ತುಳನಾಡ ಬಂಟ ಕುವರ ರೂಪೇಶ್ ಶೆಟ್ಟಿ ನಟನೆಯ ಅಧಿಪತ್ರ ಸಿನಿಮಾ ಟೈಟಲ್ ಹಾಗೂ ಸ್ಯಾಂಪಲ್ಸ್ ಮೂಲಕ ಈಗಾಗಲೇ ನಿರೀಕ್ಷೆ ಹೆಚ್ಚಿಸಿದೆ. ಕರಾವಳಿಯ ಸಂಸ್ಕೃತಿಯಾದ ಹುಲಿ ಕುಣಿತ, ಯಕ್ಷಗಾನ, ದೈವರಾಧನೆ ಹಾಗೂ ಆಟಿ ಕಳಂಜ ಸೇರಿದಂತೆ ಹಲವು ವಿಚಾರಗಳುಳ್ಳ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ರೂಪೇಶ್ ಖಾಕಿ ತೊಟ್ಟು ಖದರ್ ತೋರಿಸಿದ್ದಾರೆ. ಫೆಬ್ರವರಿ 7ರಂದು ಚಿತ್ರ ತೆರೆಗೆ ಬರ್ತಿದ್ದು, ಈ ಹಿನ್ನೆಲೆ ಚಿತ್ರತಂಡ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು. ಈ ವೇಳೆ ಇಡೀ ಚಿತ್ರತಂಡ ಹಾಜರಾಗಿತ್ತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಚಯನ್ ಶೆಟ್ಟಿ, ಅಧಿಪತ್ರ ಸಿನಿಮಾ ಫೆಬ್ರವರಿ 7ರಂದು ತೆರೆಗೆ ಬರ್ತಿದೆ. ಈ ಸಿನಿಮಾ ಒಂದೊಳ್ಳೆ ಕಂಟೆಂಟ್ ಆಗಲಿದೆ ಎಂಬ ನಂಬಿಕೆ ಇದೆ. ಈ ಒಳ್ಳೆ ಕಂಟೆಂಟ್ ಆಗಲು ನಮ್ಮ ಟೆಕ್ನಿಷಿಯಲ್ ಟೀಂ, ನಿರ್ಮಾಪಕರು, ಇಡೀ ತಾರಾಬಳಗದ ಬೆಂಬಲ ತುಂಬಾನೇ ಇದೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಇದರ ಜೊತೆಗೆ ಕರಾವಳಿ ಭಾಗದ ಆಟಿ ಕಳಂಜ ಸಂಸ್ಕೃತಿಯನ್ನು ಅಧಿಪತ್ರ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ತಮ್ಮದೇ ಜಾಹೀರಾತು ಕಂಪನಿ ಇದೆ. ಒಂದಷ್ಟು ಕಿರುಚಿತ್ರ ನಿರ್ದೇಶನ ಮಾಡುವುದರ ಜೊತೆಗೆ ಸಹಾಯಕ ನಿರ್ದೇಶಕರಾಗಿಯೂ ಒಂದಷ್ಟು ಸಿನಿಮಾಗಳಲ್ಲಿ ದುಡಿದಿರುವುದಾಗಿ ತಿಳಿಸಿದರು.ನಾಯಕಿ ಜಾಹ್ನವಿ ಮಾತನಾಡಿ, ಅಧಿಪತ್ರ ನನ್ನ ಚೊಚ್ಚಲ ಸಿನಿಮಾ. ಒಂದೊಳ್ಳೆ ತಂಡದೊಂದಿಗೆ ನಾನು ಸಿನಿಮಾ ಜರ್ನಿ ಪ್ರಾರಂಭಿಸುತ್ತಿರುವುದು ಖುಷಿ ಕೊಟ್ಟಿದೆ. ತುಂಬಾ ಪ್ರೊಪೆಷನಲ್ ಟೀಂ ಅನ್ನೋದು ಮೊದಲ ಮೀಟಿಂಗ್ ನಲ್ಲಿಯೇ ಗೊತ್ತಾಯಿತು. ಚಿತ್ರದಲ್ಲಿ ಒಂದೊಳ್ಳೆ ಗಟ್ಟಿ ಕಥೆ ಇದೆ. ಒಂದೊಳ್ಳೆ ತಾರಾಬಳಗ ಚಿತ್ರದಲ್ಲಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಕಥೆ ಚೆನ್ನಾಗಿದೆ. ಫೆಬ್ರವರಿ 7ರಂದು ಸಿನಿಮಾ ತೆರೆಗೆ ಬರ್ತಿದೆ. ನಾನು ಬೃಹತಿ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಕಥೆ ಎಷ್ಟು ಸಸ್ಪೆನ್ಸ್ ಇದೆಯೋ. ನನ್ನ ಪಾತ್ರವೂ ಹಾಗೇಯೇ ಇದೆ ಎಂದರು.
ನಾಯಕ ರೂಪೇಶ್ ಶೆಟ್ಟಿ ಮಾತನಾಡಿ, ಟೀಸರ್ ನೋಡಿದ್ರೆ ನಿಮಗೆ ಇದು ಯಾವ ತರಹ ಸಿನಿಮಾ ಎಂದು ಗೊತ್ತಾಗಲಿದೆ. ಇದು ಹೀರೋಯಿಸ್ ಇರುವ ಚಿತ್ರವಲ್ಲ. ಇದನ್ನು ಒಪ್ಪಿಕೊಳ್ಳಲು ಬಹುಮುಖ್ಯ ಕಾರಣವೆಂದರೆ ಕಂಟೆಂಟ್. ಇದು ಗೆದ್ದರೆ ರೂಪೇಶ್ ಹಾಗೂ ಜಾಹ್ನವಿಯಿಂದ ಗೆಲ್ಲುವಂತಹ ಸಿನಿಮಾವಲ್ಲ. ಕಥೆಯಿಂದ ಗೆಲ್ಲುವ ಸಿನಿಮಾ. ಫೆಬ್ರವರಿ 7ಕ್ಕೆ ಚಿತ್ರ ಬರ್ತಿದ್ದು, ನಾನು ಪೊಲೀಸ್ ಪಾತ್ರದಲ್ಲಿ ನಟಿಸಿದ್ದೇನೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲ ಇರಲಿ ಎಂದು ತಿಳಿಸಿದರು.ಅಧಿಪತ್ರ ಚಿತ್ರದಲ್ಲಿ ರೂಪೇಶ್ ಶೆಟ್ಟಿಗೆ ನಿರೂಪಕಿ ಜಾಹ್ನವಿ ಜೋಡಿ ಆಗಿದ್ದಾರೆ. ಎಂ.ಕೆ.ಮಠ, ಕಾಂತಾರ ಚಿತ್ರ ಖ್ಯಾತಿಯ ಪ್ರಕಾಶ್ ತುಮಿನಾಡು, ರಘು ಪಾಂಡೇಶ್ವರ್, ದೀಪಕ್ ರೈ, ಕಾರ್ತಿಕ್ ಭಟ್, ಅನಿಲ್ ಉಪ್ಪಾಲ್, ಪ್ರಶಾಂತ್ ತಾರಾಬಳಗದಲ್ಲಿದ್ದಾರೆ. ಶ್ರೀಹರಿ ಶ್ರೇಷ್ಠಿ ಸಂಗೀತ, ಶ್ರೀಕಾಂತ್ ಸಂಕಲನ, ರಿತ್ವಿಕ್ ಮುರಳಿಧರ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.
ಅಧಿಪತ್ರ ಚಿತ್ರಕ್ಕೆ ಚಯನ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದು, ನಿರ್ದೇಶಕರಾಗಿ ಇದು ಇವರ ಮೊದಲ ಪ್ರಯತ್ನ. ಕೆ. ಆರ್ ಸಿನಿ ಕಂಬೈನ್ಸ್ ಬ್ಯಾನರ್ನಡಿ ದಿವ್ಯಾ ನಾರಾಯಣ್, ಕುಲದೀಪ್ ರಾಘವ್ ಲಕ್ಷ್ಮಿ ಗೌಡ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಬೆಳಕು ಫಿಲಂಸ್ ಅಡಿಯಲ್ಲಿ ಕಾರ್ತಿಕ್ ಶೆಟ್ಟಿ ಮತ್ತು ಸತೀಶ್ ಶೆಟ್ಟಿ ಶ್ವೇತಾ ರವಿಚಂದ್ರ ಶೆಟ್ಟಿ ಕೂಡ ಸಹ- ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಈಗಾಗಲೇ ಟೀಸರ್ ಹಾಗೂ ಹಾಡಿನ ಮೂಲಕ ಗಮನ ಸೆಳೆದಿರುವ ಅಧಿಪತ್ರ ಸಿನಿಮಾ ಫೆಬ್ರವರಿ 7ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.