ಕಾತ್ರಜ್ ಶ್ರೀ ಅಯ್ಯಪ್ಪ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವವು ಜನವರಿ 09 ರಿಂದ 12 ರವರೆಗೆ ನಡೆಯಿತು. ಜನವರಿ 12 ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿ, ಶಿವ ದೇವರು ಹಾಗೂ ಸಪರಿವಾರ ದೇವರುಗಳ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದ ವಿಧಿ ವಿಧಾನಗಳು, ಪೂಜಾ ಕಾರ್ಯಗಳು ನಡೆದವು.ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಮಹಾಗಣಪತಿ ಹೋಮ, ಕುಂಭ ಲಗ್ನ ಶುಭ ಮುಹೂರ್ತದಲ್ಲಿ ಶಿವ ದೇವರ ಪ್ರತಿಷ್ಠೆ, ಶ್ರೀ ಅಯ್ಯಪ್ಪ ದೇವರ ಪುನಃ ಪ್ರತಿಷ್ಠೆ, ಶ್ರೀ ಮಹಾಗಣಪತಿ ದೇವರ ಪುನಃ ಪ್ರತಿಷ್ಠೆ, ಶ್ರೀ ದುರ್ಗಾ ದೇವಿಯ ಪುನಃ ಪ್ರತಿಷ್ಠೆ, ನಾಗ ಪ್ರತಿಷ್ಠೆ, ಶ್ರೀ ನವಗ್ರಹ ಪ್ರತಿಷ್ಠೆ, ಅಷ್ಠಬಂಧ ಕ್ರಿಯೆ, ಜೀವ ಕಲಶಾಭಿಷೇಕ, ಬ್ರಹ್ಮ ಕಲಶಾಭಿಷೇಕ, ಅಶ್ಲೇಷಾಬಲಿ, ಅಲಂಕಾರ ಪೂಜೆ, ಮಧ್ಯಾಹ್ನ ಗಂಟೆ 12.30ರಿಂದ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಜರಗಿತು. ಸಂಜೆ ದೀಪಾಲಂಕಾರ ಸಹಿತ ರಂಗ ಪೂಜೆ, ಉತ್ಸವ ಬಲಿ, ಪ್ರಸಾದ್ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಿತು.
ಸುಮಾರು ಆರು ಸಾವಿರಕ್ಕೂ ಮಿಕ್ಕಿದ ಭಕ್ತಾಧಿಗಳು ಈ ಕಾರ್ಯದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಅಯ್ಯಪ್ಪ ದೇವಸ್ಥಾನದ ಜೀರ್ಣೋದ್ದಾರ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಸದಾನಂದ ಕೆ ಶೆಟ್ಟಿಯವರ ಉಪಸ್ಥಿತಿಯಲ್ಲಿ, ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಸುಭಾಷ್ ಎ ಶೆಟ್ಟಿ ದಂಪತಿಗಳು ಬ್ರಹ್ಮಕಲಶೋತ್ಸವದ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸ್ಥಾಪಕಾಧ್ಯಕ್ಷ, ಪ್ರದಾನ ಕಾರ್ಯದರ್ಶಿ ರಘುರಾಮ್ ಕೆ ರೈ, ಉಪಾಧ್ಯಕ್ಷ ಸುಧಾಕರ ಸಿ ಶೆಟ್ಟಿ, ಕೋಶಾಧಿಕಾರಿ ಸಚ್ಚಿದಾನಂದ ಎಸ್ ಶೆಟ್ಟಿ, ಜೊತೆ ಕೋಶಾಧಿಕಾರಿ ಬಾಲಕೃಷ್ಣ ಎಸ್ ಗೌಡ, ಸಲಹೆಗಾರರಾದ ಶೇಖರ್ ಟಿ ಪೂಜಾರಿ, ಜಗದೀಶ್ ಬಿ ಶೆಟ್ಟಿ, ಭಾಸ್ಕರ್ ವಿ ಶೆಟ್ಟಿ, ಪೂಜಾ ಸಮಿತಿ ವ್ಯವಸ್ಥಾಪಕ ಭಾಸ್ಕರ್ ಎಂ ಕೊಟ್ಟಾರಿ, ಜನ ಸಂಪರ್ಕಾಧಿಕಾರಿ ಪ್ರಶಾಂತ್ ಅರ್ ಆಳ್ವ, ವ್ಯವಸ್ಥಾಪಕ ಜಯ ಎಸ್ ಪೂಜಾರಿ, ಕಾರ್ಯಕಾರಿ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಂಬಿಕಾ ವಿ ಶೆಟ್ಟಿ ಮತ್ತು ಎಲ್ಲಾ ಸಮಿತಿಗಳ ಪದಾಧಿಕಾರಿಗಳು ಸದಸ್ಯರು ಸಾವಿರಾರು ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಯ್ಯಪ್ಪ ದೇವಸ್ಥಾನದ ಜೀರ್ಣೋದ್ದಾರ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಸದಾನಂದ ಕೆ ಶೆಟ್ಟಿಯವರ ಉಪಸ್ಥಿತಿಯಲ್ಲಿ, ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟುರವರ ಸಭಾಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಕುಸಾಲ್ದ ಬಿರ್ಸೆ ದೀಪಕ್ ರೈ ಪಾಣಾಜೆ ಹಾಗೂ ಮಂಗಳೂರು ಮೀನನಾಥ ರಾಘವೇಂದ್ರ ರೈ ಅಭಿನಯದಲ್ಲಿ, ರಂಗ್ ದ ರಾಜೆ ಸುಂದರ್ ರೈ ಮಂದಾರ ನಿರ್ದೆಶಿಸಿ ಅಭಿನಯಿಸಿದ ‘ಅಮ್ಮೆರ್’
ಹಾಸ್ಯಮಯ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.

ವರದಿ : ಹರೀಶ್ ಮೂಡಬಿದ್ರಿ, ಪುಣೆ