ಮೂಡುಬಿದಿರೆ: ಬಳ್ಳಾರಿ ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಶ್ರವಣ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆದ ಶ್ರವಣ ಕಪ್ ಅಖಿಲ ಭಾರತ ಆಹ್ವಾನಿತ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಹಿಳಾ ತಂಡವು ಪ್ರಶಸ್ತಿಯನ್ನು ಪಡೆದುಕೊಂಡಿತು. ರಾಷ್ಟ್ರದ 10 ಆಹ್ವಾನಿತ ತಂಡಗಳು ಭಾಗವಹಿಸಿದ್ದ ಈ ಟೂರ್ನಿಯ ಫೈನಲ್ನಲ್ಲಿ ಆಳ್ವಾಸ್ ತಂಡವು ತಮಿಳುನಾಡಿನ ಪಿಎಸ್ಎನ್ಎ ದಿಂಡಿಗಲ್ ತಂಡವನ್ನು 35-31, 35-18 ನೇರ ಸೆಟ್ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಸೆಮಿಫೈನಲ್ಸ್ ಪಂದ್ಯಗಳಲ್ಲಿ ಆಳ್ವಾಸ್ ತಂಡ ಶ್ರವಣ ಬಳ್ಳಾರಿ ತಂಡವನ್ನ ನೇರ ಸೆಟ್ಟುಗಳಿಂದ ಸೋಲಿಸಿ ಫೈನಲ್ಸಿಗೆ ಅರ್ಹತೆಯನ್ನು ಪಡೆದಿತ್ತು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಅಭಿನಂದಿಸಿದ್ದಾರೆ.