ಮಂದಾರ್ತಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಎಚ್. ಗಂಗಾಧರ ಶೆಟ್ಟಿ, ಉಪಾಧ್ಯಕ್ಷರಾಗಿ ಕಾಡೂರು ಸುರೇಶ್ ಶೆಟ್ಟಿ ಆಯ್ಕೆಯಾದರು. ಜನವರಿ 20 ರಂದು ಸಂಘದ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಅವಿರೋಧವಾಗಿ ಇವರ ಆಯ್ಕೆ ನಡೆಯಿತು. ಇಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ತಂಡದ ಎಲ್ಲಾ 12 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಸಂದರ್ಭ ನಿರ್ದೇಶಕರಾದ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಗಣೇಶ್ ಶೆಟ್ಟಿ ಮಂದಾರ್ತಿ, ಜಲಂದರ ಶೆಟ್ಟಿ ನಡೂರು, ದಿನೇಶ್ ಮರಕಾಲ ಮಂದಾರ್ತಿ, ಚಂದ್ರಶೇಖರ ಪೂಜಾರಿ ಶಿರೂರು, ಶಂಭು ಶಂಕರ್ ರಾವ್ ಮಂದಾರ್ತಿ, ಗುಲಾಬಿ ಬಾಯಿ, ಪ್ರೇಮಾ ಮರಕಾಲ್ತಿ, ಬಸವ ನಾಯ್ಕ ಕಾಡೂರು, ರಾಧಾ ಹೆಗ್ಗುಂಜೆ ಉಪಸ್ಥಿತರಿದ್ದರು.

ಚುನಾವಣಾಧಿಕಾರಿ ರೋಹಿತ್ಕುಮಾರ್ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ ಶೆಟ್ಟಿ ಹಾಗೂ ಸಿಬ್ಬಂದಿಗಳು ಸಹಕರಿಸಿದರು.