ಪುಣೆ ತುಳು ಕೂಟದ 26ನೇ ವಾರ್ಷಿಕೋತ್ಸವ ಸಮಾರಂಭವು ಆಗಸ್ಟ್ 15 ರಂದು ಮದ್ಯಾಹ್ನ 2 ಗಂಟೆಯಿಂದ ಪುಣೆಯ ಬಾಣೇರ್ ನಲ್ಲಿಯ ಬಂಟರ ಭವನದ ಓಣಿ ಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನದಲ್ಲಿ ವೈವಿದ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ, ತುಳುನಾಡ ಸಂಸ್ಕೃತಿ ರೂಪಕ ಮತ್ತು ಸಭಾ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ತುಳು ಕೂಟ ಪುಣೆ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು ಅಶ್ವಥಗುತ್ತುರವರ ಅಧ್ಯಕ್ಷತೆಯಲ್ಲಿ ಜರಗಲಿರುವ 26ನೇ ವಾರ್ಷಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಖಿಲ ಭಾರತ ತುಳು ಒಕ್ಕೂಟದ ಮಾಜಿ ಅಧ್ಯಕ್ಷ, ವಿಶ್ವ ದೇವಾಡಿಗ ಮಹಾ ಮಂಡಲದ ಅಧ್ಯಕ್ಷ, ಮುಂಬಯಿ ದೇವಾಡಿಗ ಸಂಘದ ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಧರ್ಮಪಾಲ್ ದೇವಾಡಿಗ, ಗೌರವ ಅತಿಥಿಗಳಾಗಿ ಪುಣೆ ಬಂಟರ ಸಂಘದ ಅಧ್ಯಕ್ಷ ಅಜಿತ್ ಹೆಗ್ಡೆ ಕೆಂಜಾರು ಗುತ್ತು, ಭದ್ರಾವತಿಯ ಪ್ರತಿಷ್ಟಿತ ಉದ್ಯಮಿ, ಭದ್ರಾವತಿ ಬಂಟರ ಸಂಘದ ಅಧ್ಯಕ್ಷ, ಲಯನ್ಸ್ ಕ್ಲಬ್ ಮಾಜಿ ಗವರ್ನರ್ ಲ| ದಿವಾಕರ್ ಶೆಟ್ಟಿ, ಸಾಹಿತಿ ಮುದ್ದು ಮೂಡುಬೆಳ್ಳೆ ಆಗಮಿಸಲಿದ್ದಾರೆ.

ತುಳು ಕೂಟದ ರಜತ ಮಹೋತ್ಸವ ಸವಿ ನೆನಪಿಗಾಗಿ ಈ ವರ್ಷದಿಂದ ತುಳು ಬಾಷೆ ಕಲೆ ಸಂಸ್ಕ್ರತಿಗೆ ದುಡಿದು ಸಾಧನೆ ಮಾಡಿದ ಮತ್ತು ಸಾಮಾಜಿಕ ಸೇವೆಗೈದ ಗಣ್ಯ ಸಾಧಕರನ್ನು ಗುರುತಿಸಿ ವರ್ಷಂಪ್ರತಿ ಒಬ್ಬರಿಗೆ ಬಿರುದು ನೀಡಿ ಸನ್ಮಾನಿಸಿ ಗೌರವ ನೀಡುವ ಉದ್ದೇಶವನ್ನು ತುಳುಕೂಟ ಹೊಂದಿದೆ. ಈ ಬಾರಿ ಅಹ್ಮದ್ ನಗರದ ಖ್ಯಾತ ಉದ್ಯಮಿ, ಶಬರಿ ಇಂಡಸ್ಟ್ರಿಯಲ್ ಹಾಸ್ಪಿಟಾಲಿಟಿ ಪ್ರೈ ಲಿ.ನ ಆಡಳಿತ ನಿರ್ದೇಶಕ, ಪುಣೆ ತುಳುಕೂಟದ ಟ್ರಸ್ಟಿ, ಸಮಾಜ ಸೇವಕ, ಧಾರ್ಮಿಕ ಮುಖಂಡ, ತುಳುನಾಡ ಮೇಲಿನ ಅಪಾರ ಪ್ರೀತಿಯಿಂದ ಸೇವೆಗೈಯ್ಯುತಿರುವ 2024ರ ಆರ್ಯಭಟ ಪ್ರಶಸ್ತಿ ಪುರಷ್ಕ್ರತ ಕೆ.ಕೆ ಶೆಟ್ಟಿ ಯವರಿಗೆ ಬಿರುದು ನೀಡಿ ಸನ್ಮಾನಿಸಲಾಗುವುದು ಹಾಗೂ ಪುಣೆಯಲ್ಲಿ ಧಾರ್ಮಿಕ ಮುಖಂಡರಾಗಿ ಗುರುತಿಸಿಕೊಂಡು ಸಾಮಾಜಿಕ ಸೇವೆಯಲ್ಲಿರುವ ಪುಣೆಯ ಖ್ಯಾತ ಉದ್ಯಮಿ, ಸದಾನಂದ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕ, ಸದಾನಂದ ಸೇವಾ ಫೌಂಡೇಶನ್ ಸ್ಥಾಪಕರಾದ ಸಮಾಜ ಸೇವಕ, ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ, ಶ್ರೀ ಗುರುದೇವ ಸೇವಾ ಬಳಗದ ಮಾಜಿ ಅಧ್ಯಕ್ಷ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕಾತ್ರಜ್ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸದಾನಂದ ಕೆ ಶೆಟ್ಟಿ ಮತ್ತು ಮಂಗಳೂರು ನಗರ ಪಾಲಿಕೆಯ ಹೆಸರಾಂತ ನಗರ ಸೇವಕ, ಆಪತ್ಕಾಲದ ಬಂಧು ಎಂದೇ ಗುರುತಿಸಿಕೊಂಡಿರುವ ಗಣೇಶ್ ಕುಲಾಲ್ ರವರನ್ನು ವರ್ಷದ ವಿಶೇಷ ಸಾಧಕರುಗಳಾಗಿ ಸನ್ಮಾನಿಸಲಾಗುವುದು. ಪುಣೆಯ ದಾನಿ ಪ್ರವೀಣ್ ಶೆಟ್ಟಿ ಪುತ್ತೂರುರವರು ಪ್ರತಿ ವರ್ಷ ನೀಡುವಂತೆ ಈ ವರ್ಷವೂ ಬೆಳ್ಳಿ ಪದಕ ನೀಡಿ ಶೈಕ್ಷಣಿಕ ವರ್ಷದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಸತ್ಕಾರ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿರುವುದು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ತುಳುಕೂಟದ ಸದಸ್ಯರುಗಳಿಂದ, ಮಕ್ಕಳಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಮತ್ತು ತುಳುನಾಡ ಸೊಬಗನ್ನು ಸಾರುವ ನೃತ್ಯ ರೂಪಕ ನಡೆಯಲಿದೆ ಮತ್ತು ಕ್ರೇಜ್ ಪ್ಲಾನೆಟ್ ಅರ್ಪಿಸುವ ಸಾಂಸಾರಿಕ ನಾಟಕ ಮಣ್ಣಿ ಪ್ರದರ್ಶನಗೊಳ್ಳಲಿದೆ.
ಮಹಾರಾಷ್ಟ್ರದ ಪುಣ್ಯ ಭೂಮಿ ಸಾಂಸ್ಕೃತಿಕ ನಗರಿ ಪುಣೆಯಲ್ಲಿ ಸ್ಥಾಪಕಾಧ್ಯಕ್ಷ ಜಯ ಶೆಟ್ಟಿಯವರ ನೇತೃತ್ವದಲ್ಲಿ ಸ್ಥಾಪನೆಯಾದ ತುಳುವರ ಹೆಮ್ಮೆಯ ಸಂಸ್ಥೆ ತುಳುಕೂಟ ಪುಣೆ ಕಳೆದ ವರ್ಷ ಬೆಳ್ಳಿ ಮಹೋತ್ಸವವನ್ನು ಆಚರಿಸಿ ಇದೀಗ 26ನೇ ವಾರ್ಷಿಕ ಸಂಭ್ರಮದಲ್ಲಿದೆ. ಪುಣೆಯಲ್ಲಿ ನೆಲೆ ನಿಂತ ತುಳುವರು ಸ್ನೇಹ ಬಾಂಧವ್ಯದಿಂದ ಕರ್ಮಭೂಮಿಯಲ್ಲಿ ನಮ್ಮ ತುಳುನಾಡ ಕಲೆ ಸಂಸ್ಕ್ರತಿ, ಅಚಾರ ವಿಚಾರಗಳನ್ನು ಮರೆಯದೆ ಬೆಳೆಸುವ ಉದ್ದೆಶದೊಂದಿಗೆ ತುಳು ಕೂಟವನ್ನು ರಚಿಸಿ ತುಳುವರ ಸೇವೆಯಲ್ಲಿ ನಿರಂತರ 26 ವರ್ಷಗಳಿಂದ ಕಾರ್ಯ ಮಾಡುತ್ತಾ ಬಂದಿದೆ. ಇದೀಗ ಪುಣೆಯಲ್ಲಿ ತುಳು ಬಾಂಧವರ ಪ್ರತಿಷ್ಟಿತ ಸಂಸ್ಥೆಯಾಗಿ ಬೆಳೆದು ನಿಂತಿದೆ. ಕಳೆದ ವರ್ಷ ಬೆಳ್ಳಿ ಮಹೋತ್ಸವ ಸಂದರ್ಭದಲ್ಲಿ ಪುಣೆ ತುಳು ಕೂಟಕ್ಕೆ ಸ್ವಂತ ಮಿನಿ ಹಾಲ್ ಮಾಡುವ ಕನಸು ಕಂಡ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರುರವರ ಕನಸು ನನಸಾಗಿದೆ. ಪ್ರತಿ ವರ್ಷ ಆಗಸ್ಟ್ 15 ರಂದು ಸಂಘದ ವಾರ್ಷಿಕೋತ್ಸವ ನಡೆಯುತ್ತಾ ಬರುತ್ತಿದ್ದು, ಇದೀಗ 26 ರ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ.
ಪುಣೆ ತುಳುಕೂಟದ ಮುಖಾಂತರ ವರ್ಷವಿಡೀ ಸಾಮಾಜಿಕ, ಧಾರ್ಮಿಕ, ಕ್ರೀಡಾ ಮತ್ತು ಕಲಾ ಕಾರ್ಯಕ್ರಮಗಳು ನಡೆಯುತ್ತಿದ್ದು, ಪ್ರತೀ ವರ್ಷ ಅಗಸ್ಟ್ 15ರಂದು ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆಯುತ್ತಾ ಬರುತ್ತಿದೆ. ನಮ್ಮ ತುಳುನಾಡಿನ ಕಲೆ, ಸಂಸ್ಕ್ರತಿ, ಆಚಾರ ವಿಚಾರಗಳನ್ನು ತಿಳಿಸುವ ವೈವಿದ್ಯಮಯ ಮನೋರಂಜನಾ ಕಾರ್ಯಕ್ರಮಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅರ್ಹ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಜೊತೆಯಲ್ಲಿ ತುಳು ಕನ್ನಡಿಗ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕರಿಸಿ ಪ್ರೋತ್ಸಾಹ ನೀಡುತ್ತಿದೆ. ತುಳುನಾಡ ಕಲೆ ಸಂಸ್ಕ್ರತಿ ಸಂಸ್ಕಾರಗಳನ್ನೂ ತಿಳಿಸುವ ಕಾರ್ಯಕ್ರಮಗಳು, ಯುವ ಪೀಳಿಗೆಗೆ ಪ್ರೋತ್ಸಾಹ ನೀಡಲು ವಾರ್ಷಿಕ ಕ್ರೀಡಾಕೂಟ, ದಸರಾ ಪೂಜೆ, ಅರಸಿನ ಕುಂಕುಮ, ರಕ್ತದಾನ ಶಿಬಿರ, ವೈದ್ಯಕೀಯ ತಪಾಸಣಾ ಶಿಬಿರ, ಅನಾಥಾಶ್ರಮಳಿಗೆ ನೆರವು, ಅಂಗವಿಕಲರಿಗೆ ನೆರವು, ತುಳುನಾಡ ಕಲೆ ಯಕ್ಷಗಾನ, ನಾಟಕ, ನೃತ್ಯ ಕಲಾವಿದರಿಗೆ, ಕಲಾ ಪ್ರಕಾರಗಳಿಗೆ ವೇದಿಕೆ ಒದಗಿಸುವುದು, ಮೊದಲಾದ ಜನಪರ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಸಂಘದ ಪ್ರತಿಯೊಂದು ಕಾರ್ಯ ಯೋಜನೆಗಳಿಗೂ ಪುಣೆಯ ಮಹಾದಾನಿಗಳು ಸಹಕಾರ ನೀಡುವುದರ ಮೂಲಕ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ತುಳುವರ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಮಿನಿ ಭವನವು ದೊರಕಲಿದ್ದು, ಇನ್ನಷ್ಟು ಸೇವಾ ಕಾರ್ಯಗಳು ತುಳುಕೂಟದ ಮೂಲಕ ನಡೆಯಲಿದೆ.
ಪುಣೆ ತುಳುಕೂಟವು ಅಧ್ಯಕ್ಷರಾದ ದಿನೇಶ್ ಶೆಟ್ಟಿಯವರ ಸಮರ್ಥ ನಾಯಕತ್ವದಲ್ಲಿ, ಪುಣೆ ತುಳುಕೂಟದ ಸಮಿತಿಯಲ್ಲಿ ಮೋಹನ್ ಶೆಟ್ಟಿ ಎಣ್ಣೆಹೊಳೆಯವರು ಗೌರವಾಧ್ಯಕ್ಷರಾಗಿದ್ದು, ಉಪಾಧ್ಯಕ್ಷರುಗಳಾದ ಮಾಧವ ಶೆಟ್ಟಿ, ಉದಯ್ ಶೆಟ್ಟಿ ಕಳತ್ತೂರು, ಶೇಖರ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ರಾಜಾರಾಮ ಶೆಟ್ಟಿ, ಕೋಶಾಧಿಕಾರಿ ಸಿ.ಎ ಮನೋಹರ್ ಶೆಟ್ಟಿ, ಕಾನೂನು ಸಲಹೆಗಾರ ಗುರುನಾಥ್ ಶೆಟ್ಟಿ, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಎಣ್ಣೆಹೊಳೆ, ಕ್ರೀಡಾ ಕಾರ್ಯಾಧ್ಯಕ್ಷ ನಾರಾಯಣ ಹೆಗ್ಡೆ, ಕ್ಯಾಟರಿಂಗ್ ವಿಭಾಗದ ಕಾರ್ಯಾಧ್ಯಕ್ಷ ಯಶವಂತ್ ಶೆಟ್ಟಿ ಉಳಾಯಿಬೆಟ್ಟು, ಸಮಾಜ ಕಲ್ಯಾಣ ಕಾರ್ಯಾಧ್ಯಕ್ಷ ಮಹಾಬಲೇಶ್ವರ ದೇವಾಡಿಗ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಮಾಣಿಬೆಟ್ಟು, ಜನ ಸಂಪರ್ಕಧಿಕಾರಿಗಳಾದ ಸದಾನಂದ ಪೂಜಾರಿ, ಆನಂದ್ ಶೆಟ್ಟಿ ಮಡಂತ್ಯಾರ್, ಮಾಧ್ಯಮ ಸಮಿತಿ ಕಾರ್ಯಾಧ್ಯಕ್ಷ ಹರೀಶ್ ಮೂಡಬಿದ್ರಿ, ಸದಸ್ಯ ನೋಂದಣಿ ಸಮಿತಿ ಕಾರ್ಯಾಧ್ಯಕ್ಷ ಬಾಲಕೃಷ್ಣ ಗೌಡ, ಜೊತೆ ಕಾರ್ಯದರ್ಶಿ ಶರತ್ ಭಟ್, ಜೊತೆ ಕೋಶಾಧಿಕಾರಿ ಪ್ರಕಾಶ್ ಪೂಜಾರಿ, ಮುದ್ರಣ ಸಮಿತಿ ಕಾರ್ಯಾಧ್ಯಕ್ಷ ವಿಟ್ಟಲ್ ಮೂಲ್ಯ, ಸಮಿತಿ ಆಹ್ವಾನಿತ ಸದಸ್ಯರಾದ ನವೀನ್ ಬಂಟ್ವಾಳ್, ಜಗದೀಪ್ ಶೆಟ್ಟಿ, ಆನಂದ್ ಶೆಟ್ಟಿ ಬಜಗೋಳಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಿಯಾ ಎಚ್ ದೇವಾಡಿಗ, ಉಪಾಧ್ಯಕ್ಷರುಗಳಾದ ಗೀತಾ ಪೂಜಾರಿ, ಶಶಿಕಲಾ ಶೆಟ್ಟಿ, ಕಾರ್ಯದರ್ಶಿ ನಯನ ಸಿ ಶೆಟ್ಟಿ, ಕೋಶಾಧಿಕಾರಿ ಶಶಿಕಾಂತಿ ಎನ್ ದೇವಾಡಿಗ, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷೆ ಸರಿತಾ ಟಿ ಶೆಟ್ಟಿ, ಯುವ ವಿಭಾಗ ಸಂಯೋಜಕ ಸುಮಿತ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಆಕಾಶ್ ಶೆಟ್ಟಿ ಹಾಗೂ ವಿವಿಧ ಸಮಿತಿಯ ಪ್ರಮುಖ ಸಲಹೆಗಾರ ಸಮಿತಿ, ಕಾರ್ಯಕಾರಿ ಸಮಿತಿ ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸರ್ವ ಸದಸ್ಯರುಗಳ ಸಹಕಾರ ಆಯೋಜನೆಯೊಂದಿಗೆ ತುಳುಕೂಟವು 26ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದು, ಪುಣೆಯಲ್ಲಿರುವ ಸರ್ವ ತುಳುನಾಡ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕರಿಸಬೇಕೆಂದು ತುಳುಕೂಟದ ಸರ್ವ ಪದಾಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಚಿತ್ರ, ವರದಿ: ಹರೀಶ್ ಮೂಡಬಿದ್ರಿ