ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕಾತ್ರಜ್ ಪುಣೆ ಇದರ ಆಡಳಿತ ಮಂಡಳಿ, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘ ಇದರ ವತಿಯಿಂದ 2024 -25 ರ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಸಿ ಹಾಗೂ ಎಚ್.ಎಸ್.ಸಿ ಪರೀಕ್ಷೆಯಲ್ಲಿ ಶೇಕಡಾ 80% ಕ್ಕಿಂತ ಜಾಸ್ತಿ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವು ಜುಲೈ 16 ಬುಧವಾರ ಸಂಕ್ರಮಣದಂದು ನಡೆಯಲಿರುವ ಪೂಜೆಯ ಬಳಿಕ ಮಧ್ಯಾಹ್ನ 2:00 ಗಂಟೆಗೆ ಸರಿಯಾಗಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.

ಎಸ್.ಎಸ್.ಸಿ ಹಾಗೂ ಎಚ್.ಎಸ್.ಸಿ ಪರೀಕ್ಷೆಯಲ್ಲಿ ಶೇಖಡಾ 80% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅಥವಾ ಪಾಲಕರು ಮಕ್ಕಳ ಹೆಸರನ್ನು ಆಡಳಿತ ಮಂಡಳಿಯ ಸುಭಾಶ್ ಶೆಟ್ಟಿ (82378 39763 ), ರಘರಾಮ ರೈ (9423011274), ಸಚ್ಚಿದಾನಂದ ಶೆಟ್ಟಿ (94219 10330) ಜಗದೀಶ್ ಶೆಟ್ಟಿ (93733 11288) ಅಥವಾ ದೇವಸ್ಥಾನದ ಮೇಲ್ವಿಚಾರಕರಾದ ರಶ್ವಿತ್ (6364-225113) ರವರನ್ನು ಸಂಪರ್ಕಿಸಿ ನೊಂದಾಯಿಸಿಕೊಳ್ಳುವಂತೆ ದೇವಸ್ಥಾನದ ವಿಶ್ವಸ್ಥ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿರುತ್ತಾರೆ.
ವರದಿ : ಹರೀಶ್ ಮೂಡಬಿದ್ರಿ, ಪುಣೆ