ನಬಾರ್ಡ್ ನಿಯೋಜಿತ ಕರ್ನಾಟಕ, ಗುಜರಾತ್, ಮಹಾರಾಷ್ಟ್ರ ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯಗಳಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಶಾಖಾ ವ್ಯವಸ್ಥಾಪಕರನ್ನು ಒಳಗೊಂಡ 45 ಸದಸ್ಯರ ಅಧ್ಯಯನ ಪ್ರವಾಸ ತಂಡ ಮಂದಾರ್ತಿ ಸೇವಾ ಸಹಕಾರಿ ಸಂಘಕ್ಕೆ ಭೇಟಿ ನೀಡಿದರು.

ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟಿ ತಂಡವನ್ನು ಸ್ವಾಗತಿಸಿ, ಸೊಸೈಟಿಯ ಕಾರ್ಯ ವೈಖರಿ ಬಗ್ಗೆ ಮತ್ತು ನಡೆದು ಬಂದ ಹಾದಿಯ ಕುರಿತು ಮಾಹಿತಿ ನೀಡಿದರು. ನಬಾರ್ಡ್ ನ ಡಿ.ಜಿ.ಎಂ. ಯೋಗಿಶ್ ಸಂಘದ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಮಕೃಷ್ಣ ಶೆಟ್ಟಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.