ತಾಯ್ನಾಡಿನ ಸಂಸ್ಕೃತಿ ಮತ್ತು ಧರ್ಮವನ್ನು ಪ್ರೋತ್ಸಾಹಿಸುತ್ತಿರುವ ಕಲೆಗೆ ಸದಾ ನಾವು ಪ್ರೋತ್ಸಾಹಿಸಬೇಕು. ನಮ್ಮ ತಾಯ್ನಾಡಿನ ಮಣ್ಣಿನ ಪರಂಪರೆ ಅಗಾಧವಾದುದು. ದೈವ ದೇವರುಗಳ ಪ್ರತೀಕಗಳು ನಮ್ಮ ಮುಂದಿನ ಪೀಳಿಗೆಗಳಲ್ಲೂ ಜಾಗೃತವಾಗಿರಿಸುವಂತಹ ಕಾಲವಿದು. ಧರ್ಮ ಜಾಗೃತಿಯ ಕಲೆಗಳಿಗೆ ನಮ್ಮೂರವರ ಬೆಂಬಲ ಅತ್ಯಗತ್ಯ ಎಂದು ಬಂಟ್ಸ್ ಪೋರಂ ಮೀರಾ ಭಯಂದರ್ ಇದರ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಜಯಪ್ರಕಾಶ್ ಭಂಡಾರಿಯವರು ನುಡಿದರು. ಅವರು ಆಗಸ್ಟ್ 10 ರಂದು ಮ್ಯಾಕ್ಸಸ್ ಮಾಲ್ ಸಿನೇಮಾ ಮಂದಿರದಲ್ಲಿ ದ್ವಿತೀಯ ಬಾರಿಗೆ ಹೌಸ್ ಫುಲ್ ಪ್ರದರ್ಶನದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಧರ್ಮಚಾವಡಿ ತುಳು ಚಲನಚಿತ್ರದ ಪ್ರಾರಂಭದಲ್ಲಿ ಗಣ್ಯರೊಂದಿಗೆ ದೀಪ ಪ್ರಜ್ವಲನೆಗೈದು ಮಾತನಾಡುತ್ತಿದ್ದರು.

ಅಧ್ಯಕ್ಷತೆಯನ್ನು ವಹಿಸಿದ್ದ ಬಂಟ್ಸ್ ಪೋರಂ ಮೀರಾ ಭಯಂದರ್ ನ ಅಧ್ಯಕ್ಷ ಮಲಾರಬೀಡು ಉದಯ ಎಂ. ಶೆಟ್ಟಿಯವರು ಧರ್ಮ ಜಾಗೃತಿಯ ಬಗ್ಗೆ ಉತ್ತಮ ಸಂದೇಶವುಳ್ಳ ಇಂತಹ ಕಲಾಪ್ರರ್ಶನಗಳು ಸದಾ ಮೂಡಿಬರಲಿ ಎಂದು ಹಾರೈಸಿದರು. ಉದ್ಘಾಟನಾ ಸಮಾರಭದಲ್ಲಿ ಜಯ ಪ್ರಕಾಶ್ ಭಂಡಾರಿ (ಮಾಜಿ ಅಧ್ಯಕ್ಷರು: ಬಂಟ್ಸ್ ಪೋರಮ್ ಮೀರಾ – ಭಯಂದರ್), ಉದಯ ಶೆಟ್ಟಿ ಮಲಾರಬೀಡು (ಅಧ್ಯಕ್ಷರು: ಬಂಟ್ಸ್ ಪೋರಂ ಮೀರಾ – ಭಯಂದರ್), ಭಾಸ್ಕರ್ ಶೆಟ್ಟಿ ಕಾಶಿಮೀರಾ (ಉದ್ಯಮಿ ಕಲಾಪೋಷಕ), ಬಾಬಾ ರಂಜನ್ ಶೆಟ್ಟಿ (ಟ್ರಸ್ಟಿ : ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮೀರಾ ಗಾಂವ್) ಹರೀಶ್ ಕುಮಾರ್ ಶೆಟ್ಟಿ ಮಾಣಿ (ಮಾಜಿ ಕಾರ್ಯಾಧ್ಯಕ್ಷರು, ಬಂಟರ ಸಂಘ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿ), ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರು (ಕಾರ್ಯದರ್ಶಿ, ಮಾತೃಭೂಮಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿ), ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಗುತ್ತು, ಸಮಾಜ ಸೇವಕರು), ಗಿರೀಶ್ ಶೆಟ್ಟಿ ಸೂಡ (ಉದ್ಯಮಿ, ಸಮಾಜ ಸೇವಕರು), ಶಶಿಧರ್ ಬಂಗೇರ (ಉದ್ಯಮಿ, ಸಮಾಜ ಸೇವಕರು), ಶಂಕರ್ ಕೆ. ಶೆಟ್ಟಿ ಬೋಳ (ಕೋಶಾಧಿಕಾರಿ, ಬಂಟರ ಸಂಘ ಮೀರಾ – ಭಯಂದರ್ ಪ್ರಾದೇಶಿಕ ಸಮಿತಿ), ಜಗದೀಶ್ ಶೆಟ್ಟಿ
(ಜೊತೆ ಕೋಶಾಧಿಕಾರಿ, ಬಂಟರ ಸಂಘ ಮೀರಾ – ಭಯಂದರ್ ಪ್ರಾದೇಶಿಕ ಸಮಿತಿ), ಪ್ರಸಾದ್ ಶೆಟ್ಟಿ ನೀರೆ ಬೈಲೂರು (ಉದ್ಯಮಿ , ಕಲಾ ಪೋಷಕರು), ರವೀಂದ್ರ ಶೆಟ್ಟಿ ದೇರಳಕಟ್ಟೆ (ಸಮಾಜ ಸೇವಕರು), ರಾಜೇಶ್ ಶೆಟ್ಟಿ – ತಿರುಪತಿ ಕ್ಯಾಟರರ್ಸ್, ತನುಜ ವೀರ್ ಕರ್ (ಸಮಾಜ ಸೇವಕಿ), ನವೀನ ಜಯಪ್ರಕಾಶ್ ಭಂಡಾರಿ (ಕಾರ್ಯಾಧ್ಯಕ್ಷೆ, ಭಜನಾ ಸಮಿತಿ, ಬಂಟ್ಸ್ ಪೋರಮ್ ಮೀರಾ – ಭಯಂದರ್), ಅಮಿತಾ ಕಿಶೋರ್ ಶೆಟ್ಟಿ (ಮಾಜಿ ಕಾರ್ಯಾಧ್ಯಕ್ಷೆ ಬಂಟರ ಸಂಘ ಮೀರಾ – ಭಯಂದರ್ ಪ್ರಾದೇಶಿಕ ಸಮಿತಿ), ಆಕಾಂಕ್ಷಾ ವೀರ್ ಕರ್ ಮಾತ್ರವಲ್ಲದೇ ಸ್ಥಳೀಯ ಸಂಸ್ಥೆಯ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗಣ್ಯರಿಗೆ ತುಳುನಾಡ ಪ್ರತೀಕದ ಶಾಲು ಹೊದಿಸಿ ಗೌರವಿಸಲಾಯಿತು.
ಉದ್ಘಾಟನಾ ಸಮಾರಂಭದ ಕಾರ್ಯಕ್ರಮದ ನಿರೂಪಣೆಯನ್ನು ಚಿತ್ರದ ನಟ ಬಾಬಾ ಪ್ರಸಾದ್ ಅರಸರವರು ನಿರೂಪಿಸಿದರು. ತದನಂತರ ತುಂಬಿದ ಚಿತ್ರಗೃಹದಲ್ಲಿ ಧರ್ಮ ಚಾವಡಿ ತುಳು ಚಲನಚಿತ್ರವು ಪ್ರದರ್ಶನಗೊಂಡಿತು.