

ಅನಿವಾಸಿ ಭಾರತೀಯ ದಂಪತಿ ಸತೀಶ್ ದಾಬ ಶೆಟ್ಟಿ ಮತ್ತು ಅನಿತಾ ಸತೀಶ್ ಶೆಟ್ಟಿ ಅವರ ಸುಪುತ್ರ, ಯುಎಇ ದುಬಾಯಿಯ ಅಲ್ ವಾರ್ಖಾ ಅವರ್ ಓವ್ನ್ ಇಂಗ್ಲಿಷ್ ಹೈಸ್ಕೂಲ್ ನ ಪ್ರತಿಭಾವಂತ ವಿದ್ಯಾರ್ಥಿ, 2022 ರಲ್ಲಿ ರಾಣಿ ಎಲಿಜಬೆತ್ ಪ್ಲಾಟಿನಂ ಜುಬಿಲಿ ಸ್ಕಾಲರ್ ಶಿಪ್ ಪಡೆದ ಆರುಷ್ ಸತೀಶ್ ಶೆಟ್ಟಿಯವರು 12 ನೇ ತರಗತಿಯಲ್ಲಿ (ಸಿ.ಬಿ.ಎಸ್.ಸಿ ವಿಜ್ಞಾನ ವಿಭಾಗ) 98.4 ಶೇಕಡಾದೊಂದಿಗೆ ತೇರ್ಗಡೆಗೊಂಡು ಎರಡನೇ ರ್ಯಾಂಕ್ ಪಡೆದಿದ್ದಾರೆ.


ಕಾಪು ಉಳಿಯಾರಗೋಳಿ ನಂದೋಡಿ ಗುತ್ತು ಮನೆತನದ ಸತೀಶ್ ದಾಬ ಶೆಟ್ಟಿ ದಂಪತಿಯ ಹಿರಿಯ ಪುತ್ರಿ ಆಕೃತಿ ಸತೀಶ್ ಶೆಟ್ಟಿ ಯು.ಎ.ಇ ಯ ಟಾಪರ್ ಹಾಗೂ ಮಧ್ಯ ಪ್ರಾಚ್ಯ ದೇಶಗಳಲ್ಲೇ 2020 ರ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಸತೀಶ್ ಶೆಟ್ಟಿ ದಂಪತಿಯರ ಪ್ರತಿಭಾವಂತ ಮಕ್ಕಳಿಗೆ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ವತಿಯಿಂದ ಹಾರ್ದಿಕ ಅಭಿನಂದನೆಗಳು.





























































































































