ಕಳೆದ 25 ವರ್ಷಗಳಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸರ್ವತೋಮುಖ ಅಭಿವೃದ್ದಿಯ ಬಗ್ಗೆ ಯಶಸ್ವಿಯಾಗಿ ಹೋರಾಟ ನಡೆಸುತ್ತಾ ಬಂದಿರುವ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಯ 25ನೇ ಸಂಸ್ಥಾಪನಾ ದಿನಾಚರಣೆಯು ಸೆಪ್ಟೆಂಬರ್ 5 ರಂದು ಸಂಜೆ ಮುಂಬಯಿ ಸಾಕೀನಾಕಾದ ಹೋಟೆಲ್ ಪೆನಿನ್ಸುಲಾ ಗ್ರ್ಯಾಂಡ್ ಇಲ್ಲಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಇವರ ಉಪಸ್ಥಿತಿಯಲ್ಲಿ, ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಶ್ರೀ ದಿಗಂಬರ ಜೈನ ಮಠ ಮೂಡಬಿದಿರೆ ಇದರ ಜಗದ್ಗುರು ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವಾರ್ಯ ಮಹಾಸ್ವಾಮಿಜಿ, ಕರ್ನಾಟಕ ಸರಕಾರದ ಮಾನ್ಯ ಸ್ವೀಕರ್ ಯು.ಟಿ ಖಾದರ್ ಅವರು ಇತರ ಗಣ್ಯರಾದ ಖ್ಯಾತ ಉದ್ಯಮಿ ಸಮಾಜ ಸೇವಕ ಡಾ| ಕನ್ಯಾನ ಸದಾಶಿವ ಶೆಟ್ಟಿ, ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಅಧ್ಯಕ್ಷ ನಿತ್ಯಾನಂದ ಡಿ ಕೋಟ್ಯಾನ್, ದ.ಕ ಜಿಲ್ಲಾ ಕಾರ್ಯಾಧ್ಯಕ್ಷರಾದ ಹರೀಶ್ ಕುಮಾರ್ ಎಂ ಶೆಟ್ಟಿ ದೀಪ ಬೆಳಗಿ ಸಮಾರಂಭಕ್ಕೆ ಚಾಲನೆ ನೀಡಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲಿಯಾನ್, ಉಪಾಧ್ಯಕ್ಷರುಗಳಾದ ಜಗದೀಶ್ ಅಧಿಕಾರಿ, ಚಂದ್ರಶೇಖರ ಆರ್ ಬೆಲ್ಚಡ, ಜಿತೇಂದ್ರ ಗೌಡ, ಸಿಎ ಐ.ಆರ್. ಶೆಟ್ಟಿ, ನ್ಯಾ. ಶಶಿಧರ್ ಯು. ಕಾಪು, ಡಾ| ಆರ್.ಕೆ. ಶೆಟ್ಟಿ, ಆರ್.ಎನ್ ಶೆಟ್ಟಿ, ಶ್ರೀನಿವಾಸ್ ಸಾಫಲ್ಯ, ಗಿರೀಶ್ ಬಿ. ಸಾಲಿಯಾನ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಹರೀಶ್ ಕುಮಾರ್ ಎಂ. ಶೆಟ್ಟಿ, ಗೌರವ ಕಾರ್ಯದರ್ಶಿಗಳಾದ ದೇವದಾಸ್ ಕುಲಾಲ್, ಸಿ.ಎಸ್ ಗಣೇಶ್ ಶೆಟ್ಟಿ, ಹ್ಯಾರಿ ಸಿಕ್ವೇರಾ, ಗೌರವ ಕೋಶಾಧಿಕಾರಿ ಸದಾನಂದ ಎನ್ ಆಚಾರ್ಯ, ಜೊತೆ ಕೊಶಾಧಿಕಾರಿಗಳಾದ ತೋನ್ಸೆ ಸಂಜೀವ ಪೂಜಾರಿ, ಮಹೇಶ್ ಕಾರ್ಕಳ, ಸಮಿತಿಯ ಮಾಜಿ ಅಧ್ಯಕ್ಷರಾದ ಧರ್ಮಪಾಲ ದೇವಾಡಿಗ, ಸಲಹೆಗಾರರಾದ ಪ್ರವೀಣ್ ಭೋಜ ಶೆಟ್ಟಿ, ಬಿ ಸೂರ್ಯಕಾಂತ್ ಜೆ ಸುವರ್ಣ, ರಮಾನಂದ ರಾವ್, ಲಕ್ಷ್ಮಣ ಸಿ. ಪೂಜಾರಿ, ಸಮಿತಿಯ ವಕ್ತಾರ ದಯಾಸಾಗರ ಚೌಟ ಮತ್ತು ಸದಸ್ಯರು, ವಿವಿಧ ಸಂಘ ಸಂಸ್ಥೆಯ ಪ್ರಮುಖರು, ವಿಶೇಷ ಅಹ್ವಾನಿತರು ಉಪಸ್ಥಿತರಿದ್ದರು.
