಮ್ಮ ಬ್ಯಾಂಕ್ ಇತಿಹಾಸದಲ್ಲಿ ಒಂದು ಹೊಸ ಮೈಲುಗಲ್ಲನ್ನು ಸಾಧಿಸಿದೆ. ವ್ಯವಹಾರದಲ್ಲಿ ಗಣನೀಯ ಹೆಚ್ಚಳ ಸಾಧಿಸಿದ್ದು, ಒಟ್ಟು ಠೇವಣಿ 74.87 ಕೋಟಿ, ಒಟ್ಟು ಸಾಲ ರೂಪಾಯಿ 51.39 ಕೋಟಿಗಳಾಗಿದ್ದು, ಒಟ್ಟು ವ್ಯವಹಾರ ರೂಪಾಯಿ 126.26 ಕೋಟಿ ದಾಟಿದೆ. ಈ ವರ್ಷದ ನಿವ್ವಳ ಲಾಭ 1.04 ಕೋಟಿ ಆಗಿದೆ ಎಂದು ಹೇಳಿದ ಅವರು ಹಲವು ಯೋಜನೆಗಳನ್ನು ಮಹಾಸಭೆಯಲ್ಲಿ ಚಾಲನೆ ನೀಡಲಾಗುವುದು. ಅದರ ಬಳಿಕ ಈ ಆರ್ಥಿಕ ವರ್ಷ ಅಂತ್ಯದೊಳಗೆ ಸಂಪೂರ್ಣ ಡಿಜಿಟಲೀಕರಣ ಬ್ಯಾಂಕ್ ಮಾಡುವಂತಹ ನಮ್ಮ ಪ್ರಯತ್ನ ಸಾಗಲಿದೆ ಎಂದು ಹೇಳಿದರು.

ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ ಶೇಖರ ಶೆಟ್ಟಿ ಮಾತನಾಡಿ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಅನುಕೂಲ ಆಗುವಂತೆ ಮೊಬೈಲ್ ಬ್ಯಾಂಕಿಂಗ್ ಪ್ರಮುಖ ಅಂಶ. ಇದನ್ನು ಸದ್ಯಕ್ಕೆ ಮೊಬೈಲ್ ನಲ್ಲಿ ಮೊಬೈಲ್ ಬ್ಯಾಂಕಿಂಗ್ ಆಪ್ ಡೌನ್ಲೋಡ್ ಮಾಡಿಕೊಂಡು ಗ್ರಾಹಕರು ತಮ್ಮ ಖಾತೆಯ ವಿವರ ಮತ್ತು ಎಂ ಪಾಸ್ ಬುಕ್ ಪಡೆಯಬಹುದು. ಸದ್ಯ ನಾವು ಗ್ರಾಹಕರಿಗೆ ಬ್ಯಾಂಕ್ ನಲ್ಲಿ ಆಪ್ ಅಳವಡಿಸಿಕೊಡುತ್ತೇವೆ. ಸೈಬರ್ ಕ್ರೈಮ್ ಮುನ್ನಚ್ಚರಿಕೆಯಾಗಿ ಸದಸ್ಯ ಗ್ರಾಹಕರ ಈಮೇಲ್ ಗೆ ಆಪ್ ಲಿಂಕ್ ಕಳುಹಿಸುತ್ತೇವೆ. ಅವರು ಅದನ್ನು ಡೌನ್ಲೋಡ್ ಮಾಡಿ ಮೊಬೈಲ್ ಬ್ಯಾಂಕಿಂಗ್ ಬಳಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್ ನ ಉಪಾಧ್ಯಕ್ಷ ಶ್ರೀಧರ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ ಶೇಖರ್ ಶೆಟ್ಟಿ, ನಿರ್ದೇಶಕರಾದ ರಾಜು ಶೆಟ್ಟಿ, ರಾಮಚಂದ್ರ ಕಾಮತ್, ಚಂದ್ರಶೇಖರ್ ರಾವ್ ಬಪ್ಪಳಿಗೆ, ಕಿರಣ್ ಕುಮಾರ್ ರೈ, ಸುಜೀಂದ್ರ ಪ್ರಭು, ಮಲ್ಲೇಶ್ ಕುಮಾರ್, ಶ್ರೀಧರ ಪಟ್ಲ, ಗಣೇಶ್ ಚೌಕ್ರಾಡಿ, ಸೀಮಾ ಎಂ.ಬಿ ವೀಣಾ ಉಪಸ್ಥಿತರಿದ್ದರು.