ಡಿಸೆಂಬರ್ 29 ರಂದು ಪಡುಬಿದ್ರಿಯಲ್ಲಿ ನಡೆದ ಅಂತರ್ ರಾಜ್ಯ ಬಂಟ ಕ್ರೀಡೋತ್ಸವದಲ್ಲಿ ಬೆಂಗಳೂರು ಬಂಟರ ಸಂಘದ ಮಹಿಳಾ ತ್ರೋಬಾಲ್ ತಂಡ ತ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ, ದ್ವಿತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿ ಎಂ.ಆರ್.ಜಿ ಟ್ರೋಫಿ ಹಾಗೂ ರೂಪಾಯಿ 40,001 ನಗದನ್ನು ತನ್ನದಾಗಿಸಿಕೊಂಡಿತು.
ಟ್ರೋಫಿಯನ್ನು ಸುರೇಂದ್ರ ಶೆಟ್ಟಿ (ಛೇರ್ ಪರ್ಸನ್, ಕ್ರೀಡಾ ಸಮಿತಿ) ಸಬನ್ ಶೆಟ್ಟಿ (ಸಂಚಾಲಕರು, ಕ್ರೀಡಾ ಸಮಿತಿ) ಹಾಗೂ ಮಹಿಳಾ ತಂಡ ಅದಾನಿ ಗ್ರೂಪ್ ನ ಕಿಶೋರ್ ಆಳ್ವ, ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹಾಗೂ ಪದಾಧಿಕಾರಿಗಳಿಂದ ಸ್ವೀಕರಿಸಿದರು.