ಕುಂದಾಪುರ ತಾಲೂಕು ಯುವ ಬಂಟರ ಸಂಘ ಇವರ ವತಿಯಿಂದ ವೈಯಕ್ತಿಕ ನೆಲೆಯಿಂದ ಸಂಘಟನೆಯ ನೆಲೆಗೆ ಆಸರೆ ಯೋಜನೆಯಡಿ ತಂದೆ ತಾಯಿಯನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ನವಚೇತನ ಯೋಜನೆಯಡಿ ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ 95ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಯುವ ಸಾಧಕರಿಗೆ ಸನ್ಮಾನ, ಡಾ. ಮಧುಕರ ಶೆಟ್ಟಿ ಐ.ಪಿ.ಎಸ್ ಸಂಸ್ಮರಣ ಪ್ರಶಸ್ತಿ 2024 ಹಾಗೂ ದಿ. ಎಂ. ಗೋಪಾಲಕೃಷ್ಣ ಶೆಟ್ಟಿ ಸಂಸ್ಮರಣ ಪ್ರಗತಿಪರ ಕೃಷಿಕ ಪ್ರಶಸ್ತಿ ಹಾಗೂ 2024-26 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಮಣಿಪಾಲ ವಿಶ್ವವಿದ್ಯಾಲಯ, ಮಣಿಪಾಲ ಇದರ ಕುಲಪತಿ ಡಾ. ಎಚ್.ಎಸ್ ಬಲ್ಲಾಳ್ ಅವರು ಆಗಸ್ಟ್ 18ರಂದು ಕೋಟೇಶ್ವರ ಹಾಲಾಡಿ ರಸ್ತೆಯಲ್ಲಿರುವ ಯುವ ಮೆರಿಡಿಯನ್ ಹಾಲ್ ನಲ್ಲಿ ಉದ್ಘಾಟಿಸಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ ಯುವ ಸಾಧಕರನ್ನು ಗೌರವಿಸಿದರು. ಎಚ್.ಪಿ.ಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್, ಮಣಿಪಾಲದ ಛೇರ್ಮನ್ ಹರಿಪ್ರಸಾದ್ ರೈ ಅವರು ಎಸೆಸೆಲ್ಸಿ ಶೇ. 95ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಬಂಟರ ಯಾನೆ ನಾಡವರ ಮಾತೃ ಸಂಘ ಕುಂದಾಪುರ ತಾಲೂಕಿನ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ ನೂತನ ಪದಾಧಿಕಾರಿಗಳ ಪದಗ್ರಹಣಗೈದರು. ಬೆಂಗಳೂರಿನ ಆರ್.ಪಿ ಶೆಟ್ಟಿ ಇನ್ಫ್ರಾ ಪ್ರೈ.ಲಿ ಇದರ ಆಡಳಿತ ನಿರ್ದೇಶಕ ರಾಘವೇಂದ್ರ ಪಿ ಶೆಟ್ಟಿ ಹಾಗೂ ಚಿಕ್ಕಮಗಳೂರು ಹೋಟೆಲ್ ಸನ್ ರೈಸ್ ನ ರಾಜೀವ ಆರ್. ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಿದರು. ಉದ್ಯಮಿ ಬಿ. ಹರ್ಷ ಶೆಟ್ಟಿ ಚಾರ ಹೆಬ್ರಿ, ಉದ್ಯಮಿ ವಿಜಯ ಎನ್. ಶೆಟ್ಟಿ ಸಂಸಾಡಿ ರಾಮದುರ್ಗಾ ಅವರು ಸಹಾಯಧನ ವಿತರಿಸಿದರು.
ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಡಾ| ಅಂಪಾರು ನಿತ್ಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಬಿ. ಉದಯ್ ಕುಮಾರ್ ಶೆಟ್ಟಿ, ವಿನಯಕುಮಾರ್ ಶೆಟ್ಟಿ, ನಿಯೋಜಿತ ಅಧ್ಯಕ್ಷ ನಿತೀಶ್ ಶೆಟ್ಟಿ ಬಸ್ರೂರು, ವಿನಯ ಆಸ್ಪತ್ರೆ ಕುಂದಾಪುರದ ಡಾ. ರಂಜಿತ್ ಕುಮಾರ್ ಶೆಟ್ಟಿ, ಪ್ರಥಮ ದರ್ಜೆ ಗುತ್ತಿಗೆದಾರ ಕಮಲ ಕಿಶೋರ ಹೆಗ್ಡೆ, ವತ್ಸಲಾ ದಯಾನಂದ ಶೆಟ್ಟಿ, ಅಂಕದ ಕಟ್ಟೆ ಪ್ರಥಮ ದರ್ಜೆ ಗುತ್ತಿಗೆದಾರ ಬಿ. ಅರುಣ್ ಕುಮಾರ್ ಹೆಗ್ಡೆ, ಹೋಟೆಲ್ ಉದ್ಯಮಿ ಚಂದ್ರ ಶೆಟ್ಟಿ, ಕೈಗಾರಿಕಾ ಉದ್ಯಮಿ ಜಯಕರ ಶೆಟ್ಟಿ, ಹೋಟೆಲ್ ಉದ್ಯಮಿ ಅಶೋಕ್ ಶೆಟ್ಟಿ ಸಂಸಾಡಿ, ಪ್ರಥಮ ದರ್ಜೆ ಗುತ್ತಿಗೆದಾರ ವಿಜಯಾನಂದ ಶೆಟ್ಟಿ ಹಳ್ನಾಡು, ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಹಳ್ನಾಡು, ಪ್ರಥಮ ದರ್ಜೆ ಗುತ್ತಿಗೆದಾರ ಗೋಕುಲ ಶೆಟ್ಟಿ ಉಪ್ಪುಂದ, ಹಿರಿಯ ಉದ್ಯಮಿ ಪ್ರೇಮಾನಂದ ಶೆಟ್ಟಿ ಕಟ್ಕೇರೆ, ನಿವೃತ್ತ ಬ್ಯಾಂಕ್ ಅಧಿಕಾರಿ ಬಿ. ಜಯರಾಮ ಶೆಟ್ಟಿ, ಇಂಜಿನಿಯರ್ ಪ್ರಮೋದ್ ಶೆಟ್ಟಿ ವಕ್ವಾಡಿ, ಉದ್ಯಮಿ ಎನ್.ಐ ಶೆಟ್ಟಿ ಹುಬ್ಬಳ್ಳಿ, ಉದ್ಯಮಿ ಎಚ್. ಅಶೋಕ್ ಶೆಟ್ಟಿ ಹೈದರಾಬಾದ್, ಉದ್ಯಮಿ ಬಿ. ಶೇಖರ್ ಶೆಟ್ಟಿ ವಂಡ್ಸೆ, ಉದ್ಯಮಿ ಅಲ್ತಾರ್ ದೇಬೆಟ್ಟು ಜಯರಾಮ ಶೆಟ್ಟಿ, ಉದ್ಯಮಿ ಎಚ್. ಮಹಾಲಿಂಗ ಶೆಟ್ಟಿ, ಉದ್ಯಮಿ ಹೊಸೂರು ಚಂದ್ರಶೇಖರ್ ಶೆಟ್ಟಿ, ಸಳ್ವಾಡಿ ಚಂದ್ರಶೇಖರ್ ಶೆಟ್ಟಿ, ಎಚ್. ಸಂಜೀವ ಶೆಟ್ಟಿ, ನವೀನ್ ಹೆಗ್ಡೆ, ನಾರಾಯಣ ರಾಜೀವ ಹೆಗ್ಡೆ ಪುಣೆ, ಹಂಸರಾಜ ಶೆಟ್ಟಿ ಕುಂದಾಪುರ, ರಾಮ ಶೆಟ್ಟಿ ಚುಚ್ಚಿ ಬಾದಾಮಿ, ಲಯನ್ ಮಾಜಿ ಗವರ್ನರ್ ವಿ.ಜಿ. ಶೆಟ್ಟಿ, ಟಿ.ಎನ್. ರಘುರಾಮ ಶೆಟ್ಟಿ, ಇಂಬು ರತ್ನಾಕರ ಶೆಟ್ಟಿ ಯರಗಟ್ಟಿ, ಗೋಪಾಲ ಶೆಟ್ಟಿ ಮೂರೂರು, ರಾಜ್ ಮೋಹನ್ ಹೆಗ್ಡೆ, ಉದಯ ಶೆಟ್ಟಿ ತಲ್ಲೂರು, ಟಿ.ಎನ್ ರವಿರಾಜ್ ಶೆಟ್ಟಿ ಹಟ್ಟಿಯಂಗಡಿ, ಸತೀಶ್ ಶೆಟ್ಟಿ ಕಂದಾವರ, ಅಣ್ಣಪ್ಪ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಅಜಿತ್ ಹೈದರಾಬಾದ್, ಪ್ರವೀಣ್ ಶೆಟ್ಟಿ ತೆಲಂಗಾಣ, ಹುಂತ್ರಿಕೆ ಸುಧಾಕರ ಶೆಟ್ಟಿ, ರವೀಂದ್ರ ಶೆಟ್ಟಿ ಕರೀಂನಗರ, ಕೋಶಾಧಿಕಾರಿ ಅಕ್ಷಯ್ ಹೆಗ್ಡೆ ಮೊಳಹಳ್ಳಿ, ನಿಮಿತಾ ಪಿ. ಶೆಟ್ಟಿ, ಹಳ್ನಾಡು ಪ್ರತಾಪಚಂದ್ರ ಶೆಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕ ಡಾ. ಚೇತನ್ ಶೆಟ್ಟಿ ಸ್ವಾಗತಿಸಿ, ಗೌರವಾಧ್ಯಕ್ಷ ಬಿ. ಉದಯಕುಮಾರ್ ಶೆಟ್ಟಿ ಪ್ರಸ್ತಾವನೆಗೈದರು. ಕೋಶಾಧಿಕಾರಿ ಅಕ್ಷಯ್ ಹೆಗ್ಡೆ, ರಾಜೀವ ಶೆಟ್ಟಿ ಮೊಳಹಳ್ಳಿ ಪ್ರಶಸ್ತಿ ಪತ್ರ ವಾಚಿಸಿ, ಉಪನ್ಯಾಸಕಿ ರೇಷ್ಮಾ ಶೆಟ್ಟಿ, ಶಿಕ್ಷಕ ವಿಶ್ವನಾಥ ಶೆಟ್ಟಿ, ನಿರೂಪಿಸಿ, ಮಾಜಿ ಅಧ್ಯಕ್ಷ ಸುಕೇಶ್ ಶೆಟ್ಟಿ ಹೊಸಮಠ ವಂದಿಸಿದರು.