ಗಣಿತನಗರ : ತುಳುನಾಡಿನ ಅವಳಿವೀರರಾದ ಕೋಟಿ ಚೆನ್ನಯ್ಯರು ಅಧರ್ಮದ ವಿರುದ್ಧ, ನ್ಯಾಯದ ಪರವಾಗಿ ಹೋರಾಡಿದ ವೀರಪುರುಷರು. ಹಿರಿಯರಿಗೆ ಗೌರವವನ್ನು, ಶಿಷ್ಟರ ರಕ್ಷಣೆಯನ್ನು ಮಾಡಿ, ಕೊಟ್ಟ ಮಾತನ್ನು ಉಳಿಸಿಕೊಂಡ ಕೋಟಿ-ಚೆನ್ನಯ್ಯರ ಮೌಲ್ಯಯುತ ಜೀವನ ಇಂದಿಗೂ ಎಂದೆಂದಿಗೂ ಮೌಲ್ಯಯುತ ಎಂದು ಜ್ಞಾನಭಾರತ್-ಬಾಲಸಂಸ್ಕಾರದ ಕಾರ್ಯದರ್ಶಿ ಶ್ರೀಮತಿ ಸಂಗೀತಾ ಕುಲಾಲ್ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯುವ ಜ್ಞಾನಭಾರತ್ – ಬಾಲ ಸಂಸ್ಕಾರ ಸಾಪ್ತಾಹಿಕ ಸರಣಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಈ ಸಂದರ್ಭ ವೃಂದದ ಸದಸ್ಯರಾದ ಶ್ರೀಮತಿ ಉಷಾ ರಾವ್ ಯು, ಶ್ರೀಮತಿ ಗಾಯತ್ರಿ ನಾಗೇಶ್, ಶ್ರೀಮತಿ ಚೇತನಾ ಸಂದೀಪ್, ಶ್ರೀಮತಿ ಅಕ್ಷತಾ ಹಾಗೂ ಶ್ರೀಮತಿ ಲಕ್ಷ್ಮೀ ಉಪಸ್ಥಿತರಿದ್ದರು. ಬಾಲಸಂಸ್ಕಾರದ ಬಾಲಕ ಬ್ರಿಜೇಶ್ ಕಾರ್ಯಕ್ರಮ ನಿರೂಪಿಸಿ, ಆಯುಶ್ ಯು ಶೆಟ್ಟಿ ವಂದಿಸಿದರು. ಆರಾಧ್ಯ ಶ್ರೀ ರಾಮರಕ್ಷಾಸ್ತೋತ್ರವನ್ನು ಹಾಗೂ ಪ್ರೇರಣಾ ಬೋರ್ಕರ್ ಭಗವದ್ಗೀತೆಯ ಮೊದಲ ಹತ್ತು ಶ್ಲೋಕವನ್ನು ವಾಚಿಸಿದರು. ಬಾಲ-ಸಂಸ್ಕಾರಕ್ಕೆ ಸೇರಲಿಚ್ಚಿಸುವ ಕಾರ್ಕಳ ತಾಲೂಕಿನ ಮಕ್ಕಳ ಪೋಷಕರು ಸಂಸ್ಥೆಯನ್ನು ಸಂಪರ್ಕಿಸಿ ಮಕ್ಕಳ ಹೆಸರನ್ನು ನೊಂದಾಯಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9902192469 ಇವರನ್ನು ಸಂಪರ್ಕಿಸಲುಬಹುದು.
Next Article ಆಹಾರ ಮತ್ತು ಆತ್ಮ ಸಂಬಂಧ