

ಮುಂಬಯಿಯ ಹಿರಿಯ ಹೋಟೇಲು ಉದ್ಯಮಿ ಹಾಗೂ ಕೃಷ್ಣ ಪ್ಯಾಲೇಸ್ ಹೋಟೇಲ್ ನ ಸಿಎಂಡಿ ಕೃಷ್ಣ ವೈ ಶೆಟ್ಟಿಯವರನ್ನು ಬಾಂಬೆ ಬಂಟ್ಸ್ ಅಸೋಸಿಯೇಶನ್ ಇದರ ವಿಶ್ವಸ್ಥರಾಗಿ ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿಯವರ ಸೂಚನೆಯ ಮೇರೆಗೆ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಅವಿರೋಧವಾಗಿ ಅನುಮೋದಿಸಿ ನೇಮಕ ಮಾಡಿದರು. ಮೃದು ಭಾಷಿ, ಪರೋಪಕಾರಿ, ವಿಶಾಲ ಮನೋಭಾವಿ, ಸಮಾಜಸೇವಕ, ಕೊಡುಗೈದಾನಿ, ಉದಾರ ಮನಸ್ಸುಳ್ಳ ಕೃಷ್ಣ ಶೆಟ್ಟಿಯವರನ್ನು ವಿಶ್ವಸ್ಥರಾಗಿ ನೇಮಿಸಿದ್ದರಿಂದ ಸಂಸ್ಧೆಗೆ ನಿರಂತರ ಸಹಾಯಹಸ್ತ ದೊರಕಿ, ಸಂಸ್ದೆ ಇನ್ನಷ್ಷು ಹೆಚ್ಚಿನ ಉನ್ನತಿ ಪಡೆಯುತ್ತದೆ ಎಂದು ಅಧ್ಯಕ್ಷರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಸೋಸಿಯೇಶನ್ ಅಧ್ಯಕ್ಷ ನ್ಯಾ. ಡಿ.ಕೆ ಶೆಟ್ಟಿ, ಉಪಾಧ್ಯಕ್ಷ ಐಕಳ ಕಿಶೋರ್ ಕೆ ಶೆಟ್ಟಿ, ಗೌ.ಪ್ರ ಕಾರ್ಯದರ್ಶಿ ನ್ಯಾ. ಶೇಖರ ಆರ್ ಶೆಟ್ಟಿ, ಗೌ. ಕೋಶಾಧಿಕಾರಿ ಸಿ.ಎ ವಿಶ್ವನಾಥ ಶೆಟ್ಟಿ ಎಲ್ಲರೂ ಸೇರಿ ಅವರಿಗೆ ಹೂಗುಚ್ಛವನ್ನು ನೀಡಿ ಗೌರವಿಸಿ, ಶುಭ ಕಾಮನೆಯನ್ನಿತ್ತು ಅವರನ್ನು ಸಂಸ್ಥೆಯ ವಿಶ್ವಸ್ಥರನ್ನಾಗಿ ಸ್ವಾಗತಿಸಿದರು.


ಕೃಷ್ಣ ವೈ ಶೆಟ್ಟಿಯವರು ನಂತರ ಮಾತನಾಡಿ, ನನ್ನಿಂದ ಸಂಸ್ಥೆಯ ಒಳಿತಿಗಾಗಿ ಯಾವುದೇ ಸಹಕಾರ ಬೇಕಾದಲ್ಲಿ ನಾನು ಬಹಳ ಸಂತೋಷದಿಂದ ಮಾಡಲು ಇಚ್ಛಿಸುತ್ತೇನೆ ಎಂದು ಹೇಳಿದರು. ಒಟ್ಟಾರೆ ಇಂತಹ ಕೊಡುಗೈ ದಾನಿಗಳು ಮುಂದಕ್ಕೆ ಬಂದಲ್ಲಿ ಸಂಘ ಸಂಸ್ಥೆಗಳು ಜಾತಿ ಬಾಂಧವರ ಏಳಿಗೆಗಾಗಿ ಇನ್ನಷ್ಟು ಜನಪರ ಕಾರ್ಯಗಳನ್ನು ಮಾಡಿ ಆರ್ಥಿಕವಾಗಿ ಹಿಂದಳಿದವರ ವಿದ್ಯೆ ಹಾಗೂ ಇನ್ನುಳಿದ ಅಗತ್ಯತೆಗಳಿಗೆ ಸ್ಪಂದಿಸಬಹುದು.

























































































































