ಕಲ್ಯಾಣ್ ಸೀಲ್ ಪಾಟ ರೋಡ್ ಡೊಂಬಿವಲಿ ಪೂರ್ವದಲ್ಲಿರುವ ಹೋಟೆಲ್ ತನಿಷ್ಕಾ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಆಗಸ್ಟ್ 27 ರ ಬುಧವಾರದಿಂದ ಸೆಪ್ಟೆಂಬರ್ 6 ರ ಶನಿವಾರದ ತನಕ ನಾಲ್ಕನೇ ವರ್ಷದ ಗಣೇಶೋತ್ಸವದ ಅಂಗವಾಗಿ ‘ತನಿಷ್ಕಾ ಕಾ ರಾಜಾ’ನನ್ನು ಪ್ರತಿಷ್ಠಾಪಿಸಿ, ವಿಜೃಂಭಣೆಯಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹೋಟೆಲ್ ನ ಮಾಲಕ ಕಲ್ಯಾ ಗುರ್ಮೆದ ಬೈಲು ಗಣೇಶ್ ಹೆಚ್ ಶೆಟ್ಟಿ ಮತ್ತು ಪರಿವಾರ ಸದಸ್ಯರು ಆಚರಿಸಿಕೊಂಡು ಬರುತ್ತಿದ್ದಾರೆ.

ಸೆಪ್ಟೆಂಬರ್ 6ರ ಶನಿವಾರದಂದು ಅನಂತ ಚತುರ್ದಶಿ ಪ್ರಯುಕ್ತ ಅಜ್ಡೆಪಾಡ ಅಯ್ಯಪ್ಪ ಮಂದಿರದ ಅರ್ಚಕ ರಾಮಚಂದ್ರ ಬಾಯರಿ ಅವರ ಪೌರೋಹಿತ್ಯದೊಂದಿಗೆ ಬೆಳಗ್ಗೆ 11 ರಿಂದ 01ರ ತನಕ ಶ್ರೀ ಸತ್ಯನಾರಾಯಣ ಮಹಾಪೂಜೆ, 01 ರಿಂದ 03 ರ ತನಕ ಅನ್ನದಾನ ಜರಗಲಿದೆ. ಸಂಜೆ 04 ಗಂಟೆಗೆ ಉಡುಪಿಯಿಂದ ಆಗಮಿಸಲಿರುವ ಹುಲಿ ವೇಷ, ಯಕ್ಷಗಾನ ವೇಷ ಮುಂತಾದ ಮನೋರಂಜನಾ ವೇಷಗಳೊಂದಿಗೆ ಗಣೇಶ ಮೂರ್ತಿಯನ್ನು ಭವ್ಯ ಮೆರವಣಿಗೆಯೊಂದಿಗೆ ವಿಸರ್ಜನೆ ಮಾಡಲಿದ್ದಾರೆ ಎಂದು ಕಲ್ಯಾ ಗುರ್ಮೆದ ಬೈಲು ಗಣೇಶ ಶೆಟ್ಟಿ ತಿಳಿಸಿದ್ದಾರೆ.