ಸ್ವರ್ಗದ ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯದಲ್ಲಿ ವಾಚನಾ ಸಪ್ತಾಹದ ಅಂಗವಾಗಿ ಪುಸ್ತಕ ಪರಿಚಯ ಕಾರ್ಯಕ್ರಮ ನಡೆಯಿತು. ಎಣ್ಮಕಜೆ ಗ್ರಾಪಂ ಸದಸ್ಯ, ತಾಲೂಕು ಲೈಬ್ರೆರಿ ಕೌನ್ಸಿಲ್ ಸದಸ್ಯ ರಾಮಚಂದ್ರ ಎಂ. ಕಾರ್ಯಕ್ರಮ ಉದ್ಘಾಟಿಸಿದರು.
ಗ್ರಂಥಾಲಯದ ಅಧ್ಯಕ್ಷ ರವಿರಾಜ್ ಎಸ್. ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ರಾಜಶ್ರೀ ಟಿ. ರೈ ಪೆರ್ಲ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕವಿ ರಿತೇಶ್ ಕಿರಣ್ ರಾಜಶ್ರೀ ಅವರ ತುಳು ಕಾದಂಬರಿ ಮುಸ್ರಾಲೊ ಪಟ್ಟೊ ಕೃತಿ ಪರಿಚಯ ನಡೆಸಿ ಅಭಿಪ್ರಾಯ ಮಂಡಿಸಿದರು. ಶ್ರೀನಿವಾಸ ಪೆರಿಕ್ಕಾನ ಉಪಸ್ಥಿತರಿದ್ದರು. ಲೇಖಕಿ ರಾಜಶ್ರೀ ಟಿ. ರೈ ಅವರಿಗೆ ಗೌರವ ಸಲ್ಲಿಸಲಾಯಿತು. ಗ್ರಂಥಾಲಯ ಕಾರ್ಯದರ್ಶಿ ರವಿ ವಾಣಿನಗರ ಸ್ವಾಗತಿಸಿದರು. ಉಪಾಧ್ಯಕ್ಷೆ ಚಂದ್ರಾವತಿ ಎಂ. ವಂದಿಸಿದರು.