ಬಂಟರ ಸಂಘ ಹಿರೇಬಂಡಾಡಿ ಅಸ್ತಿತ್ವಕ್ಕೆ ಬಂದಿದ್ದು, ನೂತನ ಅಧ್ಯಕ್ಷರಾಗಿ ಹಿರೇಬಂಡಾಡಿ ದರ್ಬೆ ನಿವಾಸಿ ರವೀಂದ್ರ ಶೆಟ್ಟಿ ದರ್ಬೆ, ಕಾರ್ಯದರ್ಶಿಯಾಗಿ ಪುಷ್ಪರಾಜ್ ಶೆಟ್ಟಿ ಅಡಕ್ಕಲ್ ಹಾಗೂ ಖಜಾಂಚಿಯಾಗಿ ರಾಕೇಶ್ ರೈ ಬೆರ್ಕೆಜಾಲ್ ಆಯ್ಕೆಯಾಗಿದ್ದಾರೆ. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರೂ, ಮಾತೃ ಸಂಘ ಮಂಗಳೂರಿನ ಉಪಾಧ್ಯಕ್ಷರೂ ಆದ ಹೇಮನಾಥ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿ ರಚನೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಸದಾನಂದ ಶೆಟ್ಟಿ ಕೆಮ್ಮಾರಗುತ್ತು, ಸದಾನಂದ ಶೆಟ್ಟಿ ಅಡೆಕ್ಕಲ್ ಮಜಲ್, ಹರೀಶ್ ಪೆರಾಬೆ, ಜೊತೆ ಕಾರ್ಯದರ್ಶಿಯಾಗಿ ಯತೀಶ ಶೆಟ್ಟಿ ಪಡ್ಯೋಟ್ಟು ಹಾಗೂ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಲಕ್ಷ್ಮಣ್ ಶೆಟ್ಟಿ ಕೆಮ್ಮಾರಗುತ್ತು, ಪ್ರಸಾದ್ ಶೆಟ್ಟಿ ಪೆರಾಬೆ, ಸತೀಶ್ ಶೆಟ್ಟಿ ಹೆನ್ನಾಳ, ಸದಾಶಿವ ಶೆಟ್ಟಿ ಎರ್ಪೆ, ಸಂತೋಷ್ ಶೆಟ್ಟಿ ಕಜೆ ಅಡಕ್ಕಲ್, ಮಹಿಳಾ ವಿಭಾಗದ ಪ್ರತಿನಿಧಿಗಳಾಗಿ ಅನುರಾಧ ಆರ್ ಶೆಟ್ಟಿ, ವಿನಯ ಎಲ್ ಶೆಟ್ಟಿ, ಗೌರವ ಸಲಹೆಗಾರರಾಗಿ ಪ್ರಕಾಶ್ ಶೆಟ್ಟಿ ಬೆಳ್ಳಿಪಾಡಿ, ದೇವಿದಾಸ ರೈ ಬೆಳ್ಳಿಪಾಡಿ, ನಿತ್ಯಾನಂದ ಶೆಟ್ಟಿ ದರ್ಬೆ ಆಯ್ಕೆಯಾಗಿದ್ದಾರೆ.ಮಾತೃ ಸಂಘ ಮಂಗಳೂರು ಇದರ ಸಂಚಾಲಕರಾದ ದುರ್ಗಪ್ರಸಾದ್ ರೈ, ಸಹ ಸಂಚಾಲಕರಾದ ಸಾಜ ರಾಧಾಕೃಷ್ಣ ಆಳ್ವ, ಪುತ್ತೂರು ತಾಲೂಕು ಬಂಟರ ಸಂಘದ ಪೂರ್ವಾಧ್ಯಕ್ಷ ದಯಾನಂದ ರೈ ಮನವಳಿಕೆ, ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಕೋಶಾಧಿಕಾರಿ ಸಂತೋಷ್ ರೈ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಗೀತಾ ಮೋಹನ್ ರೈ, ಕಾರ್ಯದರ್ಶಿ ಕುಸುಮಾ ಪಿ. ಶೆಟ್ಟಿ, ಕೋಶಾಧಿಕಾರಿ ಅರುಣ ದಿನಕರ ರೈ ಅವರು ಸಲಹೆ ಸೂಚನೆ ನೀಡಿದರು.
ಹಿರೇಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಶೆಟ್ಟಿ ಮಜಲ್, ಸದಸ್ಯರಾದ ಸತೀಶ್ ಶೆಟ್ಟಿ ಹೆನ್ನಾಳ, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕ ಸದಾನಂದ ಶೆಟ್ಟಿ ಕೆಮ್ಮಾರಗುತ್ತುರವರನ್ನು ಗೌರವಿಸಲಾಯಿತು. ರವೀಂದ್ರ ಶೆಟ್ಟಿ ಸ್ವಾಗತಿಸಿ, ಪುಷ್ಪರಾಜ್ ಶೆಟ್ಟಿ ವಂದಿಸಿದರು. ಹರಿಣಿ ರವೀಂದ್ರ ಪ್ರಾರ್ಥಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.