ಜೈ ತುಳುನಾಡ್ (ರಿ) ಸಂಸ್ಥೆಯಿಂದ ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ) ನ ಹಾಡುಗಳ ಸ್ಪರ್ಧೆ ಏರ್ಪಡಿಸಿದೆ. ಟೀಮ್ ಐಲೇಸಾ ಪ್ರಾಯೋಜಕತ್ವದಲ್ಲಿ ನಡೆಯುವ ಸ್ಪರ್ಧೆಯಲ್ಲಿಹಾಡಿನ ಕ್ಯಾಟಗರಿಯನ್ನು ಎರಡು ವಿಭಾಗಗಳನ್ನಾಗಿ ಮಾಡಿದೆ. ಹನ್ನೆರಡು ವರ್ಷದೊಳಗಿನ ಮತ್ತು ಹನ್ನೆರಡು ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪ್ರತಿ ವಿಭಾಗದಲ್ಲೂ ಮೂರು ಬಹುಮಾನಗಳು, ಒಟ್ಟು 6 ನಗದು ಬಹುಮಾನಗಳು ಅಲ್ಲದೇ ತೀರ್ಪುಗಾರರ ಮೆಚ್ಚುಗೆ ಪಡೆದ ಹತ್ತು ಹಾಡುಗಾರರಿಗೆ ಎಕ್ಸಿಸ್ ವಿಮಾ ಸಂಸ್ಥೆ ಹತ್ತು ಹಾಡುಗಾರರಿಗೆ ಉಡುಗೊರೆ ನೀಡಲಿದೆ ಎಂದು ಜೈ ತುಳುನಾಡಿನ ವಕ್ತಾರರು ತಿಳಿಸಿದ್ದಾರೆ.

ಈ ಸ್ಪರ್ಧೆಯಲ್ಲಿ ilesa The Music channel ನಲ್ಲಿರುವ ತುಳು ಹಾಡುಗಳನ್ನಷ್ಟೇ ಹಾಡಿ ಅದರ ವಿಡಿಯೋ ಮಾಡಿ +917090841297 ಗೆ ಕಳುಹಿಸಬೇಕು. ನಿಮಗೆ ಇದರ ನಿಯಮಗಳ ಬಗ್ಗೆ ಸ್ಪರ್ಧೆಯ ಬಗ್ಗೆ ಮಾಹಿತಿ ಬೇಕಿದ್ದಲ್ಲಿ 7090841297ಗೆ ಕರೆ ಮಾಡಿ ಸ್ಪರ್ಧೆಯ ವಿವರವನ್ನು ಸವಿವರವಾಗಿ ಪಡೆದುಕೊಳ್ಳಬಹುದು. ಹೆಚ್ಚಿನ ಹಾಡುಗಾರರು ಹೊಸ ಹಾಡುಗಳನ್ನು ಹಾಡುವುದೇ ಮುಖ್ಯ ಗುರಿ. ಭಾಷೆಗಾಗಿಯೇ ಕೆಲಸ ಮಾಡುವ 39 ದೇಶಗಳಲ್ಲಿ ಹರಡಿಕೊಂಡಿರುವ ಐಲೇಸಾ ಸಂಸ್ಥೆಯ ಹಾಡುಗಳು ಎಲ್ಲರ ಮನೆ ಮನ ತಲುಪಿಸುವ ಕಾರ್ಯದಲ್ಲಿ ತೊಡಗಿರುವ ಜೈ ತುಳುನಾಡು ಸಂಸ್ಥೆಯ ಕಾರ್ಯ ಶ್ಲಾಘನೀಯ. ಈ ಸಂಸ್ಥೆ ಹಲವು ದಶಕಗಳಿಂದ ಭಾಷೆಯ ನೆಲೆಯ ಬಗ್ಗೆ ಕಾರ್ಯ ನಿರ್ವಹಿಸುತ್ತಾ ಬರುತ್ತಿದೆ. ಹಾಡು ವಿಡಿಯೋ ಮಾಡಿ ಕಳುಹಿಸಲು ಕೊನೆಯ ದಿನಾಂಕ ಇದೇ ತಿಂಗಳ ಅಂದರೆ ಜುಲೈ 25ನೇ ತಾರೀಕು. ಜೈ ತುಳುನಾಡು ಸಂಸ್ಥೆ ನಿಮ್ಮೆಲ್ಲರನ್ನು ಈ ಸ್ಪರ್ಧೆಗೆ ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ ಎಂದು ಜೈ ತುಳುನಾಡು ಬೆಂಗಳೂರು ವಿಭಾಗದ ಅಧ್ಯಕ್ಷರಾದ ನಿಧೀಶ್ ಶೆಟ್ಟಿಯವರು ತಿಳಿಸಿದ್ದಾರೆ.