ನಮ್ಮ ಕರಾವಳಿಗಳಲ್ಲಿ ಎಲ್ಲಿಯೂ ಎಳ್ಳು ಬೆಳೆಯುವುದನ್ನು ಕಾಣುವುದಿಲ್ಲ. ಅದರ ಎಣ್ಣೆ ತೆಗೆಯುವ ಮಿಲ್ಲುಗಳೂ ಇಲ್ಲ. ಕೇವಲ ನಮ್ಮ ದೇಶದಲ್ಲಿ ನಿತ್ಯ ದೀಪಗಳಿಗೆ ಬಳಸಬೇಕಾದ ಎಳ್ಳನ್ನು ಶೇಕಡ ಹತ್ತರಷ್ಟು ಬೆಳೆಯುವುದಿಲ್ಲ. ಬೆಳೆದ ಎಳ್ಳಿನ ಹೆಚ್ಚಿನ ಅಂಶ ತಿಂಡಿ ತಿನಿಸುಗಳಿಗೆ ಉಪಯೋಗವಾಗುತ್ತದೆ. ಆದರೆ ವಿವಿಧ ಆಕರ್ಷಕ ಪ್ಯಾಕೆಟ್ಟು ಬಾಟಲಿಗಳಲ್ಲಿ ಸಿಗುವ ಎಳ್ಳೆಣ್ಣೆಯ ಮೂಲ ಎಲ್ಲಿ? ಕೇವಲ ಒಂದು ಲೀಟರ್ ನ ಎಳ್ಳೆಣ್ಣೆ ಇದ್ದರೆ 10 ಲೀಟರ್ ಶುದ್ಧ ಎಳ್ಳೆಣ್ಣೆ ನಿರ್ಮಾಣ ಸಾಧ್ಯವೆಂದು ಕಂಡು ಹಿಡಿದಿದ್ದಾರೆ. ಅಂದರೆ ಪೆಟ್ರೋಲಿಯಂ ಶುದ್ದೀಕರಣ ಘಟಕಗಳಲ್ಲಿ ಶುದ್ದೀಕರಿಸಿ ಅಂತಿಮವಾಗಿ ಉಳಿಯುವ ಒಂದು ಬಿಳಿ ದ್ರವವನ್ನು ವಿವಿಧ ಖಾದ್ಯ ತೈಲ ಮಿಲ್ಲಿನವರು ಪಡೆದು ಅದಕ್ಕೆ ಬೇಕಾದ ಕೇವಲ ಶೇಕಡಾ 10 ರಷ್ಟು ಎಣ್ಣೆ ಬೆರೆಸಿದರೆ ನಮಗೆ ಬೇಕಾದ ಶುದ್ಧ ಎಳ್ಳೆಣ್ಣೆ ಕೊಬ್ಬರಿ ಎಣ್ಣೆ ಇತರ ವಿವಿಧ ಎಣ್ಣೆಗಳನ್ನು ಪಡೆಯಬಹುದಾಗಿದೆ. ಹೆಚ್ಚೇಕೆ ಇದೇ ರೀತಿಯಲ್ಲಿ ದನದ ತುಪ್ಪವನ್ನು ಪಡೆಯಬಹುದಾಗಿದೆ. ಮೇಲೆ ಸೂಚಿಸಿದ ಪೆಟ್ರೋಲಿಯಂ ನಿರುಪಯುಕ್ತ ದ್ರವವನ್ನು ಹಿಂದೆ ಸಮುದ್ರದ ಆಳಕ್ಕೆ ಡಂಪು ಮಾಡುತ್ತಿದ್ದರು. ಆದರೆ ಈಗ ನಾವು ಬಳಸುವ ಎಣ್ಣೆ ಕಾಳುಗಳ ಉತ್ಪಾದನೆ ಕಡಿಮೆ ಆಗುತ್ತಿದೆ. ಆದರೆ ಎಣ್ಣೆಯ ಬೇಡಿಕೆ ಹತ್ತು ಪಟ್ಟಾಗಿದೆ. ಅದಕ್ಕಾಗಿ ಈ ಕೃತಕ ಮಾಯಾ ಜಾಲಕ್ಕೆ ತೊಡಗಿದ್ದಾರೆ.
ಒಂದು ಕೆಜಿ ಎಳ್ಳಿಗೆ 400 ಕ್ಕೂ ಹೆಚ್ಚು ಕ್ರಯವಿದೆ. ಎಳ್ಳೆಣ್ಣೆ ಕೇವಲ 210 ರೂಪಾಯಿಗೆ ಲಭಿಸುತ್ತದೆ. ಒಂದು ಕೆ.ಜಿ. ಎಳ್ಳಿನಿಂದ ಹೆಚ್ಚೆಂದರೆ 600 ಗ್ರಾಂ ಎಳ್ಳೆಣ್ಣೆ ಪಡೆಯಬಹುದಾಗಿದೆ. ಆಗ ಎಳ್ಳೆಣ್ಣೆಯ ಕ್ರಯ ಒಂದು ಕೆ.ಜಿ. ಗೆ ರೂ.700 ರಷ್ಟು ಹೆಚ್ಚಾಗುತ್ತದೆ. ಇಷ್ಟು ಕ್ರಯ ಕೊಟ್ಟು ಯಾರಾದರೂ ಉರಿಸುವರೇ? ಹಾಗಿರುವಾಗ ನಾವು ತಿಳಿದೇ ದೇವರಿಗೆ ಕೃತಕ ಪೆಟ್ರೋಲಿಯಂ ಎಣ್ಣೆ ಉರಿಸಿ ಮೋಸ ಮಾಡುವುದಲ್ಲವೇ?ನಿನ್ನ ಶನಿ ದೋಷ ನಿವಾರಣೆಗೆ ಶುದ್ಧ ಎಳ್ಳೆಣ್ಣೆ ಕೊಡೆಂದು ದೈವಜ್ಞರು ಹೇಳಿದಂತೆ ಕೃತಕ ಎಣ್ಣೆ ಕೊಟ್ಟರೆ ಶನಿದೇವರು ತೃಪ್ತರಾಗುವರೇ? ಇದಕ್ಕೆ ಪರಿಹಾರ ಇಲ್ಲವೇ? ಖಂಡಿತಾ ಇದೆ. ನಮ್ಮ ದಕ್ಷಿಣ ಭಾರತದ ಎಲ್ಲಾ ದೇವಾಲಯಗಳ ದೀಪ ಹಾಗೂ ಅಡುಗೆಗೆ ಬೇಕಾದಷ್ಟು ತೆಂಗಿನಕಾಯಿ ಕೇವಲ ಕೇರಳದಲ್ಲಿ ಒಂದೇ ರಾಜ್ಯದಲ್ಲಿ ಬೆಳೆಯುತ್ತಾರೆ. ಅದರ ಕೊಬ್ಬರಿಯಿಂದ ನಾವೇ ಉತ್ಪಾದಿಸಿದ ಶುದ್ಧ ತೆಂಗಿನ ಎಣ್ಣೆಯನ್ನು ಎಲ್ಲಾ ದೇವಾಲಯ ಹಾಗೂ ದೈವಸ್ಥಾನಗಳಲ್ಲಿ ಬಳಸಲು ತಂತ್ರಿ ವರ್ಗದವರು ಒಪ್ಪಿಗೆ ಕೊಟ್ಟರೆ ದೈವ ದೇವರು ತೃಪ್ತರಾಗುವುದು ಮಾತ್ರವಲ್ಲ ಭಕ್ತರ ಆರೋಗ್ಯವು ಉಳಿಯುದರಲ್ಲಿ ಸಂಶಯವಿಲ್ಲ. ಇಷ್ಟು ಮಾತ್ರವಲ್ಲ ದೊಡ್ಡ ದೊಡ್ಡ ವಾಹನಗಳ ಗ್ಯಾರೇಜುಗಳಲ್ಲಿ ಸಂಗ್ರಹವಾದ ಮಡ್ಡಿ ಆಯಿಲ್ ಗಳನ್ನು ಎಣ್ಣೆ ಶುದ್ಧೀಕರಣಾಲಯಗಳಲ್ಲಿ 300 ಡಿಗ್ರಿ ಬಿಸಿ ಮಾಡಿದಾಗ ಮಡ್ಡಿ ಮುದ್ದೆಯಾಗಿ ಬಿಳಿ ದ್ರವ ಮಾತ್ರ ಸಿಗುತ್ತದೆ. ಅದನ್ನು ಖಾದ್ಯ ಎಣ್ಣೆಗಳಿಗೆ ಬಳಸುತ್ತಾರೆ. ಕೆಲವು ವರ್ಷಗಳ ಹಿಂದೆ ಒಂದೇ ಒಂದು ದೃಶ್ಯ ಮಾಧ್ಯಮದವರು ಹಾಲಿಲ್ಲದೇ ಬೆಣ್ಣೆ, ಬೆಣ್ಣೆಯಿಲ್ಲದೇ ತುಪ್ಪವನ್ನು ಉತ್ಪಾದಿಸುವ ಕಾರ್ಖಾನೆಗೆ ಹೋಗಿ ಚಿತ್ರೀಕರಿಸುವುದು ವರದಿಯಾಗಿದೆ. ಕಸಾಯಿ ಮಾರ್ಕೆಟುಗಳಲ್ಲಿ ದೊಡ್ಡ ದೊಡ್ಡ ಎಮ್ಮೆಗಳನ್ನು ಕೊಂದು ಮಾಂಸ ಮಾಡುವಾಗ ಅದರಲ್ಲಿ ಒಂದೊಂದರಿಂದ 15-20 ಕೆಜಿ ನಿರುಪಯುಕ್ತ ಕೊಬ್ಬು ದೊರಕುತ್ತದೆ. ಅದನ್ನು ಬಿಸಿ ಮಾಡಿ ತುಪ್ಪವನ್ನು, ಜಾನುವಾರುಗಳ ಎಲುಬಿನಿಂದ ಬೆಣ್ಣೆಯನ್ನು ಉತ್ಪಾದಿಸುವುದನ್ನು ನೋಡುವಂತಾಗಿದೆ. ಈ ರೀತಿ ಪಡೆದ ಕೊಬ್ಬಿನ ಎಣ್ಣೆಯನ್ನು ನಾವು ಸೇವಿಸುವ ತುಪ್ಪಕ್ಕೆ ಬೆರೆಸಿದರೆ ನಾವು ಬಹಳ ಪ್ರೀತಿಯಿಂದ ತಿನ್ನೋ ಬೇಕರಿ ಸಿಹಿ ತಿಂಡಿಗಳಾಗುತ್ತವೆ.
ಆದ್ದರಿಂದ ನಾಗರೀಕ ಸಮಾಜ ಅರೋಗ್ಯ ಪರವಾಗಿ ಚಿಂತಿಸಿ ಕೃತಕ ಎಣ್ಣೆಗಳ ಬದಲಾಗಿ ನಮ್ಮ ಕರಾವಳಿಯಲ್ಲಿ ಹೇರಳವಾಗಿ ಉತ್ಪಾದಿಸಲ್ಪಡಿಸುವ ತೆಂಗಿನ ಎಣ್ಣೆ, ಕೊಬ್ಬರಿ ಎಣ್ಣೆ ಉತ್ಪನ್ನಗಳೇ ದೇವಸ್ಥಾನ ಮತ್ತು ಎಲ್ಲಾ ಮನೆಗಳಲ್ಲಿ ಬಳಕೆಯಾದರೆ ನಮ್ಮ ಆರೋಗ್ಯ ಶೇಕಡ 60 ರಷ್ಟು ಇದರಿಂದ ಮಾತ್ರ ಸುಧಾರಣೆ ಸಾಧ್ಯವೆಂದು ಹಿರಿಯ ಶಾಸ್ತ್ರಜ್ಞ ಹಾಗೂ ಮಾನವತವಾದಿಯಾಗಿರುವ ಶ್ರೀ. ಬಿ.ಎಂ.ಹೆಗ್ಡೆಯವರು ದೇಶ ವಿದೇಶಗಳಲ್ಲಿ ಎಷ್ಟು ಸಾರಿ ತಿಳಿ ಹೇಳಿದರೂ ನಮ್ಮ ಜನತೆ ಎಚ್ಚೆತ್ತುಕೊಳ್ಳದಿರುವುದು ದುರಂತವೇ ಸರಿ.
ಕಡಾರು ವಿಶ್ವನಾಥ್ ರೈ