ವಯೋ ಸಮ್ಮಾನ್ ಪುರಸ್ಕೃತ ಸಾಹಿತಿ ಭೋಜ ಸುವರ್ಣ ಅವರ ಸಾಹಿತ್ಯದ 1971 ಫೆಬ್ರವರಿ 19 ರಂದು ಇತಿಹಾಸದಲ್ಲಿ ಮೊದಲ ತುಳು ಚಿತ್ರವಾಗಿ ಎನ್ನ ತಂಗಡಿ ಬಿಡುಗಡೆ ಕಂಡಿತ್ತು. ಆದರೆ ಆರ್ಥಿಕ ಕಾರಣಗಳಿಂದ ಅಂದಿನ ಗ್ರಾಮೋಪೋನ್ ನಲ್ಲಿ ಅದರ ಹಾಡುಗಳು ಬಿಡುಗಡೆಯಾಗದೆ ಜನ ಸಾಮಾನ್ಯರನ್ನು ಈ ಹಾಡುಗಳು ತಲುಪಲು ಸಾಧ್ಯವಾಗಲಿಲ್ಲ. ಈ ಕೊರಗು ಸಾಹಿತಿ ಭೋಜ ಸುವರ್ಣರನ್ನು ಸದಾ ಕೊರೆಯುತ್ತಿತ್ತು. ವಯೋ ಸಮ್ಮಾನ್ ಸಮಯದಲ್ಲಿ ಇದನ್ನು ಮನಗಂಡ ಐಲೇಸಾ ಆ ಹಾಡಿನ ಪುನರ್ ಸೃಷ್ಟಿಗೆ ಸಂಕಲ್ಪ ಮಾಡಿತ್ತು. ಅದೀಗ ನನಸಾಗುತ್ತಿದೆ. ‘ಮನಸ್ಸ್ ನ್ ನಿರ್ಮಲ ದೀದ್ ಬಾಳ್ಂಡ ಅವ್ವೇ ಒಂಜಿ ಮಂದಿರಾ’ ಎನ್ನುವ ಸಮಾಜಮುಖಿ ಸಂದೇಶದ ಆ ಹಾಡನ್ನು ವಿ. ಮನೋಹರ್ ಭೋಜ ಸುವರ್ಣ ಅವರ ಧ್ವನಿಯಲ್ಲೇ ಹಾಡಿಸಿ ಧ್ವನಿ ಮುದ್ರಿಸಿದ್ದಾರೆ. ಮೂಲ ಹಾಡಿನ ರಾಗ ಸಂಯೋಜನೆಯಲ್ಲಿಯೇ ಹಾಡು ಮೂಡಿ ಬಂದಿದ್ದು ಎಂಭತ್ತೈದರ ಹರೆಯದ ಭೋಜ ಸುವರ್ಣ ಶಕ್ತಿಮೀರಿ ಹಾಡಿ ಅದಕ್ಕೊಂದು ನ್ಯಾಯ ಒದಗಿಸಿದ್ದಾರೆ. ಇದರ ಜೊತೆಗೆ ಅವರೇ ಸಾಹಿತ್ಯ ನೀಡಿದ ‘ಎನ್ನ ಜಾಗೆ ಉಂದು’ ಎನ್ನುವ ಇನ್ನೊಂದು ತತ್ವ ಭರಿತ ಹಾಡನ್ನೂ ಅಂದೇ ಬಿಡುಗಡೆ ಗೊಳಿಸಲಾಗುವುದು.

ಆಲ್ ಅಮೇರಿಕಾ ತುಳು ಅಸೋಸಿಯೇಷನ್ (ರಿ) ಇದರ ಸ್ಥಾಪಕಾಧ್ಯಕ್ಷರಾದ ತುಳು ಭಾಷಾ ಪ್ರೇಮಿ ಭಾಸ್ಕರ್ ಶೇರಿಗಾರ್ ತಮ್ಮ ಸಂಸ್ಥೆಯ ಹೆಸರಿನಲ್ಲಿ ಈ ಎರಡೂ ಹಾಡುಗಳನ್ನು ಪ್ರಾಯೋಜಿಸಿದ್ದು, ಇದು ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ಕಾಪುವಿನ ಜನಪ್ರಿಯ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ತುಳುವಿನ ಖ್ಯಾತ ಬರೆಹಗಾರ ಇಟೆಲಿಯ ಕೌಡೂರು ನಾರಾಯಣ ಶೆಟ್ಟಿ ಮತ್ತು ಅಮೇರಿಕಾ ಕೆಂಟುಕಿಯ ಡಾ. ಜಗನ್ನಾಥ ಸೇರಿಗಾರ್ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಹಾಡುಗಳನ್ನು ಬಿಡುಗಡೆಗೊಳಿಸುವರು. ಕಾರ್ಯಕ್ರಮವನ್ನು ಅಮೇರಿಕಾ ಆಟ ಸಂಸ್ಥೆಯ ಪ್ರಜ್ವಲ್ ಶೆಟ್ಟಿ ನಡೆಸಿಕೊಡುವರು. ಆಟದ ಭಾಸ್ಕರ್ ಸೇರಿಗಾರ್ ಮತ್ತು ಅಧ್ಯಕ್ಷೆ ಶ್ರೀವಲ್ಲಿ ರೈ ಮಾರ್ಟೆಲ್ ಆಟ ಸಂಸ್ಥೆಯ ಕಾರ್ಯಚಟುವಟಿಕೆಗಳ ವಿವರ ನೀಡುವರು. ಗೋಪಾಲ್ ಪಟ್ಟೆ ವೀಡಿಯೋ ನಿರ್ಮಿಸಿ ತಾಂತ್ರಿಕವಾಗಿಯೂ ಸಹಕರಿಸಿದ್ದಾರೆ.ಬಿಡುಗಡೆ ಕಾರ್ಯಕ್ರಮ ಆದಿತ್ಯವಾರ ಸಂಜೆ 7:00 ಗಂಟೆಗೆ ಜೂಮ್ ವೇದಿಕೆಯಲ್ಲಿ ನಡೆಯಲಿದ್ದು, ಈ ಐತಿಹಾಸಿಕ ಹಾಡಿನ ಬಿಡುಗಡೆಯಲ್ಲಿ ಜೂಮ್ ಗುರುತು ಸಂಖ್ಯೆ 5340283988 ಮತ್ತು ಪಾಸ್ ಕೋಡ್ 0324 ಬಳಸಿ ಸೇರಿಕೊಳ್ಳಬಹುದು ಎಂದು ಐಲೇಸಾದ ಮಾಧ್ಯಮ ಸಂಚಾಲಕ ಸುರೇಂದ್ರ ಶೆಟ್ಟಿ ಮಾರ್ನಾಡು ತಿಳಿಸಿದ್ದಾರೆ.