ಬಂಟರ ಅಭಿವೃದ್ಧಿ ನಿಗಮ ಸ್ಥಾಪಿಸಲು ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಸರಕಾರವನ್ನು ಒತ್ತಾಯಿಸಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಇರುವ ಬಂಟರ ಸಮುದಾಯವು ಒಟ್ಟು ಜನಸಂಖ್ಯೆಯಲ್ಲಿ ಶೇ.60 ಮಂದಿ ಬಡತನ ರೇಖೆಯಲ್ಲಿದ್ದು, ಶೇ.30 ರಷ್ಟು ಮಂದಿ ಮಧ್ಯಮ ವರ್ಗದಲ್ಲಿದ್ದು, ಕೇವಲ 10 ಶೇ. ಜನರು ಶ್ರೀಮಂತರಾಗಿದ್ದಾರೆ. ಈ ಬಂಟ ಸಮುದಾಯ ಕಡಿಮೆ ಜನರು ಇರುವ ಒಂದು ವಿಶಿಷ್ಟ ಸಮುದಾಯವಾಗಿದ್ದು, ತೀರ ಕೆಳಸ್ತರದ ಮಂದಿಯನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶ ನಮ್ಮದಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ.

ಬಡ ಜನರನ್ನು ಮುಖ್ಯವಾಹಿನಿಗೆ ಕರೆತರಲು ಸರಕಾರದ ಸಂಪೂರ್ಣ ಸಹಾಯ ಇದ್ದಲ್ಲಿ ಮಾತ್ರ ಸಾಧ್ಯ. ಅದಕ್ಕಾಗಿ ಕರ್ನಾಟಕ ಘನ ಸರಕಾರ ಬಂಟರ ಅಭಿವೃದ್ಧಿ ನಿಗಮ ಸ್ಥಾಪಿಸಿ, ಮುಂದಿನ ದಿನಗಳಲ್ಲಿ ಬಡ ಬಂಟರ ಉನ್ನತೀಕರಣ ಮಾಡಬೇಕೆಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಹಕ್ಕೊತ್ತಾಯ ಮಾಡುತ್ತಿದೆ ಎಂದು ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು ತಿಳಿಸಿದ್ದಾರೆ.