ಕಲಾ ಸಾಧನ ಸಂಸ್ಥೆ ಮಂಗಳೂರು ವತಿಯಿಂದ ನಗರದ ಓಷಿಯನ್ ಪರ್ಲ್ ಸಭಾಂಗಣದಲ್ಲಿ ಆಯೋಜಿಸಲಾದ ಸ್ವರ ಧಾರಾ ಸಂಗೀತ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಶುಭ ಹಾರೈಸಿದರು. ಸಮಾರಂಭದಲ್ಲಿ ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕಿಶೋರ್ ಆಳ್ವ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಾಜಿ ಮೇಯರ್ ಹಾಗೂ ಕ್ಯಾರ್ದೋ ಲೈಟ್ ಸಂಸ್ಥೆ ಮಹಾ ಪ್ರಬಂಧಕ ಕೆ. ದಿವಾಕರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಸಂಗೀತ ಮನರಂಜಿಸುವುದಲ್ಲದೇ ಅದರಿಂದ ಆರೋಗ್ಯಕ್ಕೆ ಕೂಡಾ ಉತ್ತಮ ಔಷಧಿ ಇದ್ದಂತೆ, ಬಹಳ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದೀರಿ. ಇದು ನಿರಂತರವಾಗಿ ನಡೆಯಲಿ ಎಂದರು.

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಮಹಾಪ್ರ ಬಂಧಕ ಅರುಣ ಪ್ರಭಾ, ಕುವೈಟ್ ನ ಇಂಜಿನಿಯರ್ ಮಂಜೇಶ್ವರ ಮೋಹನ್ ದಾಸ್ ಕಾಮತ್, ಅನಘಾ ರಿಫೈನರಿಯ ಆಡಳಿತ ನಿರ್ದೇಶಕ ಸಾಂಬಾ ಶಿವರಾವ್ ನಡೆಲ್ಲಾ, ಭಾರತ್ ಆಗ್ರೋ ಲಿಮಿಟೆಡ್ ನ ಆಡಳಿತ ನಿರ್ದೇಶಕ ಡಾ. ಅರುಣ್ ರೈ, ಕಲಾ ಸಾಧನ ಸಂಸ್ಥೆ ನಿರ್ದೇಶಕಿ ವಿಭಾ ಶ್ರೀನಿವಾಸ್ ನಾಯಕ್, ಕಲಾವಿದರಾದ ಕುಮಾರ್ ಮರ್ದುರ್, ಅಕ್ಷಯ್ ಜೋಶಿ ಧಾರವಾಡ, ಸತೀಶ್ ಭಟ್ ಹೆಗ್ಗಾರ್ ಉಪಸ್ಥಿತರಿದ್ದರು. ಸಂಸ್ಥೆಯ ಗೌರವ ಸಲಹೆಗಾರರಾದ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪಾಂಡುರಂಗ ಆಚಾರ್ಯ ವಂದಿಸಿದರು.