ಕರ್ಮಾಯಿಗುತ್ತು ದಿವಂಗತ ಕೆ. ಕರಿಯಪ್ಪ ರೈ ಅವರ ಪತ್ನಿ, ಮಂಗಳೂರಿನ ಖ್ಯಾತ ನ್ಯಾಯವಾದಿ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಕೆ. ದಯಾನಂದ ರೈ ಅವರ ಮಾತೃಶ್ರೀ ಆದೂರು ಏಳ್ನಾಡುಗುತ್ತು ಲಲಿತಾ ರೈಯವರು ಅನಾರೋಗ್ಯದಿಂದ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ ಪುತ್ರರಾದ ದಯಾನಂದ ರೈ ಸಹಿತ ಕಡಬ ಕಾಂಗ್ರೆಸ್ ಮುಖಂಡ ಕೆ. ವಿಜಯಕುಮಾರ್ ರೈ, ಮಾಜಿ ಸೈನಿಕ ಕೆ. ಸನತ್ ಕುಮಾರ್ ರೈ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಇವರು ಸಾಮಾಜಿಕ ಕಾರ್ಯಕರ್ತೆಯಾಗಿ ಪುತ್ತೂರು ಆಸುಪಾಸಿನಲ್ಲಿ ಜನಾನುರಾಗಿಯಾಗಿದ್ದರು.