ಪೌರಾಣಿಕ ಹಿನ್ನಲೆ ತುರುವರಸು ಮತ್ತು ನಾಗರಾಜನ ಸಹೋದರಿಯರ ಸಂತಾನ ಎಂದು ಕರೆಸಿಕೊಂಡು ನಾಗ ಬಳಿಯವರಾಗಿದ್ದಾರೆ. ಬಂಟರಿಗೆ ಧರ್ಮದಲ್ಲಿ ಕ್ಷಾತ್ರ ತೇಜಸ್ಸು ಇತ್ತು. ಆಕರ್ಷಕ ಮೈಕಟ್ಟು, ನೇರ ನುಡಿ, ದಿಟ್ಟ ಹೆಜ್ಜೆ, ಕಠಿಣ ಪರಿಶ್ರಮ, ಅಚಲ ನಿಷ್ಠೆ, ಸತ್ಯಪರತೆ, ಪರೋಪಕಾರ, ಆದರ್ಶ ಧ್ಯೇಯ, ಕಾರ್ಯ ಪರಾಕ್ರಮ, ಮೇಧಾವಿತನ, ನ್ಯಾಯಪರತೆ, ಧರ್ಮಪಾಲನೆ, ತ್ಯಾಗ ಬುದ್ಧಿ ಹಾಗೂ ನಾಯಕತ್ವ ಗುಣಗಳಿದ್ದುದರಿಂದ ರಾಜರಾಗಿ, ಸಾಮಂತರಸರಾಗಿ, ಸೇನಾಧಿಪತಿಗಳಾಗಿ, ಊರ ಮುಖಂಡರಾಗಿ, ದೈವ ದೇವಾಲಯಗಳ ಮೇಲ್ವಿಚಾರಕರಾಗಿ, ವಿಶ್ವಾಸ ಪಾತ್ರ ಬಲಗೈ ಬಂಟರಾಗಿ ಮೆರೆದರು. ಆದ್ದರಿಂದ ಮಿಕ್ಕ ಭಾರತದ ಎಲ್ಲಾ ಜನಾಂಗದವರನ್ನು ಬ್ರಿಟಿಷರು ಗುಲಾಮರಾಗಿ ಕಂಡರೂ ಬಂಟ ಶ್ರೇಷ್ಠರಿಗೆ ವಿಶೇಷ ಸ್ಥಾನಮಾನ ಮನ್ನಣೆ ನೀಡಿ ಗೌರವದಿಂದ ಕಾಣುತ್ತಿದ್ದರು. Bunts as this name itself implies (Bunt means powerful man a soldier) were originally a military class Bunts are a fine statement race with study independence of manner and comparitivity fair complexion common to west coast. (Madras District Manual South Canara Vol No 1) ಇದರಲ್ಲಿ ಆ ಕಾಲದಲ್ಲೇ ಬ್ರಿಟಿಷರು ದಾಖಲಿಸಿಕೊಂಡಿದ್ದಾರೆ. ಇವರು ತಮ್ಮೊಂದಿಗೆ ನಂಬಿಕಸ್ಥ ಜನಾಂಗವಾಗಿದ್ದ ಬಿಲ್ಲವರನ್ನು ಮೊಗವೀರ (ಬೆಸ್ತ) ರನ್ನು ಮನ್ಸ (ದಲಿತ) ರನ್ನು ಕೃಷಿ ಕಾರ್ಯಗಳಲ್ಲಿ ಕೂಡಿ ಬದುಕುತ್ತಿದ್ದರು.
ತುಳುನಾಡಿನಾದ್ಯಂತ ದೈವಾಲಯಗಳನ್ನು ಕಟ್ಟಿ ಬಿಲ್ಲವರಿಗೆ ದೈವ ಕಾರ್ಯ ಕೊಟ್ಟಿರುವುದರಿಂದ ಅವರು ಪೂಜಾರಿಗಳೆಂದು ಕರೆಸಿಕೊಂಡರು. ಮೊಗವೀರರು ಕಡಲಾಯರೆಂದು ಕರೆಸಿಕೊಂಡರೆ, ತೆಂಗು ತಾಳೆಗಳಿಂದ ಸೇಂದಿ ತೆಗೆದು ದೈವಗಳಿಗೆ ಅರ್ಪಿಸಿ ಉಪ ಜೀವನ ಮಾಡುತ್ತಿದ್ದುದರಿಂದ ಅವರಿಗೆ ಮಡಲಾಯ ಎಂಬ ಹೆಸರು ಇತ್ತು. ಹಿಂದೆ ನಮ್ಮ ದೇಶದ ಚೇರ, ಚೋಳ, ಪಾಂಡ್ಯ, ಅಲೂಪ, ಹೊಯ್ಸಳ, ವಿಜಯನಗರ ಸಾಮ್ರಾಜ್ಯದಲ್ಲಿ ಬಂಟರು ಹೆಚ್ಚಿನ ಸಂಖ್ಯೆಯಲ್ಲಿ ವೀರ ಯೋಧರಾಗಿದ್ದರು.
ಅಂತಿಮವಾಗಿ ತುಳುನಾಡನ್ನು ವಶಪಡಿಸಿಕೊಂಡ ಕೆಳದಿಯವರ ಕಾಲದಲ್ಲಿ ಬಂಟರಿಗೆ ಯೋಧ ವೃತ್ತಿ ನಷ್ಟವಾಗಿ ಕೃಷಿಯಲ್ಲಿ ಹೆಸರನ್ನು ಗಳಿಸಿದರು. ಕ್ರಿ.ಶ 9 ನೇ ಶತಮಾನದಲ್ಲಿ ಕೆತ್ತಿದ ಉದ್ಯಾವರ ಶಿಲಾ ಶಾಸನದಲ್ಲಿ ವಿವರಣೆ ಇದೆ. ಪ್ರಾಚೀನ ಗ್ರೀಕ್ ನಾಟಕಗಳಲ್ಲಿ ಅದೆಷ್ಟೋ ತುಳು ಭಾಷಾ ಶಬ್ಧಗಳು ಸೇರಿಕೊಂಡಿರುವುದರಿಂದ ತುಳುವಿನ ಪ್ರಾಚೀನತೆ ಅರ್ಥೈಸಬಹುದು. ತುಳು ರಾಜ್ಯ ಐವತ್ತರಡ್ ಗಾವುದ (672 ಮೈಲು ವಿಸ್ತೀರ್ಣ) ವೆಂದೂ, ಮಯೂರ ವರ್ಮನ ಕಾಲದಲ್ಲಿ ಬಂದು ರಾಜಾಶ್ರಯ ಪಡೆದ ಬ್ರಾಹ್ಮಣರು ಇಲ್ಲಿ ಪ್ರಥಮವಾಗಿ ದೇವಾಲಯ ನಿರ್ಮಿಸಿದರೆಂದು ತಿಳಿದುಬರುತ್ತದೆ. ಪ್ರಸ್ತುತ ಅಂಶವೆಂದರೆ ಸಾವಿರಾರು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ ಸ್ಥಾನಮಾನ ಗೌರವಗಳಿಗೆ ತಿಲಾಂಜಲಿ ನೀಡಿ ಬಂಟತನವನ್ನು (ಅಳಿಯ ಕಟ್ಟು ಮಾತೃ ಮೂಲ ಸಂಪ್ರದಾಯ ವೈದಿಕರ ಪಾದಾರ್ಪಣೆ ಮಾಡಿರುವುದು ಏಷ್ಟು ಸರಿ?
ಕಡಾರು ವಿಶ್ವನಾಥ ರೈ