ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಯಕ್ಷ ಶಿಕ್ಷಣ ಯೋಜನೆಯಡಿಯಲ್ಲಿ ಸರಕಾರಿ ಪ್ರೌಢ ಶಾಲೆ, ಮೀನಕಳಿಯ ಬೈಕಂಪಾಡಿಯಲ್ಲಿ 2024- 25 ರ ಸಾಲಿನ ಯಕ್ಷನಾಟ್ಯ ತರಬೇತಿ ಜೂನ್ 19 ರಂದು ಬೆಳಿಗ್ಗೆ 11.00 ಗಂಟೆಗೆ ಉದ್ಘಾಟನೆಗೊಂಡಿತು. ಶ್ಯಾಮ ಕನ್ಸ್ಟ್ರಕ್ಷನ್ಸ್ ನ ಇಂಜಿನಿಯರ್ ಶ್ರೀ ಪ್ರಸಿದ್ಧ ಪಿ. ಇವರು ಕಾರ್ಯಕ್ರಮ ಉದ್ಘಾಟಿಸಿ, ಯಕ್ಷಗಾನ ಎಲ್ಲಾ ಪ್ರಕಾರಗಳಲ್ಲಿಯೂ ಜ್ಞಾನವೃದ್ಧಿಗೆ ಪ್ರಯೋಜನವಾಗುತ್ತದೆ. ಯಕ್ಷಗಾನ ಬರೇ ಕಲೆಗೋಸ್ಕರ ಕಲಿಯುವುದಲ್ಲ. ನಮ್ಮ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗಲು ಸದವಕಾಶ ಎಂದು ಹೇಳುತ್ತಾ ಶುಭ ಕೋರಿದರು. ಯಕ್ಷ ಶಿಕ್ಷಣ ಸಂಚಾಲಕರಾದ ಪಣಂಬೂರು ವಾಸುದೇವ ಐತಾಳ್ (USA) ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮುಖ್ಯ ಅತಿಥಿ ಶ್ರೀ ಶಿವರಾಮ ಪಣಂಬೂರು ಇವರು ಮಾತನಾಡುತ್ತಾ, ಶುದ್ಧ ಕನ್ನಡ ಇಂದಿಗೂ ಉಳಿದಿದೆ ಎಂದಾದರೆ ಅದು ಯಕ್ಷಗಾನದಿಂದ ಮಾತ್ರ. ಅಲ್ಲದೇ ಗುರು ಹಿರಿಯರನ್ನು ಗೌರವದಿಂದ ಕಾಣಲು ಇಂತಹ ಯಕ್ಷ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ಲಕ್ಷ್ಮೀನಾರಾಯಣ ಇವರು ಮಾತನಾಡುತ್ತಾ, ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುವಲ್ಲಿ ಯಕ್ಷಗಾನ ಕಲೆ ಮಹತ್ತರ ಪಾತ್ರವನ್ನು ವಹಿಸುತ್ತದೆ. ದೇಶ ವಿದೇಶಗಳಲ್ಲಿಯೂ ಕಲಾಗಾರರನ್ನು ಪ್ರೇರೇಪಿಸುವ ಜೊತೆಗೆ ನೂರಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಪಟ್ಲ ಫೌಂಡೇಶನ್ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ಸಭಾಧ್ಯಕ್ಷರಾದ ಸುಧಾಕರ ಎಸ್ ಪೂಂಜ ಇವರು ಯಕ್ಷಗಾನ ಕಲೆ ಮುಂದಿನ ಪೀಳಿಗೆಯ ಮುಖಾಂತರ ಶಾಶ್ವತವಾಗಿ ಯಕ್ಷ ಕಲೆ ಬೆಳೆಯಬೇಕೆಂಬ ಉದ್ದೇಶ ನಮ್ಮದು. ಮುಂದಿನ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಯಕ್ಷಗಾನವನ್ನು ವೇದಿಕೆಯಲ್ಲಿ ಪ್ರರ್ಶಿಸುವಂತಾಗಲಿ ಎಂದು ಶುಭ ಹಾರೈಸಿದರು. ಘಟಕದ ಸಂಚಾಲಕರಾದ ವಿನಯ ಆಚಾರ್ ಹೊಸಬೆಟ್ಟು, ಪ್ರಧಾನ ಕಾರ್ಯದರ್ಶಿ ಬಾಳ ಗಂಗಾಧರ ಪೂಜಾರಿ, ಕೋಶಾಧಿಕಾರಿ ಟಿ.ಎನ್. ರಮೇಶ್, ಉಪಾಧ್ಯಕ್ಷರಾದ ಲೀಲಾಧರ ಶೆಟ್ಟಿ ಕಟ್ಲ, ಫೌಂಡೇಶನ್ ಟ್ರಸ್ಟಿಗಳಾದ ಪುಷ್ಷರಾಜ್ ಶೆಟ್ಟಿ ಕುಡುಂಬೂರು, ಶ್ರೀಮತಿ ಸಹನಾ ರಾಜೇಶ್ ರೈ, ಶ್ರೀಮತಿ ಶೈಲಾ ಶಂಕರ್ ಶೆಟ್ಟಿ, ಶ್ರೀಮತಿ ಸವಿತಾ ಭವಾನಿಶಂಕರ್ ಶೆಟ್ಟಿ, ಜೊತೆ ಕಾರ್ಯದರ್ಶಿ ಸತೀಶ್ ಶೆಟ್ಟಿ ಬಾಳಿಕೆ ಮತ್ತು ಘಟಕದ ಇತರ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಯಕ್ಷ ಗುರುಗಳಾದ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಇವರು ಯಕ್ಷಗಾನ ಕಲೆಯ ಬಗ್ಗೆ ಉತ್ತಮ ಮಾಹಿತಿಗಳನ್ನು ನೀಡುವುದರ ಜೊತೆಗೆ ಪ್ರಾರಂಭಿಕ ನಾಟ್ಯ ತರಬೇತಿಯನ್ನು ಆರಂಬಿಸಿದರು. ಉಸ್ತುವಾರಿ ಶಿಕ್ಷಕರಾದ ಶ್ರೀ ನಿರಂಜನ ನಾಯಕ ಇವರು ಸ್ವಾಗತಿಸಿದರು. ಸಹ ಶಿಕ್ಷಕರಾದ ಶ್ರೀಮತಿ ಗಾಯತ್ರಿ ವಂದಿಸಿದರು. ಸಹ ಶಿಕ್ಷಕರಾದ ಶ್ರೀ ಪ್ರೇಮನಾಥ ಇವರು ಕಾರ್ಯಕ್ರಮ ನಿರ್ವಹಿಸಿದರು.