ಬಂಟ್ವಾಳ ತಾಲೂಕಿನ ಬೆಳ್ಳೂರು ವಲಯ ಬಂಟರ ಸಂಘದ (ಕರಿಯಂಗಳ, ಬಡಗ ಬೆಳ್ಳೂರು, ತೆಂಕ ಬೆಳ್ಳೂರು, ಕೂರಿಯಾಳ, ಅಮ್ಮುಂಜೆ) ವತಿಯಿಂದ ಸೋಣ ಸಂಭ್ರಮ – 2025 ಕಾರ್ಯಕ್ರಮವು ಸೆಪ್ಟೆಂಬರ್ 14ರಂದು ಭಾನುವಾರ ಬೆಳ್ಳೂರು ಕಾವೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಆಟೊಟ ಸ್ಪರ್ಧೆ, ವಿದ್ಯಾರ್ಥಿ ವೇತನ ನಡೆಯಲಿದೆ. ಸಭಾ ಕಾರ್ಯಕ್ರಮವನ್ನು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು ದೀಪ ಪ್ರಜ್ವಲನೆ ಮಾಡಿ ಆಶೀರ್ವದಿಸಲಿದ್ದಾರೆ. ಅಧ್ಯಕ್ಷತೆಯನ್ನು ಬೆಳ್ಳೂರು ವಲಯ ಬಂಟರ ಸಂಘದ ಅಧ್ಯಕ್ಷ ರಾಧಾಕೃಷ್ಣ ರೈಯವರು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು, ಮಾಜಿ ಸಚಿವ ಬಿ ರಮಾನಾಥ ರೈ, ಶ್ರೀ ಕಾವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘು ಎಲ್ ಶೆಟ್ಟಿ, ಬೆಳ್ಳೂರು ಬಂಟರ ಸಂಘದ ಗೌರವಾಧ್ಯಕ್ಷ ಯಜಮಾನ ರತ್ನಾಕರ ಶೆಟ್ಟಿ ಮುಂಡಡ್ಕ ಗುತ್ತು, ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ, ಬಂಟ್ವಾಳ ತಾಲೂಕು ಬಂಟರ ಸಂಘದ ನಿಕಟ ಪೂರ್ವ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಬಂಟ್ವಾಳ ತಾಲೂಕು ಬಂಟರ ಸಂಘದ ಉಪಾಧ್ಯಕ್ಷ ಐತಪ್ಪ ಆಳ್ವ, ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಅಮ್ಮಂಜೆ, ಬೆಳ್ಳೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಎಂ.ಎಫ್ ನಿರ್ದೇಶಕ ನಂದರಾಮ ರೈ, ಬೆಳ್ಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಕೆ.ಎಂ ಎಫ್ ನಿರ್ದೇಶಕಿ ಸವಿತಾ ಎನ್ ಶೆಟ್ಟಿ, ಬಂಟ್ವಾಳ ತಾಲೂಕು ಬಂಟರ ಸಂಘದ ಕಾರ್ಯದರ್ಶಿ ಸದಾನಂದ ಆಳ್ವ, ಬೆಳ್ಳೂರು ವಲಯ ಬಂಟರ ಸಂಘದ ನಿಕಟ ಪೂರ್ವ ಅಧ್ಯಕ್ಷ ಜನಾರ್ಧನ ಶೆಟ್ಟಿ, ಬೆಳ್ಳೂರು ಗುತ್ತು ಕೃಷ್ಣಪ್ರಸಾದ್ ರೈ ಮುಂತಾದವರೆಲ್ಲ ಭಾಗವಹಿಸಲಿದ್ದಾರೆ.