ಭಾರತದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿಯ ತುಳು ಕನ್ನಡಿಗರಲ್ಲಿನ ಪ್ರತಿಷ್ಠಿತ ಹಣಕಾಸು ಸಲಹೆಗಾರರೆಂದೇ ಹೆಸರಾದ ಕರುನಾಡ ಕುವರ, ಅಂತರಾಷ್ಟ್ರೀಯ ಪ್ರಸಿದ್ಧಿಯ ಆರ್ಥಿಕ ತಜ್ಞ, ಪ್ರಸಿದ್ಧ ಜೀವ ವಿಮಾ ಸಲಹೆಗಾರ. ಮುಂಬಯಿಯಲ್ಲಿನ ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಆರ್. ಕೆ ಶೆಟ್ಟಿ ಆಂಡ್ ಕಂಪನಿ ಇದರ ಆಡಳಿತ ನಿರ್ದೇಶಕ ಡಾ| ಆರ್ ಕೆ ಶೆಟ್ಟಿ ಅವರು 2025ರ ಆಗಸ್ಟ್ 24-27ರ ತನಕ ಚೀನಾದ ಮಕಾವು ಇಲ್ಲಿ ನಡೆಯಲಿರುವ ಮಿಲಿಯನ್ ಡಾಲರ್ ರೌಂಡ್ ಟೇಬಲ್ (ಎಂಡಿಆರ್ ಟಿ) ಜಾಗತಿಕ ಸಮ್ಮೇಳನದಲ್ಲಿ (ಗ್ಲೋಬಲ್ ಕಾನ್ಫರೆನ್ಸ್) ಪ್ರಧಾನ ಭಾಷಣಕಾರರಾಗಿ (ಫೋಕಸ್ ಸೆಷನ್ ಸ್ಪೀಕರ್) ಆಯ್ಕೆಯಾಗಿದ್ದಾರೆ.

ಸುಮಾರು ಶತಮಾನದ ಇತಿಹಾಸದಲ್ಲೇ ಎಂಡಿಆರ್ಟಿ ವಿಭಾಗೀಯ ಉಪಾಧ್ಯಕ್ಷ ಆಗಿ ಆಯ್ಕೆಯಾದ ಮೊದಲ ಭಾರತೀಯ ಡಾ| ಆರ್. ಕೆ. ಶೆಟ್ಟಿ ಇವರು ಔದ್ಯೋಗಿಕ ಮತ್ತು ಸಮಾಜ ಸೇವೆಯ ವಿವಿಧ ಸ್ತರಗಳಲ್ಲಿ ವಿವಿಧ ಸಾಧನೆಗಳೊಂದಿಗೆ ಆರ್ಥಿಕ ಕ್ಷೇತ್ರದ ಶಿಖರವೇರಿ ನಿಂತಿರುವ ರಾಷ್ಟ್ರಕಂಡ ಅಗ್ರಗಣ್ಯ ಆರ್ಥಿಕ ತಜ್ಞರಾಗಿದ್ದಾರೆ.ಜಗತ್ತಿನ ಅತೀ ಶ್ರೇಷ್ಠರಲ್ಲಿ ಶ್ರೇಷ್ಠ ವಿತ್ತೀಯ ಸಲಹೆಗಾರ ಪರಮೋಚ್ಛ ಸಂಘಟನೆ ಎಂದೆಸಿದ ಕೋರ್ಟ್ ಆಫ್ ಟೇಬಲ್ ನಲ್ಲಿ ಹಲವು ಬಾರಿ ಸರ್ವೋತ್ಕೃಷ್ಟ ಸಾಧನ ಪ್ರಶಸ್ತಿಗೆ ಭಾಜನರಾಗಿರುವ ಆರ್ ಕೆ ಎಸ್ ಅಮೇರಿಕಾದ ಯುಎಸ್ಎ ಟೆನ್ನಿಸ್ಸೀ ಇಲ್ಲಿನ ನ್ಯಾಶ್ ವಿಲ್ಲೆ ಇಲ್ಲಿ 2023 ರ ಜುಲಾಯಿ 25-28ರ ಜರುಗಿದ ಎಂ ಆರ್ ಡಿ ಟಿ ಶೃಂಗಸಭೆಯ ಸಭಾಪತಿಯಾಗಿ (ಎಲ್ ಐ ಸಿ ಆಫ್ ಇಂಡಿಯಾ) ಇದರ ಸರ್ವೋತ್ಕೃಷ್ಟ ಸ್ಥಾನವನ್ನು ಅಲಂಕರಿಸಿದ ಭಾರತೀಯರಾಗಿ ಎಂಡಿಆರ್ಟಿ, ಕ್ವಾರ್ಟರ್ ಸೆಂಚುರಿ ಕ್ಲಬ್ ಸದಸ್ಯರಾಗಿರುವರು.
2004 ಇಸವಿಯಿಂದ (ಪ್ರಾರಂಭದಿಂದಲೂ) ಎಲ್ ಐ ಸಿ ಆಫ್ ಇಂಡಿಯಾ ಕಾರ್ಪೊರೇಟ್ ಕ್ಲಬ್ ನ ಪ್ರತಿಷ್ಠಿತ ಸದಸ್ಯರಾಗಿದ್ದು, ಸುಮಾರು 50 ರಾಷ್ಟ್ರಗಳಲ್ಲಿನ ಎಂಡಿಆರ್ಟಿ (ಯುಎಸ್ಎ) ಪ್ರಾದೇಶಿಕ ಅಧ್ಯಕ್ಷರಾಗಿ ನೇಮಕಗೊಂಡು ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ಕೌನ್ಸಿಲ್ ನಲ್ಲಿ ಪ್ರಧಾನ ಉಪಾಧ್ಯಕ್ಷರಾಗಿ ಡಾ| ಆರ್.ಕೆ ಎಂ ಡಿ ಆರ್ ಟಿ ಸದಸ್ಯರಾಗಿ ವಿಶ್ವದಲ್ಲೇ ಹಣಕಾಸು ವೃತ್ತಿಪರರಿಗೆ ಅತ್ಯಧಿಕ ಮನ್ನಣೆಗೆ ಪಾತ್ರರಾಗಿದ್ದಾರೆ.
ಸದಾ ಸಾಮಾಜಿಕ ಕಳಕಳಿಯನ್ನೂ ಹೊಂದಿ ತೆರೆಯ ಮರೆಯಲ್ಲಿದ್ದೇ ಸಮಾಜ ಸೇವೆಯಲ್ಲಿ ಕಾರ್ಯೋನ್ಮುಖರಾಗಿ ಸಾವಿರಾರು ಜನರ ಬದುಕಿನ ಕನಸನ್ನು ನನಸಾಗಿದ ಮಮತಾವಾದಿಯಾಗಿದ್ದು ತನ್ನ ಬದುಕನ್ನು ಬಡವರು ಜನಸಾಮಾನ್ಯರಲ್ಲೂ ಹಂಚಿಕೊಳ್ಳುತ್ತಾ ಜೀವನದ ಯಶೋಗಾಥೆಯನ್ನು ಆರಂಭಿಸಿದ ಡಾ| ಆರ್. ಕೆ. ಶೆಟ್ಟಿ ಪ್ರಸ್ತುತ ವಿಶ್ವ ಪ್ರಸಿದ್ಧ ಬಂಟರ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ, (ಎರಡನೇ ಬಾರಿ) ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ, ಕನ್ನಡಿಗ ಪತ್ರಕರ್ತರ ಸಂಘ ಸಂಘ ಮಹಾರಾಷ್ಟ್ರ ಇದರ ಸದಸ್ಯರಾಗಿ ಸೇವಾನಿರತ ಓರ್ವ ಬಹುಮುಖ ಪ್ರತಿಭೆಯ ಸಾಧಕರಾಗಿದ್ದಾರೆ.
ಚಿಕ್ಕಮಗಳೂರು ಇಲ್ಲಿನ ಕಂಬಿಹಳ್ಳಿ ಮೂಲತಃ ತೀರಾ ಸರಳ ಸಜ್ಜನಿಕೆಯ ನೇರ ನಡೆ ನುಡಿಯ ಅಜಾತ ಶತ್ರು ಎಂದೇ ಗುರುತಿಸಲ್ಪಟ್ಟ ಆರ್. ಕೆ. ಶೆಟ್ಟಿ ಕರ್ನಾಟಕ ರಾಜ್ಯದ ನಿಷ್ಟಾವಂತ ಕನ್ನಡಿಗನಾಗಿ, ತೌಳವ ಸುಪುತ್ರನಾಗಿದ್ದು ಸಾಧನೆಯ ಮುಖೇನ ಕೀರ್ತಿಯನ್ನು ವಿಶ್ವಕ್ಕೆ ಪರಿಚಯಿಸಿದ ತುಳು ಕನ್ನಡಿಗ ಆಗಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲೂ ಅಪಾರ ಸೇವೆಗೈಯುತ್ತಿರುವ ಇವರು ಜಗತ್ತಿನ ಬಹುತೇಕ ರಾಷ್ಟ್ರಗಳ ಭೇಟಿಗೈದ ಅನುಭವಸ್ಥ ಹಣಕಾಸು ಸಲಹಾಗಾರರಾಗಿದ್ದು ನೂರಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಭಾರತ ರಾಷ್ಟ್ರದ ಮಾನ್ಯ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಜಾಗತಿಕ ಭಾರತೀಯ ಸಾಧಕರ ಪ್ರಶಸ್ತಿಯಾದ ಗ್ಲೋಬಲ್ ಇಂಡಿಯನ್ ಅವಾರ್ಡ್ ಗೆ ಭಾಜನರಾಗಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-2010 ಮುಡಿಗೇರಿಸಿ ಕೊಂಡಿರುವ ಆರ್. ಕೆ ಶೆಟ್ಟಿಯವರು ಮಂಗಳೂರು ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣೆಯ ಹೊತ್ತಲ್ಲಿ ಭಾರತ ಗೌರವ ಜೀವಮಾನ ಪ್ರಶಸ್ತಿ -2019 ಪ್ರಧಾನಿಸಿ ವಿಶ್ವವಿದ್ಯಾನಿಲಯದ ಸಾಂಪ್ರದಾಯಿಕ ಗೌರವಿಸಿದೆ.
ಶ್ರೀಲಂಕಾದ ಓಪನ್ ಇಂಟರ್ನ್ಯಾಷನಲ್ ಯೂನಿವರ್ಸಿಟಿಯ ಸೆನೆಟ್ ಡಾಕ್ಟರೇಟ್ ಆಫ್ ಆನರ್ಸ್ ಪ್ರಧಾನಿಸಿ ಗೌರವಿಸಿದೆ. 2010ರಲ್ಲಿ ಬಾಲಿವುಡ್ ಅಭಿನೇತರರಾದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ಬಚ್ಚನ್ ಅವರಿಂದ ಸನ್ಮಾನಿಸಲ್ಪಟ್ಟಿದ್ದು ಪೀಪಲ್ಸ್ ಆರ್ಟ್ಸ್ ಸೆಂಟರ್ (ರಿ.) ಮುಂಬೈ ಸಂಸ್ಥೆಯು ‘ಛತ್ರಪತಿ ಶಿವಾಜಿ ಮಹಾರಾಜ್ ಸಾಧನಾ ಪುರಸ್ಕಾರ 2015’ ಭಂಡಾರಿ ಸೇವಾ ಸಂಘ ಮುಂಬೈ ಸಂಸ್ಥೆಯು ‘ಸಮಾಜ ರತ್ನ ಪ್ರಶಸ್ತಿ, ಶ್ರೀ ಕೃಷ್ಣ ವಿಠ್ಟಲ ಪ್ರತಿಷ್ಠಾನವು ಸಮಾಜ ಸೇವಾ ಧುರೀಣ’ ಪ್ರಶಸ್ತಿ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯಿಂದ 2024 ರ ಸಾಲಿನ ಬಂಟ ರತ್ನ ಪ್ರಶಸ್ತಿಯಿಂದ ಗೌರವಿಸಿದೆ.