ದಾವಣಗೆರೆಯ ಪ್ರತಿಷ್ಠಿತ “ದಾವಣಗೆರೆ ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಷನ್” ನ 2024-25 ನೇ ಸಾಲಿನ ಪ್ರಥಮ ಕಾರ್ಯಕಾರಿ ಮಂಡಳಿ ಸಭೆಯು ಪಿ.ಬಿ ರಸ್ತೆಯಲ್ಲಿರುವ ಶ್ರುತಿ ಮೋಟಾರ್ಸ್ ಹಿಂಭಾಗದ, ಚಾರ್ಟರ್ಡ್ ಅಕೌಂಟೆಂಟ್ಸ್ ಭವನದಲ್ಲಿ ನಡೆಯಿತು. ಈ ಸಭೆಯಲ್ಲಿ ದಾವಣಗೆರೆ ಚಿತ್ರದುರ್ಗ ಜಿಲ್ಲಾ ಬಂಟರ ಸಂಘದ ಕಾರ್ಯದರ್ಶಿ, ಕರಾವಳಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಸಿಎ ಉಮೇಶ ಶೆಟ್ಟಿ ಅವರನ್ನು ಸಂಘದ ನೂತನ ಅಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆ ಮಾಡಲಾಯಿತು.
ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾ ಪೋಷಕರಾಗಿರುವ ಉಮೇಶ್ ಶೆಟ್ಟಿಯವರು ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದಾರೆ.