ಅದ್ಯಪಾಡಿ ಶ್ರೀ ಅದಿನಾಥೇಶ್ವರ ದೇವಸ್ಥಾನದಲ್ಲಿ ಎರಡು ರಥದ ಕೊಠಡಿ, ರಾಜ ಬೀದಿ ಕೆಲಸ, ದೇವಸ್ಥಾನದ ಸುತ್ತ ತಡೆಗೋಡೆ ಸಹಿತ ಕೆಲವು ಕಾಮಗಾರಿಗಳಿಗೆ ರಾಜ್ಯ ಸರಕಾರದಿಂದ ಎರಡು ಕೋಟಿ ರೂಪಾಯಿ ಅನುದಾನ ನೀಡಬೇಕೆಂದು ಕರ್ನಾಟಕ ಸರಕಾರ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿ ಅವರನ್ನು ಶ್ರೀ ಆದಿನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಭೇಟಿ ನೀಡಿ ಮನವಿ ಸಲ್ಲಿಸಿದರು. ಬೈಲು ಏತಮೊಗರು ದೊಡ್ಡಮನೆ ಹರೀಶ್ ಶೆಟ್ಟಿ ಮತ್ತು ಸುಜೀತ್ ಆಳ್ವ ಏತಮೊಗರು ಗುತ್ತು ಇವರ ನೇತೃತ್ವದಲ್ಲಿ ಸಚಿವರಿಗೆ ಮನವಿ ನೀಡಲಾಯಿತು.

ಸಚಿವರು ಮನವಿ ಸ್ವೀಕರಿಸಿ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದರು. ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ರಮಾನಾಥ್ ಅತ್ತಾರ್, ಸುಕೇಶ್ ಮಾಣೈ ತಲಕಳ, ಸತೀಶ್ ಆಳ್ವ, ಮನೋಹರ್ ಶೆಟ್ಟಿ, ವಸಂತ ಕುಮಾರ್ ಕಜೆ, ಮಧುಚಂದ್ರ ಶೆಟ್ಟಿ, ಮಹೇಶ್ ಭಟ್, ಕುಮಾರ್ ಶೆಟ್ಟಿ, ಜೀವನ್ ಮಲ್ಲಿ, ಮೋಹನ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ರೋಹಿತ್ ಶೆಟ್ಟಿ, ಸಂಪತ್ ಶೆಟ್ಟಿ, ಶಿವರಾಮ ಹೆಗ್ಡೆ, ಸುಜೀರ್ ಶೆಟ್ಟಿ, ಸತೀಶ್ ಶೆಟ್ಟಿ ಕಂದಾವರ, ಎಂಡೋಮೆಂಟ್ ಕಮೀಷನರ್ ಮಲ್ಲಿಕಾರ್ಜುನ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಮೇಯರ್ ಭಾಸ್ಕರ ಮೊಯ್ಲಿ ಇದ್ದರು.





































































































