ಚಿಣ್ಣರಬಿಂಬ ಪ್ರತಿವರ್ಷ ಶಿಬಿರ ಮಟ್ಟದಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿರುವುದು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. ಮುಂಬಯಿ ಮರಾಠಿ ನೆಲದಲ್ಲಿ ಚಿಣ್ಣರು ಕನ್ನಡ ಮಾತು ಕೇಳಲು ನಿಜಕ್ಕೂ ಸಂತೋಷವಾಗುತ್ತದೆ. ಇಂದು ಎಸ್.ಎಂ ಶೆಟ್ಟಿ ಶಿಬಿರದ ಮಕ್ಕಳ ಸ್ಪರ್ಧೆ ಉತ್ತಮವಾಗಿ ಮೂಡಿಬರುತ್ತಿದೆ. ಇಲ್ಲಿ ಎಲ್ಲರೂ ಉತ್ಸಾಹದಿಂದ ಕೆಲಸ ಮಾಡುತ್ತಿದ್ದೀರಿ. ಮಕ್ಕಳಲ್ಲಿರುವ ಪ್ರತಿಭೆಗೆ ಅವಕಾಶವನ್ನು ನೀಡುವ ಇಂತಹ ಸ್ಪರ್ಧೆಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸೋಪಾನವಾಗಬಲ್ಲದು ಎಂದು ಚಿಣ್ಣರಬಿಂಬದ ರೂವಾರಿ ಶ್ರೀ ಪ್ರಕಾಶ್ ಭಂಡಾರಿ ಅವರು ನುಡಿದರು. ಅವರು ಆಗಸ್ಟ್ 24ರಂದು ರವಿವಾರ ಮಧ್ಯಾಹ್ನ 1ಗಂಟೆಗೆ ಬಂಟರ ಸಂಘ ಎಸ್ ಎಮ್ ಶೆಟ್ಟಿ ಹೈಸ್ಕೂಲ್ ಹಾಗೂ ಜೂನಿಯರ್ ಕಾಲೇಜಿನ ಏಳನೇಯ ಮಹಡಿಯ ಸಭಾಂಗಣದಲ್ಲಿ ನಡೆದ ಮಕ್ಕಳ ಪ್ರತಿಭಾನ್ವೇಷಣೆ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದರು. ಅವರು ಪಾಲಕರನ್ನು ಹಾಗೂ ಚಿಣ್ಣರನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರತಿ ರವಿವಾರ ಶಿಬಿರದಲ್ಲಿ ಕನ್ನಡ ಮತ್ತು ಭಜನೆ ತರಗತಿ ನಡೆಯುತ್ತಿದೆ. ಶಿಬಿರ ಮುಖ್ಯಸ್ಥರು, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರು, ಕನ್ನಡ ಮತ್ತು ಭಜನೆ ಶಿಕ್ಷಕಿಯರು ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಪಾಲಕರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವಿರಿ. ಮಕ್ಕಳು ಇನ್ನು ಮುಂದೆಯೂ ಎಲ್ಲಾ ಸ್ಪರ್ಧೆಗಳಲ್ಲಿಯೂ ಉತ್ಸಾಹದಿಂದ ಭಾಗವಹಿಸಿ ನಮ್ಮ ನಾಡಿನ ಭಾಷೆ, ಸಂಸ್ಕೃತಿ, ಹಬ್ಬ ಹರಿದಿನಗಳ ಬಗ್ಗೆ ಇನ್ನು ಹೆಚ್ಚು ತಿಳಿದುಕೊಳ್ಳುವ ಪ್ರಯತ್ನ ಮಾಡಿರಿ ಎಂದರು.

ಚಿಣ್ಣರಬಿಂಬ ಮತ್ತು ನನ್ನದು ಹಳೆಯ ನಂಟು. ನನ್ನ ಮಕ್ಕಳು ಚಿಣ್ಣರ ಬಿಂಬದ ವಿದ್ಯಾರ್ಥಿಗಳು. ಪ್ರಕಾಶ್ ಅಣ್ಣನವರು ಪ್ರತಿಯೊಂದು ಮಕ್ಕಳ ಪ್ರತಿಭೆಗೆ ತಕ್ಕಂತೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ನಮ್ಮ ನಾಡಿನ ಆಚಾರ ವಿಚಾರ, ಹಬ್ಬ ಹರಿದಿನಗಳು, ಭಾಷೆ, ಸಂಸ್ಕೃತಿ ಹೀಗೆ ಹತ್ತು ಹಲವಾರು ವಿಚಾರಗಳನ್ನು ಕಲಿಯಲು ಸಿಗುವಾಗ ಎಲ್ಲರೂ ಇದರ ಅವಕಾಶವನ್ನು ಪಡೆದುಕೊಳ್ಳಬೇಕು ಎಂದು ಸಭಾಧ್ಯಕ್ಷರಾಗಿ ಆಗಮಿಸಿದ್ದ ಶ್ರೀ ಡಿ ಎಂ ಕೋಟ್ಯಾನ್ ಅವರು ನುಡಿದರು. ಉದ್ಘಾಟಕರಾಗಿ ಆಗಮಿಸಿದ್ದ ಶ್ರೀಮತಿ ಅನುಸೂಯ ದಾನೇಶ್ ಶೆಟ್ಟಿ ಅವರು, ಮಕ್ಕಳೆಲ್ಲರೂ ಸ್ಪರ್ಧೆಯಲ್ಲಿ ಬಹಳ ಚೆನ್ನಾಗಿ ಭಾಗವಹಿಸಿದ್ದಾರೆ. ಎಲ್ಲರಿಗೂ ಅಭಿನಂದನೆಗಳು. ಪಾಲಕರು ತಮ್ಮ ಮಕ್ಕಳನ್ನು ತರಗತಿಗೆ ಕರೆದುಕೊಂಡು ಬರುವುದರ ಜೊತೆಗೆ ಸ್ಪರ್ಧೆಗೆ ಮಕ್ಕಳನ್ನು ತಯಾರು ಮಾಡಿದ್ದಾರೆ. ಪಾಲಕರ ಪರಿಶ್ರಮಕ್ಕೆ ಶಹಭಾಷ್ ನೀಡಬೇಕು ಎಂದರು. ಗೌರವ ಅತಿಥಿ ಶ್ರೀಮತಿ ಪುಷ್ಪಲತಾ ಸೂರಜ್ ಶೆಟ್ಟಿ ಅವರು, ಮಕ್ಕಳನ್ನು ಕಂಡು, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿನಂತೆ ಮಕ್ಕಳು ಇಷ್ಟು ಸಣ್ಣ ಪ್ರಾಯದಲ್ಲಿ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೀರಿ. ನಿಮ್ಮ ತಾಳ್ಮೆ, ಪ್ರಯತ್ನ ಕಂಡು ಮೆಚ್ಚಲೇಬೇಕು. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದೊಡ್ಡ ಜವಾಬ್ದಾರಿ ಮಕ್ಕಳ ಹೆಗಲ ಮೇಲಿದೆ ಎಂದರು.ಚಿಣ್ಣರಬಿಂಬ ಕನ್ನಡ ಕಲಿಕಾ ತರಗತಿಗಳ ಮುಖ್ಯಸ್ಥೆ ಡಾ| ಪೂರ್ಣಿಮಾ ಶೆಟ್ಟಿ ಅವರು ಮಾತನಾಡುತ್ತಾ, ಮುಂಬಯಿಯಲ್ಲಿ ಚಿಣ್ಣರಬಿಂಬ ಪ್ರಕಾಶ್ ಭಂಡಾರಿ ಅವರ ನೇತೃತ್ವದಲ್ಲಿ ಕನ್ನಡದ ಕ್ರಾಂತಿಯನ್ನು ಮಾಡುತ್ತಿದೆ. ಪ್ರತಿ ವರ್ಷ ನಾವು ಶಿಬಿರ ಮಟ್ಟದಿಂದ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬರುತ್ತಿದ್ದೇವೆ. ಇಷ್ಟು ಮಕ್ಕಳು ಬೇರೆ ಬೇರೆ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವುದನ್ನು ನೋಡಿ ಸಂತೋಷವಾಗುತ್ತದೆ ಎಂದರು. ವಿಶೇಷ ಅತಿಥಿಯಾಗಿ ಆಗಮಿಸಿದ ಲೇಖಕಿ ವಿದ್ಯಾ ರಾಮಕೃಷ್ಣ ಅವರು, ಅಂದು ನಮ್ಮ ಸಂಸ್ಕೃತಿಯನ್ನು ವಿದ್ಯಾರ್ಥಿ ದೆಸೆಯಲ್ಲಿ ಮೈಗೂಡಿಸಿಕೊಳ್ಳುವ ಬಗೆಯ ಕುರಿತು ಮಕ್ಕಳಿಗೆ ವಿಚಾರಗಳನ್ನು ತಿಳಿ ಹೇಳಿದರು. ಸಂಸ್ಕೃತಿಯಲ್ಲಿ ಹಲವು ಬಗೆಗಳಿವೆ. ಧಾರ್ಮಿಕ ಆಚರಣೆಗಳು, ಹಬ್ಬ ಹರಿದಿನಗಳು, ಭಾಷೆಗಳು, ಸಂಪ್ರದಾಯಗಳು, ಪದ್ದತಿಗಳು ಹೀಗೆ ಅನೇಕ ವಿಚಾರಗಳು ಒಳಗೊಂಡಿವೆ. ಇದರ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕು. ಯಾವ ಆಚರಣೆ ಸರಿ ಅಥವಾ ತಪ್ಪು ಅದರ ಬಗ್ಗೆಯೂ ಮಾಹಿತಿ ನೀಡಬೇಕು. ದೇವರಿಗೆ ದಿನಾ ಪ್ರಾರ್ಥನೆ ಮಾಡಬೇಕು. ದೇವರಲ್ಲಿ ಕಷ್ಟ ಸುಖ ಹಂಚಿಕೊಳ್ಳಬೇಕು. ಎಲ್ಲರೂ ಸರ್ವೆ ಜನ ಸುಖಿನೋ ಭವತು ಎಂಬ ಉದಾರ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕೇಂದ್ರ ಸಮಿತಿಯ ಸದಸ್ಯರಾದ ರಮೇಶ್ ರೈ, ವಿಜಯ್ ಕೋಟ್ಯಾನ್, ಸಂಜೀವ್ ಪೂಜಾರಿ ತೋನ್ಸೆ, ರಾಜವರ್ಮ ಜೈನ್, ಪ್ರಶಾಂತಿ ಡಿ. ಶೆಟ್ಟಿ, ಸವಿತಾ ಕೆ ಶೆಟ್ಟಿ, ದೇವಿಕಾ ಶೆಟ್ಟಿ, ವಲಯ ಮುಖ್ಯಸ್ಥೆ ಉಷಾ ಶೇರಿಗಾರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಅನಿತಾ ಶೆಟ್ಟಿ ಅವರ ನೇತೃತ್ವದಲ್ಲಿ ವಿವಿಧ ಸ್ಪರ್ಧೆಗಳು ಶಿಸ್ತುಬದ್ಧವಾಗಿ ನಡೆದವು. ತೀರ್ಪುಗಾರರಾಗಿ ಆಗಮಿಸಿದ್ದ ಶಿಕ್ಷಕಿ ಶ್ರೀಮತಿ ಶಾಲಿನಿ ರಮೇಶ್ ಭಂಡಾರಿಯವರು ಮಾತನಾಡಿ, ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದಬೇಕು. ಪುಸ್ತಕಗಳು ನಮ್ಮನ್ನು ತಲೆಯೆತ್ತಿ ನಡೆಯುವಂತೆ ಮಾಡುತ್ತದೆ. ಅದೇ ಮೊಬೈಲ್ ಗಳು ತಲೆ ತಗ್ಗುವಂತೆ ಮಾಡುತ್ತವೆ ಎಂದು ಬುದ್ಧಿ ಮಾತು ಹೇಳಿದರು ಹಾಗೂ ಅಮಿತ್ ಜೆ ಶೆಟ್ಟಿಯವರು ಮಾತನಾಡುತ್ತಾ, ಚಿಣ್ಣರ ಬಿಂಬ ಸಂಸ್ಥೆ ಮುಂಬಯಿ ಮಹಾನಗರದಲ್ಲಿಯೇ ಅತ್ಯಂತ ಹೆಸರು ಪಡೆದ ಸಂಸ್ಥೆ. ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ಈ ಸಂಸ್ಥೆ ವರದಾನವಾಗಿದೆ ಎಂದರು. ಶಿಬಿರ ಮುಖ್ಯಸ್ಥೆ ಶ್ರೀಮತಿ ಜ್ಯೋತಿ ಶೆಟ್ಟಿಯವರು ಪ್ರಾಸ್ತವಿಕ ನುಡಿಗಳನ್ನಾಡಿದರು. ಉಮಾ ಮಹೇಶ್ವರಿ ಶಿಬಿರದ ಮಾಜಿ ಶಿಬಿರ ಮುಖ್ಯಸ್ಥೆ ಅಂಬಿಕಾ ಶೆಟ್ಟಿ ಮತ್ತು ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ಸವಿತಾ ಶೆಟ್ಟಿ, ಸಾಕಿನಾಕ ಶಿಬಿರದ ಶಿಬಿರ ಮುಖ್ಯಸ್ಥೆ ಶೋಭಾ ಅಮೀನ್ ಅವರು ಆಗಮಿಸಿದ್ದರು. ಪೊವಾಯಿ ಕನ್ನಡ ಸೇವಾ ಸಂಘದ ಕೋಶಾಧಿಕಾರಿ ಜಗನ್ನಾಥ್ ಕೆ ಶೆಟ್ಟಿ, ಭಜನಾ ಕಾರ್ಯಾಧ್ಯಕ್ಷೆ ಇಂದಿರಾ ಎಮ್ ಪೂಜಾರಿ, ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಸದಸ್ಯರು, ಹೀಗೆ ಆಗಮಿಸಿದ ಎಲ್ಲಾ ಅತಿಥಿಗಳನ್ನು ಪುಷ್ಪ ಗುಚ್ಛ ನೀಡಿ ಗೌರವಿಸಲಾಯಿತು. ಈ ವರುಷ ಪರಿಸರದ 3 ರಿಂದ ಆರು ವರ್ಷದೊಳಗಿನ ತುಳು ಕನ್ನಡಿಗ ಮಕ್ಕಳಿಗಾಗಿ ಶ್ರೀ ಕೃಷ್ಣ ವೇಷ ಸ್ಪರ್ಧೆಯನ್ನು ವಿಶೇಷವಾಗಿ ಆಯೋಜಿಸಲಾಗಿತ್ತು. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳಲ್ಲದೆ ಭಾಗವಹಿಸಿದ ಪುಟಾಣಿಗಳಿಗೆ ಪ್ರೋತ್ಸಾಹಕರ ಬಹುಮಾನವನ್ನು ನೀಡಲಾಯಿತು. ಶಿಬಿರದ ಪದಾಧಿಕಾರಿಗಳಾದ ಜ್ಯೋತಿ ಶೆಟ್ಟಿ, ವನಿತಾ ಶೆಟ್ಟಿ, ಕನ್ನಡ ಹಾಗೂ ಭಜನೆ ಶಿಕ್ಷಕರಾದ ಅನಿತಾ ಎಸ್ ಶೆಟ್ಟಿ, ವಿಮಲ ದೇವಾಡಿಗ, ಆಶಾ ಶೆಟ್ಟಿ, ಚಂದ್ರಕಲಾ ಶೆಟ್ಟಿ, ಸೌಮ್ಯ ಪೂಜಾರಿ, ಮಾಜಿ ಪದಾಧಿಕಾರಿಗಳಾದ ದೇವಿಕಾ ಶೆಟ್ಟಿ, ಸುಜಾತ ಶೆಟ್ಟಿ, ಸರಸ್ವತಿ ದೇವಾಡಿಗ, ಉಷಾ ದೇವಾಡಿಗ ಎಲ್ಲರಿಗೂ ಶಾಲು ಹೊದಿಸಿ, ಪುಷ್ಪ ಗುಚ್ಛ ನೀಡಿ ಗೌರವಿಸಲಾಯಿತು.
ಹತ್ತನೇಯ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಲಾಸ್ಯ ಶೆಟ್ಟಿ ಹಾಗೂ ಉದಿತ್ ದೇವಾಡಿಗ ಅಲ್ಲದೆ ಶ್ರೀ ಕೃಷ್ಣ ವೇಷ ಹಾಗೂ ಛದ್ಮವೇಷದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪೋತ್ಸಾಹಕರ ಬಹುಮಾನ ನೀಡಲಾಯಿತು. ಜೀವಿಕಾ ಶೆಟ್ಟಿ, ಮಾನಸ ದೇವಾಡಿಗ, ಲವ್ಯ ಶೆಟ್ಟಿ, ಆಯುಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಲಾ ಶೆಟ್ಟಿ ಹಾಗೂ ಸರಸ್ವತಿ ದೇವಾಡಿಗ ಅವರು ಸಹಕರಿಸಿದರು. ಪ್ರಾರ್ಥನೆ ಹಾಗೂ ಅತಿಥಿಗಳ ಪರಿಚಯವನ್ನು ಇಚ್ಛಾ ಪೂಜಾರಿ, ವರುಣ್ ದೇವಾಡಿಗ, ಆಯನ್ ಕೊಠಾರಿ, ನಿಧಿ ದೇವಾಡಿಗ, ಲತೀಕ್ಷಾ ಪೂಜಾರಿ, ರೋಶಿನಿ ತುಕ್ಕುನೂರು, ಉನ್ನತಿ ದೇವಾಡಿಗ ಅವರು ಮಾಡಿದರು. ನೃತ್ಯದಲ್ಲಿ ವೀಕ್ಷಾ ಶೆಟ್ಟಿ ಹಾಗೂ ಇಚ್ಛಾ ಪೂಜಾರಿ ಅವರು ಭಾಗವಹಿಸಿದ್ದರು. ಪಾಲಕರು ಸಮೂಹ ಗೀತೆಯನ್ನು ಹಾಡಿದರು. ಶಿಬಿರದ ಮಾಜಿ ಮುಖ್ಯಸ್ಥರಾದ ಅನಿತಾ ಯು ಶೆಟ್ಟಿ, ನಾರಾಯಣ ದೇವಾಡಿಗ ಹಾಗೂ ನಾಗರಾಜ ಪೂಜಾರಿ, ಉಮೇಶ್ ದೇವಾಡಿಗ, ಉದಿತ್ ದೇವಾಡಿಗ, ಅಶ್ವಿಜಾ ರೈ, ಮಿಲನಾ ಶೆಟ್ಟಿ, ಜಯಲಕ್ಷ್ಮಿ ಪೂಜಾರಿ, ಸವಿತಾ ದೇವಾಡಿಗ, ಪ್ರಮೀಳಾ ಶೆಟ್ಟಿ, ಸುಲೋಚನಾ ಕೊಠಾರಿ, ಶೋಭಾ ಪೂಜಾರಿ, ಪೂಜಿತ್ ಶೆಟ್ಟಿ, ತನೀಷ್ ಶೆಟ್ಟಿ, ಗೌರವ ಪೂಜಾರಿ, ಮಿಥಾಂಶ್ ರೈ ಹಾಗೂ ಶಿಬಿರದ ಎಲ್ಲಾ ಪಾಲಕರು, ಮಕ್ಕಳು ಕಾರ್ಯಕ್ರಮ ಯಶಸ್ಸಿಯಾಗುಗವಲ್ಲಿ ಸಹಕರಿಸಿದರು. ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ವನಿತಾ ಶೆಟ್ಟಿಯವರು ಧನ್ಯವಾದಗೈದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯ ಮಾಡಲಾಯಿತು. ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.