ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ( ಐಬಿಸಿಸಿಐ) ದುಬೈ ವ್ಯಾಪಾರ ಪ್ರವಾಸವನ್ನು ಕಳೆದ ಬುಧವಾರ (ನವಂಬರ್ 20 ರಿಂದ ನವಂಬರ್ 25) ಯಶಸ್ವಿಯಾಗಿ ಆಯೋಜಿಸಿದ್ದು, ಅಂತರಾಷ್ಟ್ರೀಯ ವ್ಯಾಪಾರ ಸಹಯೋಗಗಳನ್ನು ಬೆಳೆಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ನಿಯೋಗವು ರಾಸಾಯನಿಕ ಔಷಧ ಶಾಸ್ತ್ರ, ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್ಸ್, ಮೆಕ್ಯಾನಿಕಲ್, ವಜ್ರೋದ್ಯಮ, ಪ್ರವಾಸೋದ್ಯಮ, ಹಣಕಾಸು ತಜ್ಞ ಮತ್ತು ಕಾನೂನು ವೃತ್ತಿಪರ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಭಾರತದ 50 ಉದ್ಯಮಿಗಳನ್ನು ಭಾಗವಹಿಸಿದರು. ವ್ಯಾಪಾರ ಕಂಪನಿಗಳ ಕಾರ್ಯಾಚರಣೆಗಳನ್ನು ಅಲ್ಲದೇ ಪ್ರತಿಷ್ಠಿತ ಉದ್ಯಮಿಗಳ ಭೇಟಿಯನ್ನು ಒಳಗೊಂಡಿತ್ತು. ಪ್ರತಿನಿಧಿಗಳು ಯುಎಇಯಲ್ಲಿನ ವಿವಿಧ ವ್ಯಾಪಾರ ಕಾರ್ಯಾಚರಣೆಗಳ ಸಮಗ್ರ ತಿಳುವಳಿಕೆ ಮತ್ತು ಮಾಹಿತಿಗಳನ್ನು ಪಡೆದುಕೊಂಡರು. ಡಾ. ಬಿಆರ್ ಶೆಟ್ಟಿ ಮತ್ತು ಸೀಮಾ ಶೆಟ್ಟಿ (ನಿಯೋ ಫಾರ್ಮ), ಪ್ರಸನ್ನ ಶೆಟ್ಟಿ ಮತ್ತು ಗುಣಶೀಲ್ ಶೆಟ್ಟಿ (ಏಸ್ ಕ್ರೇನ್ಸ್ ) ಸುಜಾತ್ ಶೆಟ್ಟಿ ಮತ್ತು ಅನ್ವಿತಾ ಶೆಟ್ಟಿ (ಜಿಬಿಎಂಟಿ), ಟಿ. ಡಿ ಪಟೇಲ್ (ಎಮಿರೇಟ್ಸ್ ಟ್ರನ್ಸ್ ಫಾರ್ಮರ್ಸ್ ಮತ್ತು ಸ್ವಿಚ್ ಗೇಯರ್ ಕಂಪನಿ) ಸಂದರ್ಶನ ನೀಡಿ ಹೊಸ ತಂತ್ರಜ್ಞಾನ ಮಾರುಕಟ್ಟೆ ಅಭ್ಯಾಸ ಮತ್ತು ಸಹಯೋಗದ ಅವಕಾಶಗಳ ಒಳನೋಟಗಳ ಮಾಹಿತಿ ಪಡೆದರು.
ಪ್ರೇಮನಾಥ್ ಶೆಟ್ಟಿ ಅವರ ವಿಲ್ಲಾದಲ್ಲಿ ಸುಮಾರು 90 ಜನರು ಭಾಗವಹಿಸಿದ ಭವ್ಯವಾದ ‘ಮೀಟ್ ಅಂಡ್ ಗ್ರೀಟ್’ ನೆಟ್ ವರ್ಕಿಂಗ್ ಮತ್ತು ಸಮುದಾಯ ಎಂಗೇಜ್ಮೆಂಟ್ ಕಾರ್ಯಕ್ರಮದಲ್ಲಿ ಆಚಾರ ವಿಚಾರಗಳ ವಿನಿಮಯ ಸಭೆ ನೆರವೇರಿತು. ಡಾ. ಬಿ.ಆರ್. ಶೆಟ್ಟಿ ಮಾತನಾಡಿ ಬಂಟ ಸಮುದಾಯದಲ್ಲಿ ಯಶಸ್ಸಿನ ಪ್ರಸಿದ್ಧ ಉದ್ಯಮಿ ಮತ್ತು ಸಕಾರವಾದ ವ್ಯಾಪಾರವನ್ನು ಉತ್ತೇಜಿಸುವಲ್ಲಿ ಮತ್ತು ಸಮುದಾಯದ ಯುವಕರನ್ನು ಬೆಂಬಲಿಸುವಲ್ಲಿ ಗಲ್ಫ್ ಶಾಖೆಯ ಪ್ರಾಮುಖ್ಯತೆಯ ಮಾಹಿತಿ ನೀಡಿದರು. ಯುಎಇ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಮಾತನಾಡಿ, ಗಲ್ಫ್ ನಲ್ಲಿರುವ ಬಂಟ್ಸ್ ಸಮುದಾಯದ ಏಕತೆಗೆ ಒತ್ತು ನೀಡಿದರು. ಐಬಿಸಿಸಿಐ ಅಧ್ಯಕ್ಷ ಕೆ. ಸಿ ಶೆಟ್ಟಿ ಯುವ ಪೀಳಿಗೆಯ ಬಂಟ್ಸ್ ಉದ್ಯೋಗಾಕಾಂಕ್ಷಿಗಳಾಗದೆ ಉದ್ಯೋಗ ಸೃಷ್ಟಿಕರ್ತರಾಗಬೇಕೆಂದು ಒತ್ತಾಯಿಸಿದರು. ಸಿಎ ಶಂಕರ್ ಶೆಟ್ಟಿ ಅವರು ಸಮುದಾಯದೊಳಗೆ ವಾಣಿಜ್ಯ ಮತ್ತು ವ್ಯಾಪಾರಕ್ಕಾಗಿ ಅರ್ಥಪೂರ್ಣ ಸಂಸ್ಥೆಯನ್ನು ಸ್ಥಾಪಿಸಲು ಏಕೀಕೃತ ಪ್ರಯತ್ನವನ್ನು ಮಾಡಬೇಕೆಂದು ತಿಳಿಸಿದರು.
ಐಬಿಸಿಸಿಐ ಪ್ರಧಾನ ಕಾರ್ಯದರ್ಶಿ ಶ್ರೀನಾಥ ಶೆಟ್ಟಿ ಮಾತನಾಡಿ, ಗಲ್ಫ್ ಶಾಖೆಯು ಮಧ್ಯಪ್ರಾಚ್ಯ ಆಫ್ತಿಕನ್ ಮತ್ತು ಯುರೋಪಿಯನ್ ಮಾರುಕಟ್ಟೆಗಳಿಗೆ ಒಂದು ಮಾರ್ಗವಾಗಲಿದೆ. ಚೇಂಬರ್ ಕೇವಲ ವ್ಯಾಪಾರಸ್ಥರಿಗೆ ಮಾತ್ರವಲ್ಲದೆ ಯಾವುದೇ ವ್ಯಕ್ತಿಗೆ ಮತ್ತು ಅವರ ವೃತ್ತಿ ಅಥವಾ ವ್ಯವಹಾರವನ್ನು ಉನ್ನತೀಕರಿಸಲು ಬಯಸುವ ಪ್ರತಿಯೊಬ್ಬರಿಗೂ ಅವಕಾಶ ನೀಡಲಿದೆ. ಗರ್ಲ್ಸ್ ಶಾಖೆಗೆ ಸದಸ್ಯರಾಗಲು ಎಲ್ಲರನ್ನೂ ಪ್ರೋತ್ಸಾಹಿಸಿದ್ದರು. ಬಂಟರ ಸಂಘ ಮುಂಬೈ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರು ಗಲ್ಫ್ ಶಾಖೆಯನ್ನು ರಚಿಸಲು ಹಾಗೂ ಎಲ್ಲರೂ ಸೇರಿ ಭವ್ಯ ಇತಿಹಾಸವನ್ನು ಸೃಷ್ಟಿಸಲಿ ಬಂಟ್ಸ್ ಒತ್ತು ನೀಡಿದರು.
ಐಬಿಸಿಸಿಐ ಗಲ್ಫ್ ಶಾಖೆ ಪ್ರಾರಂಭ: ಈ ಸಂದರ್ಭದಲ್ಲಿ ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಗರ್ಲ್ಸ್ ಶಾಖೆಯನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು. ಉಪಾಧ್ಯಕ್ಷರಾಗಿ ವ್ಯವಸ್ಥಾಪಕ ನಿರ್ದೇಶಕ ಹೀಟ್ ಶೀಲ್ಡ್ ನ ಪ್ರೇಮನಾಥ ಶೆಟ್ಟಿ, ಪೋಷಕ ಸಲಹಾ ಮಂಡಳಿ ಸದಸ್ಯರಾಗಿ ಡಾ. ಬಿ. ಆರ್ ಶೆಟ್ಟಿ, ಸಲಹಾ ಮಂಡಳಿ ಸದಸ್ಯರಾಗಿ ಸರ್ವೋತ್ತಮ ಶೆಟ್ಟಿ ಹಾಗೆ ನೇಮಕಗೊಂಡರು. ಗಲ್ಫ್ ಶಾಖೆಯು ಜಾಗತಿಕ ಬಂಟ್ಸ್ ಸಮುದಾಯದ ನಡುವೆ ಸಂಪರ್ಕವನ್ನು ಬೆಳೆಸುವ ಮತ್ತು ವ್ಯಾಪಾರ ಅಭಿವೃದ್ಧಿಗಾಗಿ ವೇದಿಕೆಯನ್ನು ರಚಿಸುವ ಗುರಿಯನ್ನು ಹೊಂದಿದೆ. ಅಶ್ವಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.